ಭಟ್ಕಳ: ನಶೆಯ ಗುಂಗಿನಲ್ಲಿದ್ದ ಯುವಕನೋರ್ವ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮತ್ತೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಪಟ್ಟಣದ ಸಂಶುದ್ದೀನ್ ವೃತ್ತದಲ್ಲಿ ನಡೆದಿದೆ.ಘಟನೆಯಲ್ಲಿ ಮಂಜುನಾಥ ಮಾಸ್ತಪ್ಪ ನಾಯ್ಕ (34) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಡಿ.ಪಿ. ಕಾಲೋನಿಯ ನಗೀನಕುಮಾರ ಎಂಬಾತ ಈ ಕೃತ್ಯ ಎಸಗಿದ್ದಾನೆ. ನಶೆಯಲ್ಲಿ ನಗೀನಕುಮಾರ, “ಹಣ ಕೇಳಿದ್ರೆ ಬೈಯ್ದು ಕಳಿಸಿದ್ದಿಯಾ, ಇವತ್ತು ನಿನ್ನನ್ನ ಬಿಡೋದಿಲ್ಲ” ಎಂದು ಬೈಯುತ್ತ ಮಂಜುನಾಥನ ಮೇಲೆ ಚಾಕು ಬೀಸಿದ್ದಾನೆ. ಈ ಸಂದರ್ಭದಲ್ಲಿ ಮಂಜುನಾಥನ ಎಡ ಕಂಕುಳ, ಕುತ್ತಿಗೆ, ಹೊಟ್ಟೆ, ಕಿವಿಯ ಹತ್ತಿರ ಹಾಗೂ ತಲೆಯ ಭಾಗಕ್ಕೆ ಇರಿತದ ಗಾಯಗಳಾಗಿವೆ.
ಮಾಹಿತಿ ತಿಳಿದ ಕೂಡಲೇ ಸಿಪಿಐ ದಿವಾಕರ ಪಿ.ಎಂ. ಮತ್ತು ಪಿಎಸ್‌ಐ ನವೀನ್ ನಾಯ್ಕ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಗಾಯಗೊಂಡ ಮಂಜುನಾಥನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ. ಗಣೇಶ ಶನಿಯಾರ ನಾಯ್ಕ ದೂರು ನೀಡಿದ್ದು, ಪಿಎಸ್‌ಐ ನವೀನ್ ನಾಯ್ಕ ಅವರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಾರವಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.ಬ್ಲ್ಯಾಕ್ ಮೇಲ್ ಹಿನ್ನೆಲೆ ಗುಂಡಿಬೈಲ್‌ನ ಯುವತಿ ಆತ್ಮಹತ್ಯೆ
ಹೊನ್ನಾವರ: ಇತ್ತೀಚೆಗೆ ತಾಲೂಕಿನ ಗುಂಡಿಬೈಲಿನ ಗಾಯತ್ರಿ ಕೇಶವ ಗೌಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಮೇಲ್ನೊಟಕ್ಕೆ ಇದು ಆತ್ಮಹತ್ಯೆ ಮಾಡಿಕೊಂಡ ಯುವತಿ ಯಾವುದೋ ಖಿನ್ನತೆಗೆ ಒಳಗಾಗಿದ್ದಳು ಎಂದು ಅನ್ನಿಸಿತ್ತು. ಆದರೆ, ಇವರ ಆತ್ಮಹತ್ಯೆಗೆ ಪ್ರಿಯಕರ ಕಾರಣ ಅನ್ನುವ ವಿಚಾರ ಬೆಳಕಿಗೆ ಬಂದಿದೆ.ಅವಳ ಪ್ರಿಯಕರ ಎನ್ನಲಾಗಿರುವ ಕಾಸರಕೋಡ ಮಲ್ಲಮಾಸ್ತಿಕೇರಿಯ ರಮೇಶ ಗಣಪಯ್ಯ ಗೌಡನ ಬಂಧನವಾಗಿದೆ. ಈ ಹಿಂದೆ ಗಾಯತ್ರಿ ಗೌಡ ಸಾವಿನ ನಂತರ ಅವಳ ತಾಯಿ ನೀಡಿದ ದೂರಿನಲ್ಲಿ ತನ್ನ ಮಗಳ ಸಾವಿನಲ್ಲಿ ಅನುಮಾನವಿದೆ ಎಂದು ಸಂಶಯ ವ್ಯಕ್ತಪಡಿಸಿದ್ದರು. ತಾಯಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಂಧಿಸಿದ್ದಾರೆ.
ಪ್ರೀತಿಯಲ್ಲಿ ಬಿದ್ದಿದ್ದ ಯುವತಿಆತ್ಮಹತ್ಯೆ ಮಾಡಿಕೊಂಡಿರುವ ಗಾಯತ್ರಿ ಏಳು ವರ್ಷದಿಂದ ಕಾಸರಕೋಡ ಮಲ್ಲಮಾಸ್ತಿಕೇರಿಯ ರಮೇಶ ಗೌಡನನ್ನು ಇಷ್ಟಪಟ್ಟು ಪ್ರೀತಿ ಮಾಡಿದ್ದಳು. ತನಗಿಂತ ಹನ್ನೆರಡು ವರ್ಷ ಹಿರಿಯನಾಗಿದ್ದರೂ ಅವನನ್ನೇ ಮದುವೆ ಆಗುವ ನಿರ್ಧಾರ ಮಾಡಿದ್ದಳು, ಅವಳ ಇಷ್ಟದಂತೆ ಮನೆಯವರು ಅವನೊಂದಿಗೆ ಮದುವೆ ಮಾಡಲು ನಿರ್ಣಯಿಸಿದ್ದರು.
ಎಳೆ ಎಳೆ ಯಾಗಿ ದಾಖಲೆ ಕೊಟ್ಟ ಡೆತ್ ನೋಟ್ಬಿಟ್ಟು ಇರಲಾಗದಷ್ಟು ಗಾಢವಾಗಿ ಇಳಿದು ಹೋಗಿದ್ದ ಪ್ರೀತಿಯ ಬೇರು ಒಂದೆ ಸಮನೆ ಸಡಿಲವಾಗಿ ಬಿಟ್ಟಿದೆ. ತಾನು ಇಷ್ಟ ಪಟ್ಟು ಮೆಚ್ಚಿ ಮದುವೆ ಆಗಬೇಕಿದ್ದ ಯುವಕನ ಮೊಬೈಲ್ ನಲ್ಲಿ ಸಿಕ್ಕಿರುವ ವಿಡಿಯೋ ಇವರ ಪ್ರೀತಿಯ ತಾಯಿ ಬೆರನ್ನೆ ಕತ್ತರಿಸಿ ಹಾಕಿ ಬಿಟ್ಟಿದೆ. ಯುವತಿ ಸಾವಿಗೂ ಮುನ್ನ ಅವಳ ಡೈರಿಯಲ್ಲಿ ಬರೆದಿಟ್ಟ ಬರವಣಿಗೆ ಓದಿದವರ ಕರುಳು ಚುರುಕ್ ಅನ್ನುತ್ತದೆ. ಅವಳ್ ಡೆತ್ ನೋಟ್ ಪ್ರೀತಿಸಿದ ಯುವಕನನ್ನೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ.
ನನ್ನ ಪ್ರೀತಿ ಮಾಡಿದ ಯುವಕ ಮೋಸಗಾರ, ಅದು ನನಗೆ ಎರಡು ವರ್ಷದ ಹಿಂದೆ ತಿಳಿಯಿತು. ಅವನು ಬೇರೆ ಹುಡುಗಿಯ ಜೊತೆ ರೂಮಿನಲ್ಲಿ ಇರುವ ವಿಡಿಯೋ ಅವನ ಮೊಬೈಲ್ ನಲ್ಲಿ ನೋಡಿದ್ದೇನೆ. ಬೇರೆ ಹುಡುಗಿಯ ಜೊತೆ ದೇಹ ಹಂಚಿಕೊಂಡ ಯುವಕನನ್ನು ನಾನು ಮದುವೆ ಆಗುವುದಿಲ್ಲ ಎಂದು ಪ್ರೀತಿ ನಿರಾಕರಿಸಿ ಜಗಳವಾಡಿದ್ದಾಳೆ. ನಾನು ಮತ್ತು ಅವನು ರೂಮಿನಲ್ಲಿ ಇದ್ದಾಗ ನನಗೆ ತಿಳಿಯದೆ ನನ್ನ ವಿಡಿಯೋ ಮಾಡಿ ಇಟ್ಟುಕೊಂಡಿದ್ದ, ಅದನ್ನು ಇಟ್ಟುಕೊಂಡು ನನ್ನನ್ನು ಬ್ಲಾಕ್ ಮೇಲ್ ಮಾಡಿ, ಕೊಲೆ ಬೆದರಿಕೆ ಹಾಕಲು ಪ್ರಾರಂಭ ಮಾಡಿದ, ಅದಕ್ಕಾಗಿ ನನ್ನ ಹುಟ್ಟಿದ ದಿನವೇ ನನ್ನ ಕೊನೆ ದಿನ ಆಗಬೇಕು ಎಂದು ನಿರ್ಧರಿಸಿದೆ ಎಂದು ಡೈರಿಯಲ್ಲಿ ಬರೆದಿದ್ದಾಳೆ.ಮಗಳ ಸಾವಿಗೆ ರಮೇಶ ಕಾರಣ
ತನ್ನ ಮಗಳ ಸಾವಿಗೆ ರಮೇಶ ಗೌಡನೆ ಕಾರಣನಾಗಿದ್ದಾನೆ. ನನ್ನ ಮಗಳು ಅವನ ಜೊತೆ ಇರುವಾಗ ತೆಗೆದಿರುವ ವಿಡಿಯೋವನ್ನು ಅವಳಿಗೆ ಬಿಟ್ಟು, ಬ್ಲಾಕ್ ಮೇಲ್ ಮಾಡಿ, ಕೊಲೆ ಬೆದರಿಕೆ ಹಾಕಿರುವುದರಿಂದ ಅವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಕಾರಣನಾದ ರಮೇಶ ಗೌಡನ ಮೇಲೆ ಸೂಕ್ತ ಕಾನೂನು ಕ್ರಮವಾಗಬೇಕು ಎಂದು ಅವಳ ತಾಯಿ ಗಿರಿಜ ಕೇಶವ ಗೌಡ ದೂರಿನಲ್ಲಿ ತಿಳಿಸಿದ್ದಾಳೆ.