ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಇ ಖಾತಾ ಅಭಿಯಾನ

KannadaprabhaNewsNetwork | Published : Mar 2, 2025 1:19 AM

ಸಾರಾಂಶ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನ ಪ್ರಾರಂಭವಾಗಿದ್ದು, ಎ ರಿಜಿಸ್ಟರ್ ಹಾಗೂ ಬಿ ರಿಜಿಸ್ಟರ್ ಮೂಲಕ ದಾಖಲಿಸಿಕೊಂಡು ಇ-ಖಾತೆ ಪಡೆಯಬಹುದು. ಕಟ್ ಕನ್ವರ್ಷನ್ ಆದ ಸೊತ್ತುಗಳಿಗೆ ಬಿ ರಿಜಿಸ್ಟರ್ ಮೂಲಕ ದಾಖಲಿಸಿಕೊಂಡು ಇ-ಖಾತೆ ಪಡೆಯಲು ಅವಕಾಶವಿದ್ದು ಸುತ್ತೋಲೆಯ ಪ್ರಕಾರ ಮೇ ೧೦ ಕೊನೆಯ ದಿನವಾಗಿದೆಯೆಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ರಾಜ್ಯ ಸರ್ಕಾರದ ಆದೇಶದಂತೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನ ಪ್ರಾರಂಭವಾಗಿದ್ದು, ಎ ರಿಜಿಸ್ಟರ್ ಹಾಗೂ ಬಿ ರಿಜಿಸ್ಟರ್ ಮೂಲಕ ದಾಖಲಿಸಿಕೊಂಡು ಇ-ಖಾತೆ ಪಡೆಯಬಹುದು.

ಕಟ್ ಕನ್ವರ್ಷನ್ ಆದ ಸೊತ್ತುಗಳಿಗೆ ಬಿ ರಿಜಿಸ್ಟರ್ ಮೂಲಕ ದಾಖಲಿಸಿಕೊಂಡು ಇ-ಖಾತೆ ಪಡೆಯಲು ಅವಕಾಶವಿದ್ದು ಸುತ್ತೋಲೆಯ ಪ್ರಕಾರ ಮೇ ೧೦ ಕೊನೆಯ ದಿನವಾಗಿದೆಯೆಂದು ಮುಖ್ಯಾಧಿಕಾರಿ ಜಯಶಂಕರ್ ಪ್ರಸಾದ್ ಎಸ್ ತಿಳಿಸಿದ್ದಾರೆ.

ಬಿ ರಿಜಿಸ್ಟರ್ ಮೂಲಕ ಖಾತಾ ಪಡೆಯಲು ೨೦೨೪ರ ಸೆ. ೧೦ ಮೊದಲು ನೊಂದಾವಣಿಯಾದ ಆಸ್ತಿಗೆ ಸಂಬಂಧಿಸಿದ ಸೊತ್ತಿಗೆ ಮಾಲಿಕತ್ವ ಸಾಬೀತು ಪಡಿಸುವ ಮಾರಾಟಪತ್ರ/ದಾನಪತ್ರ/ವಿಭಾಗಪತ್ರ/ಹಕ್ಕು ಖುಲಾಸೆ ಪತ್ರ ಪ್ರಸಕ್ತ ಸಾಲಿನವರೆಗಿನ ಋಣಭಾರ ಪ್ರಮಾಣ ಪತ್ರ (ಇ.ಸಿ)ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲಿಕರ ಪೋಟೋ, ಸ್ವತ್ತಿನ ಪೋಟೋ, ಮಾಲಿಕರ ಗುರುತಿನ ದಾಖಲೆ ಪ್ರತಿ ನೀಡಬೇಕಾಗಿದೆ.

ಆಸ್ತಿ ಕಣಜದಲ್ಲಿ ೮೦೦೬ ಆಸ್ತಿಗಳು ದಾಖಲಾಗಿದ್ದು, ಈ ಪೈಕಿ ೩೦೬೪ ಆಸ್ತಿಗಳ ಮಾಲಕರು ದಾಖಲೆಗಳನ್ನು ನೀಡಿ ಇ-ಖಾತಾ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಬಾಕಿ ಉಳಿದಿರುವ ೪೯೨೫ ಆಸ್ತಿಗಳ ದಾಖಲೆಗಳನ್ನು ಮಾಲಿಕರು ಸಂಬಂಧಿಸಿದ ಆಸ್ತಿ ಮಾಲಿಕರು ಆನ್ಲೈನ್ ವ್ಯವಸ್ಥೆಯಲ್ಲಿ ಅಥವಾ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಪರಿಶೀಲನೆ ಸಂದರ್ಭ ತಿದ್ದುಪಡಿಗಳು ಇದ್ದರೆ ಪಟ್ಟಣ ಪಂಚಾಯಿತಿಗೆ ತಿಳಿಸಿದಲ್ಲಿ ಸರಿಪಡಿಸಲು ಅನುಕೂಲವಾಗಲಿದೆ.

ಏಳು ದಿನಗಳಲ್ಲಿ ಇ-ಖಾತೆ ಲಭ್ಯ ಎಲ್ಲ ದಾಖಲೆಗಳನ್ನು ಏಕಕಾಲದಲ್ಲಿ ಒದಗಿಸಿದಲ್ಲಿ ಸಕಾಲದಲ್ಲಿ ಮೂಲಕ ಏಳು ದಿನಗಳಲ್ಲಿ ಅರ್ಜಿ ವಿಲೇವಾರಿಯಾಗಿ ಇ-ಖಾತೆ ಫಲಾನುಭವಿಗಳಿಗೆ ಲಭಿಸಲಿದೆ. ಬಿ ರಿಜಿಸ್ಟರ್‌ನಲ್ಲಿ ದಾಖಲಿಸುವ ಸೊತ್ತುಗಳಿಗೆ ಮೊದಲ ಬಾರಿ ಡಬ್ಬಲ್ ಟ್ಯಾಕ್ಸ್ ಬೀಳಲಿದ್ದು ಮುಂದಿನ ವರ್ಷದಿಂದ ಸಿಂಗಲ್ ಟ್ಯಾಕ್ಸ್ ಆಗಲಿದೆ. ಪ್ರಸ್ತುತ ೧೯೩ ಸ್ವತ್ತುಗಳಿಗೆ ಡಬ್ಬಲ್ ಟ್ಯಾಕ್ಸ್ ವಿಧಿಸಲಾಗಿದ್ದು, ಈ ಆಸ್ತಿ ಮಾಲೀಕರು ಬಿ ರಿಜಿಸ್ಟರಿನಲ್ಲಿ ದಾಖಲಿಸಿ ಇ-ಖಾತೆ ಪಡೆಯಬಹುದು ಎಂದು ಮುಖ್ಯಾಧಿಕಾರಿ ಜಯಶಂಕರ್ ಪ್ರಸಾದ್ ಎಸ್ ತಿಳಿಸಿದ್ದಾರೆ.

Share this article