ದೇವರ ದಾಸಿಮಯ್ಯ ವಿಶ್ವವಿದ್ಯಾನಿಲಯದ ಜ್ಞಾನ ಉಳ್ಳವರು

KannadaprabhaNewsNetwork |  
Published : Mar 24, 2026, 01:30 AM IST
23ಎಚ್ಎಸ್ಎನ್13 :  | Kannada Prabha

ಸಾರಾಂಶ

ಜಗತ್ತಿನ ವಿಶಿಷ್ಟ ಸಾಹಿತ್ಯವೆಂದರೆ ದಾಸಿಮಯ್ಯ ನವರ ವಚನಗಳಲ್ಲಿ ರಚನೆಯಾಗಿರುವ ಸಾಹಿತ್ಯಗಳು, ಮಾನವ ಜಾತಿ ಒಂದೇ ಆದರೆ ಹಲವಾರು ವಿಧಗಳನ್ನು ಸೃಷ್ಟಿಸಿಕೊಂಡವರು ಸಾಹಿತ್ಯ ಲೋಕದಲ್ಲಿ ಹಲವಾರು ಜ್ಞಾನ ಪ್ರೇರಣೆ ಪಡೆದ ಸಾಹಿತ್ಯಕಾರರು ಹಾಗೂ ವಚನಕಾರಾಗಿದ್ದರು ಎಂದರು. ವಚನಗಳ ರಚನೆಗೆ ಮೂಲ ಪ್ರೇರಣೆ ನೀಡಿದವರು ದೇವರ ದಾಸಿಮಯ್ಯ. ಇಲ್ಲದಿದ್ದರೆ ವಚನ ಸಾಹಿತ್ಯಗಳನ್ನು ತಿಳಿದುಕೊಳ್ಳಲು ಅರ್ಥೈಸಿ ಕೊಳ್ಳಲು ಯಾವ ಪಂಡಿತರಿಂದಲು ಸಾಧ್ಯವಾಗುತ್ತಿರಲಿಲ್ಲ, ವಚನಕಾರರ ಸಂತತಿಯಲ್ಲಿ ಆದ್ಯ ವಚನಕರ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದಾಸಿಮಯ್ಯನವರು ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದವರಲ್ಲ. ಆದರೆ ವಿಶ್ವವನ್ನು ವಿಶ್ವವಿದ್ಯಾನಿಲಯದಷ್ಟು ಅಪಾರ ಜ್ಞಾನ ಉಳ್ಳವರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಚ್. ಎಲ್. ಮಲ್ಲೇಶ ಗೌಡ ತಿಳಿಸಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಹಯೋಗದಲ್ಲಿ ಸೋಮವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ವಿಶಿಷ್ಟ ಸಾಹಿತ್ಯವೆಂದರೆ ದಾಸಿಮಯ್ಯ ನವರ ವಚನಗಳಲ್ಲಿ ರಚನೆಯಾಗಿರುವ ಸಾಹಿತ್ಯಗಳು, ಮಾನವ ಜಾತಿ ಒಂದೇ ಆದರೆ ಹಲವಾರು ವಿಧಗಳನ್ನು ಸೃಷ್ಟಿಸಿಕೊಂಡವರು ಸಾಹಿತ್ಯ ಲೋಕದಲ್ಲಿ ಹಲವಾರು ಜ್ಞಾನ ಪ್ರೇರಣೆ ಪಡೆದ ಸಾಹಿತ್ಯಕಾರರು ಹಾಗೂ ವಚನಕಾರಾಗಿದ್ದರು ಎಂದರು. ವಚನಗಳ ರಚನೆಗೆ ಮೂಲ ಪ್ರೇರಣೆ ನೀಡಿದವರು ದೇವರ ದಾಸಿಮಯ್ಯ. ಇಲ್ಲದಿದ್ದರೆ ವಚನ ಸಾಹಿತ್ಯಗಳನ್ನು ತಿಳಿದುಕೊಳ್ಳಲು ಅರ್ಥೈಸಿ ಕೊಳ್ಳಲು ಯಾವ ಪಂಡಿತರಿಂದಲು ಸಾಧ್ಯವಾಗುತ್ತಿರಲಿಲ್ಲ, ವಚನಕಾರರ ಸಂತತಿಯಲ್ಲಿ ಆದ್ಯ ವಚನಕರ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಸಾಹಿತಿ ಕೊಟ್ರೇಶ್ ಉಪ್ಪಾರ್ ಅವರು ಸಾಹಿತ್ಯಕ್ಕೆ ಪ್ರಥಮ ಅಡಿಪಾಯ ಹಾಕಿದವರು ದೇವರ ದಾಸಿಮಯ್ಯನವರು, ಮಾನವೀಯ ಮೌಲ್ಯಗಳನ್ನು ಕಟ್ಟಿಕೊಟ್ಟವರಲ್ಲಿ ದೇವರದಾಸಿಮಯ್ಯ ನವರು ಮೊದಲಿಗರು, ೧೨ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯವನ್ನ ಸಾರಿದ ಕೀರ್ತಿ ಸಲ್ಲುತ್ತದೆ ಎಂದರು. ಸಾಮಾಜಿಕ ಪ್ರಜ್ಞೆ, ಭಕ್ತಿ, ವೈಚಾರಿಕತೆ ಪ್ರಜ್ಞೆ ತುಂಬಾ ಮಹತ್ವ ವಾದದ್ದು, ಶರಣ ಸಂತತಿಯಲ್ಲಿ ಸರಳವಾದ ವಚನಗಳು ಎಂದರೆ ದಾಸಿಮಯ್ಯನವರದೇ ಆಗಿದೆ. ಬದುಕಿನ ಬಗ್ಗೆ ತುಂಬಾ ಸರಳವಾಗಿ ಸುಂದರವಾಗಿ ವಚನಗಳ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು. ೧೨ನೇ ಶತಮಾನದ ಶಿವ ಶರಣರು ಕೆಲವರ್ಗದಿಂದ ಬಂದವರಾಗಿದ್ದರು ಸಹ ಮಹಿಳೆಯರಿಗೆ ಸಮಾನತೆ ನೀಡಬೇಕು ಎಂಬುದು ಅವರ ಮೂಲ ಉದ್ದೇಶವಾಗಿತ್ತು. ಶಿವ ಶರಣರಲ್ಲಿ ವಿಜ್ಞಾನಿಯು ಸಹ ನೆಲೆಸಿದ್ದ ಎಂಬುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪಟೇಲ್ ಶಿವಪ್ಪ ಮಾತನಾಡಿ ಕುಲ ಎಂಬುದು ಎಲ್ಲರಿಗೂ ಒಂದೇ ಕುಲದಲ್ಲಿ ಯಾವುದೇ ಮೇಲೂ ಕೀಳು ಎಂಬ ಭೇದ ಭಾವ ಇಲ್ಲ, ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಮೊದಲು ತಿಳಿಸಿದವರು ದೇವರ ದಾಸಿಮಯ್ಯನವರು, ೧೧ನೇ ಶತಮಾನದಲ್ಲಿ ಮೊದಲು ಅಡಿಪಾಯ ಹಾಕಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರಾದ ತಾರಾನಾಥ್, ತಹಸೀಲ್ದಾರ್‌ ಗೀತಾ ಶಂಕರ ಶೆಟ್ಟಿ, ವಿ. ಎ ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಹಿಂದೂ ಹೋರಾಟಗಾರಿಗೆ ಅಧಿಕಾರ ಸಿಕ್ಕರೆ ಕ್ರಾಂತಿ: ಬಸನಗೌಡ ಪಾಟೀಲ್ ಯತ್ನಾಳ್
ಹೊಳೆನರಸೀಪುರದಲ್ಲಿ ಕೈವಾರ ತಾತಯ್ಯ ಜಯಂತಿ