ಮೂಲ್ಕಿ: ಕಿನ್ನಿಗೋಳಿಯ ಯಕ್ಷಲಹರಿ, ಯುಗಪುರುಷದ ಆಶ್ರಯದಲ್ಲಿ ಯಕ್ಷಲಹರಿಯ ೩೪ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯಕ್ಷಗಾನ ತಾಳಮದ್ದಲೆ ಸಪ್ತಾಹ ‘ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇಯುಗೇ’ ಜು.29ರಿಂದ ಆ.4ರ ತನಕ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಸಂಜೆ ನಡೆಯಲಿದೆ.
29ರಂದು ಶಾಸಕ ಉಮಾನಾಥ ಕೋಟ್ಯಾನ್ ತಾಳಮದ್ದಳೆ ಕೂಟವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತಿತರರ ಉಪಸ್ಥಿತಿಯಲ್ಲಿ ಯಕ್ಷಲಹರಿಯ ಸ್ಥಾಪಕಧ್ಯಕ್ಷ ದಿ. ಶ್ರೀನಿವಾಸ ಭಟ್ ಅವರ ಸಂಸ್ಮರಣೆ ನಡೆಯಲಿದೆ. ಹಿರಿಯ ಕಲಾವಿದ ಶಂಕರನಾರಯಣ ಮೈರ್ಪಾಡಿ ಹಾಗೂ ಕಲಾ ಸಂಘಟಕರ ನೆಲೆಯಲ್ಲಿ ಜಯಂತ ಅಮೀನ್ ಕರೆಕಾಡು ಅವರನ್ನು ಗೌರವಿಸಲಾಗುವುದು. ಬಳಿಕ ಮಂಗಲ್ಪಾಡಿಯ ಯಕ್ಷ ಮೌಕ್ತಿಕ ಮಹಿಳಾ ತಂಡದಿಂದ ಮತ್ಸ್ಯಾವತಾರ ಯಕ್ಷಗಾನ ಪ್ರಸಂಗ ನಡೆಯಲಿದೆ.ಜು.೩೦ರಂದು ಮೂಡಬಿದಿರೆಯ ಎಂ. ಸಿ. ಸಿ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕ ಅನಂತ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ ಹಿರಿಯ ಕಲಾವಿದ ದಿ. ಯು. ಗೋಪಾಲ ಶೆಟ್ಟಿ ಅವರ ಸ್ಮಂಸ್ಮರಣೆ ನಡೆಯಲಿದೆ. ಕಲಾವಿದರ ನೆಲೆಯಲ್ಲಿ ಬಾಳ ದಯಾನಂದ ಶೆಟ್ಟಿ ಅವರನ್ನು ಗೌರವಿಸಲಾಗುವುದು. ಜಯರಾಮ ದೇವಸ್ಯ ಮತ್ತು ಬಳಗದಿಂದ ಕೂರ್ಮಾವತಾರ ಪ್ರಸಂಗ ಪ್ರಸ್ತುತಿ ನಡೆಯಲಿದೆ.
ಜು.31ರಂದು ಸುರಗಿರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕ ವೆಂಕಟರಮಣ ಆಸ್ರಣ್ಣರ ಉಪಸ್ಥಿತಿಯಲ್ಲಿ ಶಿಮಂತೂರು ಡಾ. ನಾರಾಯಣ ಶೆಟ್ಟಿ ಅವರ ಸಂಸ್ಮರಣೆ ನಡೆಯಲಿದೆ. ಹಿರಿಯ ಕಲಾವಿದ ರಮೇಶ್ ಸಪಳಿಗ ಅವರಿಗೆ ಸನ್ಮಾನ ನಡೆಯಲಿದೆ. ಸರಯೂ ಬಾಲ ಯಕ್ಷ ವೃಂದ ಕೋಡಿಕಲ್ ಮಂಗಳೂರು ಅವರಿಂದ ವರಾಹ ಅವತಾರ ಪ್ರಸಂಗ ಪ್ರಸ್ತುತಿ ನಡೆಯಲಿದೆ.ಆ.1 ರಂದು ಮೂಲ್ಕಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಉಪಸ್ಥಿತಿಯಲ್ಲಿ ಪ್ರಸಂಗಕರ್ತ ದಿ. ಸುಬ್ರಹ್ಮಣ್ಯ ಭಟ್ ಚಿತ್ರಾಪುರ ಸಂಸ್ಮರಣೆ ನಡೆಯಲಿದೆ. ಹಿರಿಯ ಕಲಾವಿದ ಶರತ್ ಕುಮಾರ್ ಅವರನ್ನು ಕಲಾವಿದರ ನೆಲೆಯಲ್ಲಿ ಗೌರವಿಸಲಾಗುವುದು. ಬಳಿಕ ಉಳ್ಳಾಲ ಮಹಾಗಣಪತಿ ಯಕ್ಷಗಾನ ತಂಡದಿಂದ ನರಸಿಂಹ ಅವತಾರ ಪ್ರಸಂಗ ಪ್ರಸ್ತುತಿ ನಡೆಯಲಿದೆ.
ಆ.2ರಂದು ಶ್ರೀ ಕ್ಷೇತ್ರ ಎಳತ್ತೂರು ಆಡಳಿತ ಮೊಕ್ತೇಸರ ಸಂತೋಷ ಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕ ಶ್ರೀಹರಿನಾರಾಯಣ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ ಕೆಂಚನಕೆರೆ ದೂಜಯಾನೆ ಬೂಬ ಶೆಟ್ಟಿ ಅವರ ಸಂಸ್ಮರಣೆ ನಡೆಯಲಿದೆ. ಹಿರಿಯ ಕಲಾವಿದ ಮನೋಹರ ಕುಂದರ್ ಅವರನ್ನು ಗೌರವಿಸಲಾಗುವುದು. ಬಳಿಕ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಕಲಾ ತಂಡದಿಂದ ವಾಮನ ಅವತಾರ ಪ್ರಸಂಗ ಪ್ರಸುತ್ತಿ ನಡೆಯಲಿದೆ.ಆ.3ರಂದು ಪುನರೂರು ದೇವಪ್ರಸಾದ್ ಪುನರೂರು ಅಧ್ಯಕ್ಷತೆಯಲ್ಲಿ ಕಟೀಲಿನ ವಾಸುದೇವ ಆಸ್ರಣ್ಣ ಉಪಸ್ಥಿತಿಯಲ್ಲಿ ಹಿರಿಯ ಪ್ರಸಂಗಕರ್ತ ದಿ. ನಾರಾಯಣ ಪಿ. ಶೆಟ್ಟಿ ಕುಬೆವೂರು ಅವರ ಸಂಸ್ಮರಣೆ ನಡೆಯಲಿದೆ. ಹಿರಿಯ ಕಲಾವಿದ ಪಾವಂಜೆ ಶಿವರಾಮ ಭಟ್ ಅವರನ್ನು ಗೌರವಿಲಾಗುವುದು. ಯಕ್ಷಭಾರತಿ ನಿರ್ಚಾಲು ಅವರಿಂದ ಪರಶುರಾಮ ಅವತಾರ ಪ್ರಸಂಗ ನಡೆಯಲಿದೆ.
ಆ.4 ರಂದು ಸಮಾರೋಪ ಹಾಗೂ ಸನ್ಮಾನ ನಡೆಯಲಿದೆ. ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ದಿ.ಪಿ. ಸತೀಶ್ ರಾವ್ ಅವರ ಸಂಸ್ಮರಣೆ ಹಾಗೂ ಕಲಾವಿದ ರವಿ ಅಲೆವೂರಾಯ ವರ್ಕಾಡಿ ಹಾಗೂ ಬಾಲಕೃಷ್ಣ ದೇವಾಡಿಗ , ಕಲಾಪೋಷಕ ಜೋಕಿಂ ಕೊರೆಯ ನಿಡ್ಡೋಡಿ ಅವರನ್ನು ಗೌರವಿಸಲಾಗುವುದು. ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಬಳಿಕ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ರಾಮಾವತಾರ, ಕೃಷ್ಣವತಾರ ತಾಳಮದ್ದಳೆ ಪ್ರಸ್ತುತಿ ನಡೆಯಲಿದೆ ಎಂದು ಯಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ಹಾಗೂ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ತಿಳಿಸಿದ್ದಾರೆ.