ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು

KannadaprabhaNewsNetwork |  
Published : Sep 11, 2026, 02:45 AM IST
10ಕಿಶನ್‌ | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರನ್ನು ನೇಮಕ ಮಾಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಈ ನೇಮಕಾತಿ ಆದೇಶ ಹೊರಡಿಸಿದ್ದು, ಜಿಲ್ಲೆಯ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ ತುಂಬುವ ಜವಾಬ್ದಾರಿ ಇದೀಗ ಕಿಶನ್ ಹೆಗ್ಡೆ ಅವರ ಹೆಗಲೇರಿದೆ. ಕಿಶನ್ ಹೆಗ್ಡೆ ಅವರುಈ ಹಿಂದೆ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ, ಬಳಿಕ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರನ್ನು ನೇಮಕ ಮಾಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಈ ನೇಮಕಾತಿ ಆದೇಶ ಹೊರಡಿಸಿದ್ದು, ಜಿಲ್ಲೆಯ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ ತುಂಬುವ ಜವಾಬ್ದಾರಿ ಇದೀಗ ಕಿಶನ್ ಹೆಗ್ಡೆ ಅವರ ಹೆಗಲೇರಿದೆ. ಕಿಶನ್ ಹೆಗ್ಡೆ ಅವರುಈ ಹಿಂದೆ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ, ಬಳಿಕ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕಳೆದ ಬಾರಿಯೇ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಕೆಲವೇ ದಿನಗಳಲ್ಲಿ ಅವರ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು. ಈ ಬಾರಿ ಮತ್ತೇ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ವೃತ್ತಿಯಲ್ಲಿ ಬಸ್ಸು ಸಾರಿಗೆ ಉದ್ಯಮಿಯಾಗಿರುವ ಅವರು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಬಹಳ ಕಾಲ ಕೆಲಸ ಮಾಡಿದ್ದರು.

ನಾಯಕರಲ್ಲ, ಕಾರ್ಯಕರ್ತರ ಅಗತ್ಯವಿದೆ:

ತಮ್ಮನ್ನು ಜಿಲ್ಲಾಧ್ಯಕ್ಷರನ್ನಾದಿ ನಿಯೋಜಿಸಲಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಿಶನ್ ಹೆಗ್ಡೆ ಕೊಳ್ಕೆಬೈಲು, ಈ ಬಾರಿ ಪಕ್ಷದ ಪದಾಧಿಕಾರಿಗಳನ್ನು ಕಾರ್ಯಕರ್ತರ ಸಲಹೆ ಪಡೆದು ಆಯ್ಕೆ ಮಾಡಲಾಗಿದೆ. ಆದ್ದರಿಂದ ತನ್ನನ್ನು ಕಾರ್ಯಕರ್ತರು ಆಯ್ಕೆ ಮಾಡಿದ್ದಾರೆ. ಕಾರ್ಯಕರ್ತರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ, ಪಕ್ಷಕ್ಕೆ ನಾಯಕರದ್ದಲ್ಲ, ಕಾರ್ಯಕರ್ತರ ಅಗತ್ಯವಿದೆ ಎಂದು ಕಿಶನ್ ಹೆಗ್ಡೆ ಹೇಳಿದ್ದಾರೆ.

ಸವಾಲು ಇದೆ, ಸ್ವೀಕರಿಸುತ್ತೇನೆ:

ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟುವ ಸವಾಲು ದೊಡ್ಡದಿದೆ, ಅದನ್ನು ಸ್ವೀಕರಿಸುತ್ತೇನೆ, ಇದುವರೆಗೆ ಕಾರ್ಯಕರ್ತರನ್ನು ಬಡಿದೆಬ್ಬಿಸುವ ಕೆಲಸ ನಾವು ನಾಯಕರು ಮಾಡಬೇಕಿತ್ತು, ಮಾಡಿಲ್ಲ, ಅದು ಕಾರ್ಯಕರ್ತರ ತಪ್ಪಲ್ಲ, ನಮ್ಮ ತಪ್ಪು, ಅದನ್ನು ಸರಿ ಪಡಿಸುತ್ತೇನೆ, ಪಕ್ಷ ನನಗೆ ಅಧಿಕಾರವಲ್ಲ, ಜವಾಬ್ದಾರಿ ನೀಡಿದೆ ಎಂದವರು ಹೇಳಿದ್ದಾರೆ.2028ರಲ್ಲಿ ಕಾಂಗ್ರೆಸ್ ಶಾಸಕರ ಸಾಲು:

ಜಿಲ್ಲೆಯಲ್ಲಿ ಪ್ರಸ್ತುತ ಎಲ್ಲಾ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಸೋತಿದ್ದೇವೆ, ಪಕ್ಷ ಸೋತಿರಬಹುದು, ಸತ್ತಿಲ್ಲ, ಮತ್ತೇ ಫಿನಿಕ್ಸ್‌ನಂತೆ ಎದ್ದು ನಿಲ್ಲುತ್ತದೆ, 2028ರ ಚುನಾವಣೆಯಲ್ಲಿ ಪಕ್ಷದ ಶಾಸಕರ ಸಾಲನ್ನು ಈ ಕಾಂಗ್ರೆಸ್ ಭವನದ ಮುಂದೆ ನಿಲ್ಲಿಸುತ್ತೇವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.ನನಗೆ ಕಾಂಗ್ರೆಸ್‌ ದೇವಾಲಯವಿದ್ದಂತೆ: ನನಗೆ ಕಾಂಗ್ರೆಸ್ ಭವನದಲ್ಲಿ ಕೆಲಸ ಇಲ್ಲ, ನನಗೆ ಜಿಲ್ಲೆಯ 1112 ಬೂತ್‌ಗಳಲ್ಲಿ ಕೆಲಸ ಇದೆ, ಪ್ರತಿ ಬೂತಿಗೆ ಹೋಗಿ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ, ತಕ್ಷಣಕ್ಕೆ ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ತಯಾರಿ ಮಾಡುವ ಅಗತ್ಯತೆ ಅನಿವಾರ್ಯತೆ ಇದೆ. ಕಾಂಗ್ರೆಸ್ ನನಗೆ ದೇವಾಲವವಯ ಇದ್ದಂತೆ, ನಾನು ಅದರ ಪೂಜೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ: ಕೃಷ್ಣ ಜನ್ಮಾಷ್ಟಮಿ ಆಚರಣೆ
ಬಿರುನಾಣಿ ಮರೆನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟ