ಕೆಎಂಎಫ್ ಅಧ್ಯಕ್ಷ ಗಾದಿ: ಶಾಸಕರಿಗೆ ನಿರಾಸೆ

KannadaprabhaNewsNetwork | Published : May 20, 2025 11:57 PM
ತಮಗೆ ಕೆಎಂಎಫ್ ಅಧ್ಯಕ್ಷನಾಗುವ ಆಸೆ ಇತ್ತು, ಸಚಿವ ಸ್ಥಾನವೂ ಬೇಡ ಕೆಎಂಎಫ್ ಕೊಡಿ ಎಂದಿದ್ದೆ. ಆದ್ರೆ ಡಿ.ಕೆ.ಸುರೇಶ್ ಹೆಸರು ಮುನ್ನೆಲೆಗ ಬಂದಿದೆ. ಅದನ್ನು ತಾವು ಸ್ವಾಗತ ಮಾಡುತ್ತೇನೆ, ಕಾಂಗ್ರೆಸ್‌ ಹೈ ಕಮಾಂಡ್ ತೀರ್ಮಾನ ಮಾಡಿದ್ರೆ ಅವರು ಆಸೆ ಇಟ್ಟುಕೊಂಡಿದ್ರೆ, ಅವರೇನಾದ್ರು ಅಧ್ಯಕ್ಷರಾಗಬೇಕು ಎಂದುಕೊಂಡಿದ್ರೆ ಸ್ವಾಗತ ಮಾಡುತ್ತೇನೆ ಎಂದಿದ್ದಾರೆ ಶಾಸಕ ನಂಜೇಗೌಡ
Follow Us

ಕನ್ನಡಪ್ರಭ ವಾರ್ತೆ ಕೋಲಾರಕೆಎಂಎಫ್ ಅಧ್ಯಕ್ಷರಾಗಿ ಡಿ.ಕೆ.ಸುರೇಶ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಆದರೆ ತಾವು ತ್ಯಾಗಕ್ಕೆ ಸಿದ್ಧ ಶಾಸಕರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಂಜೇಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್‌ ಆಸೆ ಅದೇ ಆಗಿದ್ರೆ, ಅ‍ವರೂ ನಮ್ಮ ಪಕ್ಷದವರೇ ಆಗಲಿ ಬಿಡಿ, ನಾನು ೧೦೦ ಪರ್ಸೆಂಟ್ ತ್ಯಾಗ ಮಾಡುತ್ತೇನೆ ಎಂದು ಹೇಳಿದರು.ಡಿಕೆಸು ನಿರ್ಧಾರಕ್ಕೆ ಸ್ವಾಗತ

ಯಾಕಂದ್ರೆ ತಮಗೆ ಕೆಎಂಎಫ್ ಅಧ್ಯಕ್ಷನಾಗುವ ಆಸೆ ಇತ್ತು, ಸಚಿವ ಸ್ಥಾನವೂ ಬೇಡ ಕೆಎಂಎಫ್ ಕೊಡಿ ಎಂದಿದ್ದೆ. ಆದ್ರೆ ಡಿ.ಕೆ.ಸುರೇಶ್ ಹೆಸರು ಮುನ್ನೆಲೆಗ ಬಂದಿದೆ. ಅದನ್ನು ತಾವು ಸ್ವಾಗತ ಮಾಡುತ್ತೇನೆ, ಕಾಂಗ್ರೆಸ್‌ ಹೈ ಕಮಾಂಡ್ ತೀರ್ಮಾನ ಮಾಡಿದ್ರೆ ಅವರು ಆಸೆ ಇಟ್ಟುಕೊಂಡಿದ್ರೆ, ಅವರೇನಾದ್ರು ಅಧ್ಯಕ್ಷರಾಗಬೇಕು ಎಂದುಕೊಂಡಿದ್ರೆ ಸ್ವಾಗತ ಮಾಡುತ್ತೇನೆ ಎಂದರುಕೋಮುಲ್ ಅಧ್ಯಕ್ಷನಾಗುವುದು ಬೇರೆ, ತಾವು ಹಲವು ಯೋಜನೆಗಳನ್ನ ಕೈಗೆತ್ತಿಕೊಂಡಿದ್ದೇನೆ, ನಿರ್ದೇಶಕನಾಗಿ ಬಂದ ಮೇಲೆ ಪಕ್ಷ ನಿರ್ಧಾರ ಮಾಡಲಿದೆ, ಯಾರು ಅಧ್ಯಕ್ಷರಾಗಬೇಕು ಎಂದು ಹೈ ಕಮಾಂಡ್, ಪಕ್ಷ ನಿರ್ಧಾರ ಮಾಡಲಿದೆ. ಈಗಾಗಲೇ ಕೋಮುಲ್‌ನಲ್ಲಿ ಎಂವಿಕೆ ಗೋಲ್ಡೇನ್ ಡೇರಿ ಸೇರಿದಂತೆ ಸೋಲಾರ್ ಪ್ಲಾಂಟ್, ವಸತಿ ನಿಲಯ ಹಲವು ಯೋಜನೆಗಳನ್ನ ಕೃಗೆತ್ತಿಕೊಂಡಿದ್ದೇನೆ. ಅದೆಲ್ಲಾ ನೋಡಬೇಕು ನನ್ನ ಆಸೆ ಈಡೇರಬೇಕು ಎಂದರೆ ಕೋಮುಲ್ ನಿರ್ದೇಶಕನಾಗುವೆ ಎಂದರು.

ಉತ್ತಮ ಆಡಳಿತ ನೀಡಬೇಕು

ಒಳ್ಳೆಯ ಆಡಳಿತ ಮಂಡಳಿ ಬರಬೇಕು ಅನ್ನೋ ಕಾರಣಕ್ಕೆ ಶಾಸಕರು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್‌ನ ಸರಿ ಪಡಿಸುವ ನಿಟ್ಟಿನಲ್ಲಿ ಇಷ್ಟೆಲ್ಲಾ ಮಾಡಲಾಗುತ್ತಿದೆ. ಮಾತ್ರವಲ್ಲ ಅದಕ್ಕಾಗಿ ತಾವು ಕೋಮುಲ್ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ೫ ವರ್ಷ ಒಳ್ಳೆಯ ಆಡಳಿತ ಮಂಡಳಿ ಇತ್ತು, ಉತ್ತಮ ಆಡಳಿತ ನೀಡಿದ್ದೇವೆ. ಅದರಂತೆ ಡಿಸಿಸಿ ಬ್ಯಾಂಕ್ ಕೂಡ ಅಭಿವೃದ್ದಿ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.