ಪೈಪೋಟಿ ಎದುರಿಸಲು ಜ್ಞಾನ ಸಂಪತ್ತು ಅವಶ್ಯ: ಪ್ರೊ.ಆನಂದ ದೇಶಪಾಂಡೆ

KannadaprabhaNewsNetwork |  
Published : Sep 12, 2025, 01:00 AM IST
(ಫೋಟೊ 11ಬಿಕೆಟಿ4, ಸಮಾರಂಭದಲ್ಲಿ  ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆನಂದದೇಶಪಾಂಡೆಅವರನ್ನು ಸನ್ಮಾನಿಸಲಾಯಿತು. .) | Kannada Prabha

ಸಾರಾಂಶ

ಕಲಿಕೆ ನಿರಂತರ ಪ್ರಕ್ರಿಯೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಜ್ಞಾನ, ಸಂಪತ್ತನ್ನು ಹೆಚ್ಚಿಸಿಕೊಂಡಲ್ಲಿ ಪೈಪೋಟಿ ಆತ್ಮವಿಶ್ವಾಸದಿಂದ ಎದುರಿಸಬಹುದು ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆನಂದ ದೇಶಪಾಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಲಿಕೆ ನಿರಂತರ ಪ್ರಕ್ರಿಯೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಜ್ಞಾನ, ಸಂಪತ್ತನ್ನು ಹೆಚ್ಚಿಸಿಕೊಂಡಲ್ಲಿ ಪೈಪೋಟಿ ಆತ್ಮವಿಶ್ವಾಸದಿಂದ ಎದುರಿಸಬಹುದು ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆನಂದ ದೇಶಪಾಂಡೆ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಪ್ರಸಕ್ತ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಮಾಹಿತಿ ಮತ್ತು ತಂತ್ರಜ್ಞಾನ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಮೂಲಕ ಅವುಗಳನ್ನು ಕರಗತಗೊಳಿಸಿಕೊಳ್ಳಬಹುದು. ಮೊಬೈಲ್‌ ನಲ್ಲಿ ಜ್ಞಾನವರ್ಧನೆಗೆ ಸಾಕಷ್ಟು ಅಪ್ಲಿಕೇಶನ್‌ಗಳಿದ್ದು, ಅವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನಿಟ್ಟುಕೊಳ್ಳಬೇಕು. ಉತ್ತಮಯೋಜನೆ, ಪರಿಶ್ರಮ ಮತ್ತು ಪ್ರಯತ್ನದಿಂದ ಅದನ್ನು ಸಾಕಾರಗೊಳಿಸಬೇಕು. ಸ್ಪರ್ಧೆ ಹಾಗೂ ಜೀವನದಲ್ಲಿ ಎದುರಾಗುವ ವೈಫಲ್ಯಗಳಿಂದ ನಿರಾಶರಾಗದೇ ಅವುಗಳಿಂದ ಪಾಠಕಲಿತು, ಸಾಮರ್ರ್ಥಥ್ರ್ಯವನ್ನು ವೃದ್ಧಿಸಿಕೊಂಡು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಬೆಳವಣಿಗೆಗೆ ಮಾರಕವಾಗುವ ಕೀಳರಿಮೆಯಿಂದ ಹೊರಬಂದುಆತ್ಮವಿಶ್ವಾಸ ಬೆಳೆಸಿಕೊಂಡು ನಿರ್ಧರಿತಗುರಿ ಮುಟ್ಟಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಉತ್ತಮಆರೋಗ್ಯ ನೀಡುತ್ತವೆ. ಸೃಜನಶೀಲ, ನಾಯಕತ್ವಗುಣ, ಸಂವಹನ ಮತ್ತು ಲೇಖನ ಕಲೆಗಳನ್ನು ಬೆಳೆಸಲು ಸಹಕಾರಿಯಾಗಿವೆ. ಅವುಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು. ತಾವು ಒಂದು ವರ್ಷ ಇಲ್ಲಿನ ಸಕ್ರಿ ಪ್ರೌಢ ಶಾಲೆಯಲ್ಲಿಕಲಿತ ಆ ದಿನಗಳನ್ನು ಮೆಲಕು ಹಾಕಿದರು.

ಸೇವಾ ನಿವೃತ್ತಿ ಹೊಂದಿದ ಪ್ರಾಧ್ಯಾಪಕ ಎಚ್.ಎಸ್. ಗಿಡಗಂಟಿ, ಪಿಎಚ್ಡಿ ಪದವಿ ಪಡೆದ ಹಳೆಯ ವಿದ್ಯಾರ್ಥಿಗಳಾದ ಪಿ.ವಿ. ಮನಗೂಳಿ, ಸುರೇಖಾ ಕೊರ್ಲಹಳ್ಳಿ, ಎ.ಎಂ ಗೊರಚಿಕ್ಕನವರ, ಎಸ್.ಪಿ. ದೇಶಪಾಂಡೆ ಹಾಗೂ ಯುಜಿಸಿ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಸ್.ಎಸ್. ಕುಲಕರ್ಣಿ, ಎನ್.ಎಂ. ನಾಯಕ, ಕೆ.ಬಿ. ನಾವಿ ಅವರನ್ನು ಕುಲಪತಿಗಳು ಕಾಲೇಜಿನ ಪರವಾಗಿ ಸನ್ಮಾನಿಸಿದರು.

ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಲಿ ಎಂಬ ಕಾರಣಕ್ಕಾಗಿ ಸಾಧಕ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸಕ್ಕೆ ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದರು.

ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್, ಎಚ್.ಎಸ್. ಗಿಡಗಂಟಿ, ಡಾ.ಪಿ.ವಿ. ಮನಗೂಳಿ, ಡಾ. ಎ.ಎಂ. ಗೊರಚಿಕ್ಕನವರ ಮಾತನಾಡಿದರು.

ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಅಧ್ಯಕ್ಷತೆ ವಹಿಸಿದ್ದರು. ಮಾಡುವಕಾರ್ಯದಲ್ಲಿ ಶ್ರದ್ಧೆ- ಪರಿಶ್ರಮವಿದ್ದಲ್ಲಿಜೀವನದಲ್ಲಿಉತ್ತಮ ನೆಲೆಯನ್ನು ಕಂಡುಕೊಳ್ಳಬಹುದು. ಮೊಬೈಲ್‌ ದಾಸರಾಗದೇ ಅಧ್ಯಯನಶೀಲರಾಗಿ ಜೀವನದಲ್ಲಿ ಸಾಧನೆ ಮಾಡಿ ಹಳೆಯ ವಿದ್ಯಾರ್ಥಿಗಳಂತೆ ಸನ್ಮಾನಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಯೋಜಕ ಡಾ.ಎಸ್.ಎಸ್. ಹಂಗರಗಿ ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ದಿಲ್ಶಾದ ನದಾಫ್ ವಂದಿಸಿದರು. ಉಪನ್ಯಾಸಕಿ ಕೀರ್ತಿ ದಾಸರ ನಿರೂಪಿಸಿದರು.

ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್. ಜೋಶಿ ವೇದಿಕೆಯಲ್ಲಿದ್ದರು. ಜಂಟೀ ಕಾರ್ಯದರ್ಶಿ ಎಸ್.ಬಿ. ಪರ್ವತಿಕರ, ಸದಸ್ಯರಾದ ಎಸ್.ಕೆ. ಕುಲಕರ್ಣಿ, ಡಾ. ಆರ್.ವಿ . ಜೋಶಿ, ಡಾ. ಸಂದೀಪ ಹುಯಿಲಗೋಳ, ನಿವೃತ್ತ ಪ್ರಾಧ್ಯಾಪಕ ಎಂ.ವಿ ಮಹಾಡೀಕರ, ಡಾ. ಪಿ.ಎಸ್. ಹುಯಿಲಗೋಳ, ಡಾ.ಎಸ್.ಜಿ. ನಾವಲಗಿ, ಜಿ.ಜೆ. ಮೊರಬ, ಪ್ರಾಚಾರ್ಯ ಅಶೋಕ ಕಂದಗಲ್, ಬಿ.ಎಚ್. ಲಮಾಣಿ, ಪ್ರಮೋದ ಅಂಬೇಕರ, ಸಿ.ಎಲ್. ಹೂಗಾರ ಮತ್ತಿತರರು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ