ರಾಷ್ಟ್ರದ ಇತಿಹಾಸ ಅರಿತು ಕೆಲಸ ಮಾಡಿ: ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು

KannadaprabhaNewsNetwork |  
Published : Aug 16, 2024, 12:52 AM IST
15ಕೆಎಂಎನ್ ಡಿ15,16 | Kannada Prabha

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವು ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ಮಹಾನೀಯರನ್ನು ನಾಗರೀಕರು ಸ್ಮರಿಸಿಕೊಳ್ಳಬೇಕು. 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಣೆ ಮಾಡಿದ್ದೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ದೇಶದ ಪ್ರತಿಯೊಬ್ಬ ಮನುಷ್ಯ ರಾಷ್ಟ್ರದ ಇತಿಹಾಸವನ್ನು ಅರಿತುಕೊಳ್ಳುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ತಿಳಿಸಿದರು.

ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಸ್ಥೆ ಅಧ್ಯಕ್ಷರಾಗಿರುವ ಸಿ.ಎಸ್.ಪುಟ್ಟರಾಜು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು, ಯುವ ಸಮುದಾಯದ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವು ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ಮಹಾನೀಯರನ್ನು ನಾಗರೀಕರು ಸ್ಮರಿಸಿಕೊಳ್ಳಬೇಕು. 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಣೆ ಮಾಡಿದ್ದೇವೆ ಎಂದರು.

ಶಾಲೆ ಮೂರು ವಿಭಾಗದ ವಿದ್ಯಾರ್ಥಿಗಳು ಹಾಗೂ ಬ್ಯಾಂಡೆಸೆಟ್ ತಂಡ ಪಥಸಂಚಲನ ಮಾಡುವ ಮೂಲಕ ವೇದಿಕೆ ಮೇಲಿನ ಗಣ್ಯರಿಗೆ ವಂಧಿಸಿದರು. ಶಾಲೆ ವಿದ್ಯಾರ್ಥಿಗಳಿಂದ ರಾಷ್ಟ್ರಪ್ರೇಮ, ಸೈನಿಕರು, ಸ್ವಾತಂತ್ರ್ಯ ಹೋರಾಟರು ಹಾಗೂ ತ್ಯಾಗಬಲಿದಾನದ ಕುರಿತ ನೃತ್ಯ, ಯಕ್ಷಗಾನ, ಭರತನಾಟ್ಯ, ನಾಟಕ, ಹಾಡುಗಳನ್ನು ಪ್ರದರ್ಶಿಸಿದರು.ಸಂಸ್ಥೆ ಸಿಇಒ ಸಿ.ಪಿ.ಶಿವರಾಜು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯನ್ನು ನಾವೆಲ್ಲರು ಸಂಭ್ರಮದಿಂದ ಆಚರಣೆ ಮಾಡಬೇಕು. ನೂರಾರು ವರ್ಷಗಳ ಕಾಲ ಬ್ರಿಟಿಷರ ದಾಸ್ಯದಲ್ಲಿ ಸಿಲುಕಿದ್ದ ಪೂರ್ವಿಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೀವ ಜೀವನನ್ನು ತ್ಯಜಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಪಿಯು ವಿಭಾಗದ ಪ್ರಾಂಶುಪಾಲ ಮಾರುತಿ, ಪ್ರಥಮ ದರ್ಜೆ ಕಾಲೇಜಿನ ನಿಶಾಂತ್ ಎ.ನಾಯ್ಡು, ಜೀವಶಾಸ್ತ್ರದ ಮುಖ್ಯಸ್ಥ ವಿ.ಟಿ.ರಘುಸ್ವಾಮಿ ಸೇರಿದಂತೆ ಉಪನ್ಯಾಸಕ, ಶಿಕ್ಷಕ ಹಾಗೂ ಸಿಬ್ಬಂದಿ ಹಾಜರಿದ್ದರು.ಸ್ವಾತಂತ್ರ್ಯ ದಿನಾಚರಣೆ: ಸುವರ್ಣದೇವಿ ಧ್ವಜಾರೋಹಣಶ್ರೀರಂಗಪಟ್ಟಣ:

ಪೇಟೆ ನಾರಾಯಣಸ್ವಾಮಿ ದೇವಸ್ಥಾನದ ಬಳಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಘಟಕ ಸದಸ್ಯರು, ಶ್ರೀರಂಗನಾಯಕಿ ಶ್ರೀ ಸಮಾಜ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ನಿವೃತ್ತ ಬಿಇಒ ಸುವರ್ಣದೇವಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಆಶಾಲತಾ ಪುಟ್ಟೇಗೌಡ, ಎನ್.ಸರಸ್ವತಿ, ಪುರಸಭಾ ಮಾಜಿ ಸದಸ್ಯೆ ನಳಿನ ಸತ್ಯನಾರಾಯಣ, ಶೋಭ, ಭುವನ, ವಿಜಯಕುಮಾರ್, ಚಂದ್ರಶೇಖರ್, ವಿಜೇಂದ್ರ, ಲೋಕೇಶ್, ಶಿವಕುಮಾರ್, ಎಲ್.ವಿ ನವೀನ್‌ಕುಮಾರ್, ಗಂಜಾಂ ಮಂಜು, ಗೋಪಾಲಗೌಡ, ಬಸವರಾಜು ಸೇರಿದಂತೆ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ