ಕನ್ನಡಪ್ರಭ ವಾರ್ತೆ ಮೂಡಲಗಿ
ಐದು ವರ್ಷಗಳಿಂದ ಭಾರತೀಯ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ ಪ್ರವೀಣ ಸುಭಾಸ ಖಾನಗೌಡ್ರ ಕಳೆದ ಬುಧವಾರ ಚೆನ್ನೈನ ಭಾರತೀಯ ನೌಕಾಪಡೆಯಲ್ಲಿ ಕರ್ತವ್ಯದಲ್ಲಿದಾಗ ಆಕಸ್ಮಿಕ ಗುಂಡು ತಗುಲಿ ಮರಣ ಹೊಂದಿದ್ದು, ಅವರ ಮೃತದೇಹ ಚನ್ನೈದಿಂದ ರಸ್ತೆ ಮಾರ್ಗವಾಗಿ ಗೋಕಾಕಕ್ಕೆ ತಲುಪಿತು.
ಗೋಕಾಕದಿಂದ ಬೆಳಗಾವಿಯ ಸೇನಾ ಕೇಂದ್ರ ವಾಹನದಲ್ಲಿ ತಾಲೂಕಿನ ಮಾಜಿ ಸೈನಿಕ ಸಂಘದವರಿಂದ ಬೈಕ ರ್‍ಯಾಲಿ ಮುಖಾಂತರ ಕಲ್ಲೋಳಿ ಪಟ್ಟಣಕ್ಕೆ ಆಗಮಿಸುತ್ತಿದಂತೆ ಪಟ್ಟಣದ ಶಾಲಾ ವಿದ್ಯಾರ್ಥಿಗಳು ಯೋಧನ ಪಾರ್ಥಿವ ಶರೀರ ಇದ್ದ ವಾಹನಕ್ಕೆ ಪುಷ್ಪವೃಷ್ಟಿ ಗೈದು ಪ್ರವೀಣ ಅಮರ ರಹೇ, ಜೈ ಜವಾನ್ ಜೈ ಕಿಸಾನ್, ಒಂದೇ ಮಾತರಂ ಎಂಬ ಜಯ ಘೋಷ ವಾಕ್ಯಗಳೊಂದಿಗೆ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದವರಿಗೆ ಬರಮಾಡಿಕೊಂಡರು. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾವರ್ಜನಿಕರಿಗೆ ಯೋಧನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಮುಗಿಲು ಮುಟ್ಟಿದ ಅಕ್ರಂದನ:
ಶ್ರದ್ಧಾಂಜಲಿ ಸಭೆ:
ಅಶೋಕ ಪೂಜೇರಿ ಮಾತನಾಡಿ, ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಯೋಧ ಪ್ರವೀಣ ಖಾನಗೌಡ್ರನ ತ್ಯಾಗದ ಗುಣಗಾನ ಮಾಡಿದರು.
ಯೋಧನ ಪಾರ್ಥಿವ ಶರೀರಕ್ಕೆ ಮೂಡಲಗಿ ತಾಲೂಕು ಆಡಳಿತದಿಂದ ತಹಸೀಲ್ದಾರ್ ಶಿವಾನಂದ ಬಬಲಿ, ಮುಖಂಡರಾದ ಸರ್ವೋತ್ತಮ ಜಾರಕಿಹೊಳಿ, ಅಶೋಕ ಪೂಜೇರಿ, ಬಸಗೌಡ ಪಾಟೀಲ, ಅಜೀತ ಬೆಳಕೂಡ, ಬಸವರಾಜ ಕಡಾಡಿ, ಮಹಾಂತೇಶ ಕಪ್ಪಲಗುದಿ, ಬಸವಂತ ದಾಸನಾಳ , ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಮೂಡಲಗಿ ತಾಲೂಕು ಘಟಕದ ಅಧ್ಯಕ್ಷ ಚರಂತಯ್ಯ ಮಳ್ಳಿಮಠ ಮತ್ತು ಸದಸ್ಯರು, ಪಟ್ಟಣದ ಶಾಲಾ-ಕಾಲೇಜ ವಿದ್ಯಾರ್ಥಿಗಳು, ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕುಟುಂಬ ವರ್ಗದವರು, ಸ್ನೇಹಿತರು, ಹಿತೈಷಿಗಳು, ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.
ಚೆನ್ನೈ ಭಾರತೀಯ ನೌಕಾ ಪಡೆಯ ಕಮಾಂಡರ್ ಮಾಯಾಂಕ ಬಾಗೂರ, ಬೆಳಗಾವಿ ಮಹಾರ ರೆಜಿಮೆಂಟ್ ಸುಬೇದಾರ ಸುಭಾಸ ಗೂಡರ ಮೃತ ಯೋಧನ ಕುಟುಂಬದವರಿಗೆ ಭಾರತ ಧ್ವಜವನ್ನು ಹಸ್ತಾಂತರಿಸಿದರು.