ಕೆಐಎಡಿಬಿ ಭೂಮಿ ಹಂಚಿಕೆ ಅಕ್ರಮ: ರೈತರ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Nov 18, 2026, 01:45 AM IST
16ಎಚ್ಎಸ್ಎನ್6 :  | Kannada Prabha

ಸಾರಾಂಶ

ಇನ್ನೊಂದೆಡೆ ಸ್ಥಳೀಯ ಉದ್ಯಮಿಯಾದ ನಾನು ಕೈಗಾರಿಕಾ ಉದ್ದೇಶಕ್ಕಾಗಿ ೨೦೨೦ರ ನವೆಂಬರ್ ೨೫ರಂದು ಎರಡು ಎಕರೆ ಜಮೀನು ಮಂಜೂರು ಮಾಡಿಸಿಕೊಂಡು ಸಂಪೂರ್ಣ ಹಣ ಪಾವತಿಸಿದ್ದರೂ, ಅಧಿಕಾರಿಗಳು ಇಂದಿಗೂ ಜಮೀನು ಸ್ವಾಧೀನ ನೀಡಿಲ್ಲ. ಬಳಿಕ ೨೦೨೬ರ ಫೆಬ್ರವರಿ ೨೬ರಂದು ಪ್ಲಾಟ್ ನಂ. ೫೧ರಲ್ಲಿ ಎರಡು ಎಕರೆ ಜಮೀನು ಮರುಮಂಜೂರು ಮಾಡಿದ್ದರೂ ಅದರ ಸ್ವಾಧೀನ ಈವರೆಗೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಈ ಹಿಂದೆ ೨೫೦ ಎಕರೆ ಜಮೀನು ಪಡೆದು ನಿಗದಿತ ಉದ್ದೇಶ ಈಡೇರಿಸುವಲ್ಲಿ ವಿಫಲವಾದ ಆಪ್ಟೋ ಇನ್‌ಫ್ರಾಸ್ಟ್ರಕ್ಚರ್‌ ಲಿ. ಸಂಸ್ಥೆಯ ನಿರ್ದೇಶಕ ಮಂಜೇಗೌಡ ಅವರಿಗೆ ೪೦ಎಕರೆ ಜಮೀನನ್ನು ಮರುಹಂಚಿಕೆ ಮಾಡಿರುವುದನ್ನು ವಿರೋಧಿಸಿ, ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಹಾಗೂ ಸ್ಥಳೀಯ ಉದ್ಯಮಿಗಳು ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಕೆಐಎಡಿಬಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸ್ಥಳೀಯ ಉದ್ಯಮಿ ಎಸ್.ಜಿ. ಮಧು, ಆಪ್ಟೋ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ಈ ಹಿಂದೆ ೨೫೦ ಎಕರೆ ಜಮೀನು ಹಂಚಿಕೆ ಮಾಡಲಾಗಿತ್ತು. ಆದರೆ ಸಂಸ್ಥೆ ಕೈಗಾರಿಕೆ ಸ್ಥಾಪಿಸದೆ ಜಮೀನನ್ನು ಬಳಕೆಯಾಗದಂತೆ ಉಳಿಸಿಕೊಂಡಿತ್ತು. ೨೦೨೩ರ ಜೂನ್ ೧೯ರಂದು ಸದರಿ ಜಮೀನನ್ನು ಕೆಐಎಡಿಬಿಗೆ ಹಿಂದಿರುಗಿಸುವ ಸಂಬಂಧ ರದ್ದತಿ ಪತ್ರ ನೋಂದಣಿಯಾಗಿದೆ. ಆದರೂ ಸಂಸ್ಥೆ ನಿರ್ದೇಶಕರಿಗೆ ಮತ್ತೆ ೪೦ ಎಕರೆ ಜಮೀನು ಮರುಹಂಚಿಕೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಇನ್ನೊಂದೆಡೆ ಸ್ಥಳೀಯ ಉದ್ಯಮಿಯಾದ ನಾನು ಕೈಗಾರಿಕಾ ಉದ್ದೇಶಕ್ಕಾಗಿ ೨೦೨೦ರ ನವೆಂಬರ್ ೨೫ರಂದು ಎರಡು ಎಕರೆ ಜಮೀನು ಮಂಜೂರು ಮಾಡಿಸಿಕೊಂಡು ಸಂಪೂರ್ಣ ಹಣ ಪಾವತಿಸಿದ್ದರೂ, ಅಧಿಕಾರಿಗಳು ಇಂದಿಗೂ ಜಮೀನು ಸ್ವಾಧೀನ ನೀಡಿಲ್ಲ. ಬಳಿಕ ೨೦೨೬ರ ಫೆಬ್ರವರಿ ೨೬ರಂದು ಪ್ಲಾಟ್ ನಂ. ೫೧ರಲ್ಲಿ ಎರಡು ಎಕರೆ ಜಮೀನು ಮರುಮಂಜೂರು ಮಾಡಿದ್ದರೂ ಅದರ ಸ್ವಾಧೀನ ಈವರೆಗೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್‌ ೧೩ರಂದು ನಡೆದ ಘಟನೆ ಕುರಿತು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಂಜೇಗೌಡ ಮತ್ತು ಪವನ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಮುಖ್ಯಮಂತ್ರಿ, ಕೈಗಾರಿಕಾ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಕೆಐಎಡಿಬಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸೋಮಣ್ಣ, ಪ್ರವೀಣ್, ಆನಂದ್, ಗಿರೀಶ್, ಕೃಷ್ಣ, ಮೋಹನ್, ಕುಮಾರ್‌ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ ಬೃಹತ್‌ ಜಾಥಾ
ಜಿಪಂ-ತಾಪಂ ಚುನಾವಣೆಯತ್ತ ರಾಜಕೀಯ ಪಕ್ಷಗಳ ಚಿತ್ತ