ಕಿತ್ತೂರು ರಾಣಿ ಚನ್ನಮ್ಮ ಭಾರತದ ಮಹಿಳೆಯರಿಗೆ ಮಾದರಿ

KannadaprabhaNewsNetwork |  
Published : Oct 24, 2026, 01:15 AM IST
9999 | Kannada Prabha

ಸಾರಾಂಶ

ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬು ಕಾಯ್ದೆಯ ವಿರುದ್ಧ ದಿಟ್ಟತನದಿಂದ ಹೋರಾಡಿ, ಸೆರೆವಾಸದಲ್ಲಿರುವಾಗಲೇ ವೀರ ಮರಣವನ್ನಪ್ಪಿದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬು ಕಾಯ್ದೆಯ ವಿರುದ್ಧ ದಿಟ್ಟತನದಿಂದ ಹೋರಾಡಿ, ಸೆರೆವಾಸದಲ್ಲಿರುವಾಗಲೇ ವೀರ ಮರಣವನ್ನಪ್ಪಿದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಅವರ 202ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತನ್ನ ಗಂಡ ಮಲ್ಲಸರ್ಜ ದೇಸಾಯಿಯ ಮರಣದ ನಂತರ ಕಿತ್ತೂರಿನ ರಾಜ್ಯಭಾರ ವಹಿಸಿಕೊಂಡ ಚನ್ನಮ್ಮ, ಬ್ರಿಟಿಷರು ಕಿತ್ತೂರು ಸೇರಿದಂತೆ ಭಾರತದ ಉಳಿದ ಸಂಸ್ಥಾನಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿ ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆಯ ವಿರುದ್ದ ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ ಧೈರ್ಯ, ಶೌರ್ಯವಂತ ಮಹಿಳೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ತುಮಕೂರು ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, 200 ವರ್ಷಗಳ ಹಿಂದೆಯೇ ತನ್ನ ರಾಜ್ಯದ ರಕ್ಷಣೆಗಾಗಿ, ಜನ ಸಾಮಾನ್ಯರ ಹಕ್ಕುಗಳಿಗಾಗಿ ಬಲಾಢ್ಯ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಚನ್ನಮ್ಮ ದೇಶಪ್ರೇಮ, ಸ್ವಾಭಿಮಾನದ ಸಂಕೇತ. ನಮ್ಮ ಆತ್ಮಗೌರವಕ್ಕೆ ಧಕ್ಕೆಯಾದರೆ ಸಹಿಸೆವು ಎಂಬ ಎಚ್ಚರಿಕೆಯ ಸಂದೇಶವನ್ನು ಬ್ರಿಟಿಷರಿಗೆ ನೀಡಿದ ದಿಟ್ಟ ಮಹಿಳೆ. ಪಾಶ್ಚಿಮಾತ್ಯರ ದಬ್ಬಾಳಿಕೆ, ದೌರ್ಜನ್ಯ, ಹಪಿಹಪಿತನದ ವಿರುದ್ಧ ಬಂಡೆದ್ದ ಧೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂದು ಹೇಳಿದರು.

ಇಂದು ಅನೇಕ ಕಾನೂನು ಕಟ್ಟಳೆಗಳಿದ್ದಾಗ್ಯೂ ಮಹಿಳೆಯರ ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಆದರೆ ಇಂತಹ ಯಾವ ಸೌಲಭ್ಯಗಳು ಇಲ್ಲದ ಸಮಯದಲ್ಲಿಯೂ ತಮ್ಮ ಹಕ್ಕುಗಳಿಗಾಗಿ, ತನ್ನ ಪಾಳೆಪಟ್ಟಿನ ಜನಸಾಮಾನ್ಯರ ಹಕ್ಕುಗಳಾಗಿ ಹೋರಾಟ ಮಾಡಿ ಬ್ರಿಟಿಷರಿಂದ ಬಂಧಿಸಲ್ಪಟ್ಟು, ಜೈಲಿನಲ್ಲಿಯೇ ವೀರ ಮರಣ ಹೊಂದುವ ಮೂಲಕ ತನ್ನ ಕೊನೆ ಉಸಿರು ಇರುವವರೆಗೂ ಬ್ರಿಟಿಷರ ವಿರುದ್ಧ ಹೋರಾಡಿದ ಮಹಿಳೆ. ಅವರ ಆತ್ಮಗೌರವ, ತ್ಯಾಗ ಬಲಿದಾನಗಳು ಇಂದಿನ ಮಹಿಳೆಯರಿಗೆ ಆದರ್ಶ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.

ಮಹಿಳಾ ಹೋರಾಟಗಾರರಾದ ಡಾ.ಶೈಲಾ ನಾಗರಾಜು ಮಾತನಾಡಿ, ಭಾರತದ ಮೊಟ್ಟ ಮೊದಲ ಸ್ವಾತಂತ್ರ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ, ಅವರ ಆತ್ಮವಿಶ್ವಾಸ, ಧೈರ್ಯ, ಶೌರ್ಯ, ಸಾಹಸ ಮಹಿಳೆಯರಿಗೆ ಮಾದರಿಯಾಗಿದೆ. ಅವರಿಂದ ದೇಶ ನಿಷ್ಠೆ, ದೇಶಭಕ್ತಿ, ಹೋರಾಟದ ಮನೋಭಾವನೆಯನ್ನು ನಾವೆಲ್ಲರೂ ಕಲಿಯಬೇಕಾಗಿದೆ. ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾಯ್ದೆಯ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಧೀರ ಮಹಿಳೆ ಚನ್ನಮ್ಮ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮರ್ಜಿ, ಮೇಲ್ವಿಚಾರಕರಾದ ಸುರೇಶಕುಮಾರ್, ಚುನಾವಣಾ ತಹಸೀಲ್ದಾರ್ ವೀಣಾ, ಪಿಯುಡಿ ಡಿತ್ರಿವೇಣಿ, ಮುಖಂಡರಾದ ಲಲಿತ ಮಲ್ಲಪ್ಪ, ತಹೇರಾಕುಲ್ಸುಮ್, ಮಂಜುಳ, ದೊಂಬರನಹಳ್ಳಿ ನಾಗರಾಜು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಮಂಗಲ ತಾಲೂಕಲ್ಲಿ ಶೇ. 98 ಶಾಂತಿಯುತ ಮತದಾನ
ಅರವಿಂದ್ ಲಿಮಿಟೆಡ್ ಅರಸೀಕೆರೆ ಘಟಕಕ್ಕೆ ಪ್ರಶಸ್ತಿ