ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಮಾಜಿ ಶಾಸಕ ನನ್ನ ವಿರುದ್ಧ ನಿರಂತರವಾಗಿ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದರೂ ಕ್ಷೇತ್ರದ ಘನತೆಯ ದೃಷ್ಟಿಯಿಂದ ಈವರೆಗೂ ಮೌನವಾಗಿದ್ದೆ. ಇಂದಿಲ್ಲಿ ಈ ಹೇಳಿಕೆ ನೀಡುತ್ತಿರುವ ಬಗ್ಗೆ ಕ್ಷೇತ್ರದ ಕ್ಷಮೆ ಕೇಳುತ್ತೇನೆ. ನನ್ನ ಯಶಸನ್ನು ಸಹಿಸದೇ ನನ್ನನ್ನು ಮುಗಿಸುವುದಕ್ಕೂ ಸಿದ್ಧರಾಗಿರುವ ಕಿಮ್ಮನೆ ವಿರುದ್ಧ ಕೋರ್ಟಿಗೂ ಹೋಗುತ್ತೇನೆ ಎಂದು ಮಂಗಳವಾರ ಪಟ್ಟಣದ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ಆಗಿರುವ ಸಾಧನೆಯನ್ನು ಜೀರ್ಣಿಸಿಕೊಳ್ಳಲಾಗದೇ ಸುಳ್ಳು ಆರೋಪ ಮಾಡುತ್ತಿರುವ ಅವರ ಹತಾಶ ಸ್ಥಿತಿಯನ್ನು ಕಂಡು ಕನಿಕರವಾಗುತ್ತಿದೆ. ಸರ್ಕಾರಿ ಭೂಮಿ, ದೇವಸ್ಥಾನಗಳ ಹುಂಡಿ ಹಣ, ಶಾಲಾ ಕಾಲೇಜುಗಳ ನಾಟಾ, ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರ ನಿವೇಶನಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ತಮ್ಮ ಪಟಾಲಾಂಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದರು.ಕೊಟ್ಟ ಕುದುರೆ ಏರಲಾಗದವ:
ಡಿ.ಕೆ .ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆದ ಮೇಲೆ ಪೂರ್ಣ ಆತ್ಮ ವಿಶ್ವಾಸವನ್ನು ಕಳೆದುಕೊಂಡಿದ್ದು ಮುಂಬರುವ ಚುನಾವಣೆಗೆ ಅವಕಾಶ ಸಿಗುವ ಸಾಧ್ಯತೆಯೂ ಇಲ್ಲ. ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪ್ರಾಣ ಕಳೆದುಕೊಂಡವರಿದ್ದಾರೆ. ಕೊಟ್ಟ ಕುದುರೆ ಏರಲಾಗದವ ಎಂಬುದನ್ನೂ ಪ್ರಸ್ತುತ ಪಡಿಸಿರುವ ಕಿಮ್ಮನೆಗೆ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರು ಮಾಡುತ್ತಿರುವ ಕೆಲಸದ ಬಗ್ಗೆಯೂ ಕಿರಿಕಿರಿಯಾಗುತ್ತಿದೆ ಎಂದು ಹೇಳಿದರು.
ಭಿಂತಳ ಗ್ರಾಮದಲ್ಲ್ಲಿ ನನ್ನ ಮಗ ಕೊಂಡಿರುವ ಜಮೀನು ಆತನ ದುಡಿಮೆಯ ಹಣದಿಂದ. ಈ ಗ್ರಾಮದ ಜನರ ಕೋರಿಕೆಯಂತೆ ರಸ್ತೆ ನಿರ್ಮಾಣ ಮಾಡಲಾಗಿದೆ. ಕ್ರಿಮಿನಲ್ ಹಿಂಬಾಲಕರಿಗೆ ಬೆಂಗಾವಲಾಗಿ ತಾನು ಪ್ರಾಮಾಣಿಕ ಎಂದು ಪ್ರಚಾರ ಮಾಡಿಕೊಳ್ಳುತ್ತಿರುವ ಆತ್ಮರತಿ ಇವರದ್ದು. ಇವರ ಬುದ್ಧಿ ಹಿಡಿಸದ ಕಾರಣ ಮಗನೂ ಇವರ ಜೊತೆ ಇಲ್ಲಾ. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಮಾನಸಿಕ ಹಿಡಿತವನ್ನು ಕಳೆದುಕೊಂಡಿರುವ ಇವರ ಸ್ಥಿತಿ ಅಪಾಯಕಾರಿಯಾಗಿದ್ದು ವೈದ್ಯರ ಚಿಕಿತ್ಸೆ ಅಗತ್ಯವಾಗಿದೆ ಎಂದು ಟೀಕಿಸಿದರು.