ಕೊಡಗು ಜಿಲ್ಲಾ ಹಿಂದೂ‌- ಮಲಯಾಳಿ ಫುಟ್ಬಾಲ್ ‌ಪಂದ್ಯಾವಳಿಗೆ ಚಾಲನೆ

KannadaprabhaNewsNetwork |  
Published : Jan 28, 2024, 01:22 AM IST
ಚಿತ್ರ : 27ಎಂಡಿಕೆ1 : ಕೊಡಗು ಜಿಲ್ಲಾ ಹಿಂದೂ‌ ಮಲಯಾಳಿ ಫುಟ್ಬಾಲ್ ‌ಪಂದ್ಯಾವಳಿ | Kannada Prabha

ಸಾರಾಂಶ

ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಬಾಂಧವರ ನಡುವೆ ಲೀಗ್ ಮಾದರಿಯ ‌ಫುಟ್ಬಾಲ್ ಪಂದ್ಯಾವಳಿಗೆ ಮರಗೋಡಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು. ಕೆ.ಎಸ್ ರಮೇಶ್ ಟೂರ್ನಿಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಇದೇ ಬಾರಿಗೆ ನಡೆಯುತ್ತಿರುವ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಬಾಂಧವರ ನಡುವೆ ಲೀಗ್ ಮಾದರಿಯ ‌ಫುಟ್ಬಾಲ್ ಪಂದ್ಯಾವಳಿಗೆ ಮರಗೋಡಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಡಿಕೇರಿ ತಾಲೂಕು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ.ಎಸ್ ರಮೇಶ್ ಶನಿವಾರ ಚಾಲನೆ ನೀಡಿದರು. ಫುಟ್ಬಾಲ್ ಪಂದ್ಯ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಸಂಸ್ಥಾಪಕ ದರ್ಶನ್ ಸುಕುಮಾರ್ ಮರಗೋಡು ನೆರವೇರಿಸಿದರು. ಶ್ರೀ ಮುತ್ತಪ್ಪನ್ ಮಲಯಾಳಿ‌ ಸಮಾಜ ವಿರಾಜಪೇಟೆ ಹಾಗೂ ಶ್ರೀ ನಿಧಿ ಎಫ್.ಸಿ ಒಂಟಿಯಂಗಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಶ್ರೀನಿಧಿ ತಂಡವು 3-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಶ್ರೀನಿಧಿ ಎಫ್.ಸಿ ಪರವಾಗಿ ಸತ್ಯನ್, ದೀಕ್ಷಿತ್ ಹಾಗೂ ಶ್ರೀಜಿತ್‌ ತಲಾ ಒಂದು ಗೋಲ್ ಬಾರಿಸಿದರು. ಮುತ್ತಪ್ಪನ್ ಮಲಯಾಳಿ ಸಮಾಜದ ಪರವಾಗಿ ಕಿರಣ್ ಎರಡು ಗೋಲುಗಳಿಸಿದರು. ಗೋಣಿಕೊಪ್ಪ ಎಫ್.ಸಿ ಹಾಗೂ ಹಿಂದೂ ಮಲಯಾಳಿ ಸಮಾಜ ಮರಗೋಡು ‌ತಂಡಗಳ ನಡುವೆ ನಡೆದ ಪಂದ್ಯದಲ್ಲಿ 4- 0 ಗೋಲುಗಳ ಅಂತರದಿಂದ ಮರಗೋಡು ಮಲಯಾಳಿ ಸಮಾಜ ಗೆಲುವು ಸಾಧಿಸಿತು. ಮರಗೋಡು ಮಲಯಾಳಿ ಸಮಾಜದ ಪರವಾಗಿ ಸುನಿಲ್ 02, ದೀಕ್ಷಿತ್ ಹಾಗೂ ಉಮೇಶ್ ತಲಾ ಒಂದು ಗೋಲು ದಾಖಲಿಸಿದರು. ಕಾರ್ಗಿಲ್ ಎಫ್.ಸಿ ಕೊಡಗು ಹಾಗೂ ಜೈ ಶ್ರೀರಾಮ್ ಮಲಯಾಳಿ ಸಮಾಜ‌ ತಂಡಗಳ ನಡುವಿನ ಪಂದ್ಯವು 1-1 ಗೋಲುಗಳಿಂದ ಸಮಬಲ ಸಾಧಿಸಿತು. ಕಾರ್ಗಿಲ್ ‌ತಂಡದ ಪರವಾಗಿ ವಿಜು ಹಾಗೂ ಶ್ರೀರಾಮ್ ತಂಡದ ಪರವಾಗಿ ನವೀನ್ ಗೋಲುಬಾರಿಸಿದರು. ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು ಹಾಗೂ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡಗಳ ನಡುವಿನ ಪಂದ್ಯದಲ್ಲಿ ವಿಷ್ಣು ಹಾಗೂ ಅನೀಶ್ ಅವರ ಗೋಲುಗಳ ನೆರವಿನಿಂದ ಚಾಲೆಂಜರ್ಸ್ ಎಫ್.ಸಿ ತಂಡವು 2- 0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಾಂಗೀರ ಸತೀಶ್, ಭಾರತಿ ಪ್ರೌಢಶಾಲಾ ಮರಗೋಡು ನಿವೃತ್ತ ಮುಖ್ಯ ಶಿಕ್ಷಕಿ ಪುಷ್ಪವಲ್ಲಿ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಕಾರ್ಯದರ್ಶಿ ಉಮೇಶ್ ಮರಗೋಡು, ಅರುಣ್, ವಿಜಯ್ ಭಗೀರಥಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರೆ ನನ್ನ ವಿರುದ್ಧವೂ ಕ್ರಮ ಆಗಲಿ: ಜಮೀರ್‌
ಈಗಾಗಲೇ ಸಾಕಷ್ಟು ಅನುಭವಿಸಿದ್ದೇವೆ, ಜಮೀರ್‌ರನ್ನು ಮತ್ತೆ ಸೇರ್ಸಿಕೊಳ್ಳಲ್ಲ: ಎಚ್ಡಿಕೆ