ಕಿನ್ನಿಗೋಳಿ ಯಕ್ಷಲಹರಿ: ತಾಳಮದ್ದಳೆ ಸ್ಪರ್ಧಾ ಸಪ್ತಾಹ, ಸಂಸ್ಮರಣೆ

KannadaprabhaNewsNetwork |  
Published : Aug 04, 2025, 12:30 AM IST
ಕಿನ್ನಿಗೋಳಿ ಯಕ್ಷಲಹರಿ ತಾಳಮದ್ದಳೆ ಸ್ಪರ್ಧಾ ಸಪ್ತಾಹ ಸಂಸ್ಮರಣೆ | Kannada Prabha

ಸಾರಾಂಶ

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗಪುರುಷ ಸಂಯೋಜನೆಯಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ಯಕ್ಷಲಹರಿ ತಾಳಮದ್ದಳೆ ಸ್ಪರ್ಧಾ ಸಪ್ತಾಹ-2025 ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಳುನಾಡಿನ ಕಲಾ ಪ್ರಕಾರ ಯಕ್ಷಗಾನ ತಾಳಮದ್ದಳೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಕಿನ್ನಿಗೋಳಿಯ ಯಕ್ಷ ಲಹರಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ-ಅಪರೇಟಿವ್‌ ಸೊಸೈಟಿ ಅಧ್ಯಕ್ಷ ವಸಂತ್‌ ಬೆರ್ನಾಡ್ ಹೇಳಿದರು.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಕಿನ್ನಿಗೋಳಿ ಮತ್ತು ಯುಗಪುರುಷ ಸಂಯೋಜನೆಯಲ್ಲಿ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಯಕ್ಷಲಹರಿ ತಾಳಮದ್ದಳೆ ಸ್ಪರ್ಧಾ ಸಪ್ತಾಹ-2025 ಕಾರ್ಯಕ್ರಮದಲ್ಲಿ ಮಾತಾನಡಿದರು.

ನಿವೃತ್ತ ಪ್ರಾಚಾರ‍್ಯ ವೈ.ಎನ್. ಸಾಲ್ಯಾನ್, ಪ್ರಸಂಗಕರ್ತ ದಿ. ನಾರಾಯಣ ಪಿ. ಶೆಟ್ಟಿ ಕುಬೆವೂರು ಅವರ ಸಂಸ್ಮರಣಾ ಭಾಷಣಗೈದರು. ಈ ಸಂದರ್ಭ ಹಿಮ್ಮೇಳವಾದಕ ಸಂಘಟಕ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಸನ್ಮಾನಿಸಲಾಯಿತು.

ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಕಿನ್ನಿಗೋಳಿ ಉದ್ಯಮಿ ದಿನೇಶ್ ಚಾರ್ಯ, ಕಿನ್ನಿಗೋಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ, ಸಾಫ್ಟ್‌ವೇರ್‌ ಎಂಜಿನಿಯರ್ ಅವಿನಾಶ್ ಶೆಟ್ಟಿ ಮೂಲ್ಕಿ, ಉದ್ಯಮಿ ರವಿಶಂಕರ ಮಲ್ಯ, ಯುಗಪುರುಷದ ಭುವನಾಭಿರಾಮ ಉಡುಪ, ಅಶ್ವಥ ರಾವ್, ಸುಧಾಕರ ಕುಲಾಲ್, ಭವಿಷ್ ಶೆಟ್ಟಿ, ಆಕಾಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷಲಹರಿಯ ಕಾರ್ಯದರ್ಶಿ ವಸಂತ ದೇವಾಡಿಗ ಸ್ವಾಗತಿಸಿದರು. ದಿನಕರ ಮೆಂದ ಸನ್ಮಾನ ಪತ್ರ ವಾಚಿಸಿದರು. ವಿನಯ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ