ಕೊಡಗಿನ ಮುಂಗಾರು ಖಾದ್ಯ: ಪ್ರವಾಸಿಗರಿಗೆ ಅಚ್ಚುಮೆಚ್ಚು

KannadaprabhaNewsNetwork |  
Published : Jul 20, 2025, 01:15 AM IST
ಕೊಡಗಿನ ಮಳೆಗಾಲದ ಖಾದ್ಯಗಳು | Kannada Prabha

ಸಾರಾಂಶ

ಕೊಡಗಿನ ಈ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಖರೀದಿಸಲು ಜನರು ಜಿಲ್ಲೆಗೆ ಬರುತ್ತಾರೆ. ಜಿಲ್ಲೆಯಿಂದ ಹೊರಗಿರುವ ಕೊಡಗಿನ ಜನರಿಗೆ ಅವರ ಸಂಬಂಧಿಕರೇ ಈ ಭಕ್ಷ್ಯಗಳನ್ನು ಕಳುಹಿಸುತ್ತಾರೆ.

ಮಂಜುನಾಥ್ ಟಿ.ಎನ್.ಕನ್ನಡಪ್ರಭ ವಾರ್ತೆ ವಿರಾಜಪೇಟೆನೈಸರ್ಗಿಕ ಶ್ರೀಮಂತವಾಗಿರುವ ಕೊಡಗಿನ ಜನರು ಮುಂಗಾರನ್ನು ಇಷ್ಟಪಡುವುದು ಕೇವಲ ಪರಿಸರ ದೃಶ್ಯಕ್ಕಾಗಿ ಮಾತ್ರವಲ್ಲ, ಮಳೆಗಾಲದಲ್ಲಿ ಸಿಗುವ ವೈವಿಧ್ಯಮಯ ಕಾಡು ಸಸ್ಯ, ಅಣಬೆ, ಏಡಿ ಮತ್ತು ಮೀನುಗಳಿಂದ ತಯಾರಿಸಿದ ಆಹಾರಕ್ಕಾಗಿ. ಹೌದು, ಮಳೆಗಾಲದಲ್ಲಿ ಮಾತ್ರ ಸಿಗುವ ಈ ಆಹಾರವನ್ನು ಈ ಬಾರಿ ಕಳೆದುಕೊಂಡರೆ ಮಾಡಿಕೊಂಡರೆ ಮತ್ತೆ ಮುಂದಿನ ಮುಂಗಾರು ತನಕ ಕಾಯಲೆಬೇಕು....ಕೊಡಗಿನಲ್ಲಿ ಮಳೆಗಾಲದಲ್ಲಿ ಬೈಂಬಳೆ ಕರಿ (ಬಿದಿರು ಚಿಗುರುಗಳ ಕರಿ), ಕುಮ್ಮು ಕರಿ (ಮಶ್ರೂಮ್ ಕರಿ), ಕೆಂಬು ಕರಿ (ಕೆಸ ಕರಿ), ನಂಡ್ ಕರಿ (ಏಡಿ ಕರಿ), ಭೆಲ್ ಮೀನ್ ಕರಿ (ಪ್ರವಾಹಕ್ಕೆ ಒಳಗಾದ ಗದ್ದೆಗಳಲ್ಲಿ ಕಂಡುಬರುವ ಮೀನು), ಪೋಳೆ ಮೀನ್ ಕರಿ (ಹೊಳೆ ಮೀನು), ಥೆರ್ಮೆ ತೊಪ್ಪು ಪಲ್ಯ ಟ್ರೇಡ್‌ ಮಾರ್ಕ್‌ ಎಂದರೆ ತಪ್ಪಿಲ್ಲ.

ಮದ್ದ್ ಪಾಯಸ: ಆಟಿ ವಿಶೇಷ

ಟಿ/ಆಷಾಢ ತಿಂಗಳಲ್ಲಿ ವಿಶೇಷವಾಗಿ ಮದ್ದ್ ಪಾಯಸ ಮತ್ತು ಮದ್ದ್ ತೊಪ್ಪು (ಔಷಧ ಸೊಪ್ಪು)ನಿಂದ ಮದ್ದ್ ಪುಟ್ ತಯಾರಿಸಲಾಗುತ್ತದೆ. ಮದ್ದ್ ತೊಪ್ಪು ಸಸ್ಯದ ಎಲೆಗಳು ಮತ್ತು ಕಾಂಡಗಳಿಂದ ಪಡೆದ ಸಾರವು ಭಕ್ಷ್ಯಕ್ಕೆ, ಆಳವಾದ ನೀಲಿ-ನೇರಳೆ ಬಣ್ಣವನ್ನು ನೀಡುತ್ತದೆ. ಈ ಔಷಧವನ್ನು ಕಕ್ಕಡ ತಿಂಗಳ (ಆಟಿ) ಹದಿನೆಂಟನೇ ಹೆಚ್ಚಾಗಿ ತಯಾರಿಸಲಾಗುತ್ತದೆ. ಈ ಸಸ್ಯವು 18 ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ.

ಕೊಡಗಿನ ಈ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಖರೀದಿಸಲು ಜನರು ಜಿಲ್ಲೆಗೆ ಬರುತ್ತಾರೆ. ಜಿಲ್ಲೆಯಿಂದ ಹೊರಗಿರುವ ಕೊಡಗಿನ ಜನರಿಗೆ ಅವರ ಸಂಬಂಧಿಕರೇ ಈ ಭಕ್ಷ್ಯಗಳನ್ನು ಕಳುಹಿಸುತ್ತಾರೆ.

ಔಷಧೀಯ ಗುಣ:

ಮಳೆಗಾಲದಲ್ಲಿ ತಯಾರಿಸಲಾದ ಈ ಎಲ್ಲ ಸಾಂಪ್ರದಾಯಿಕ ಆಹಾರಗಳು ದೇಹಕ್ಕೆ ಶಾಖ ನೀಡುತ್ತದೆ. ಅಲ್ಲದೆ ಕಾಳುಮೆಣಸನ್ನು ಈ ಪ್ರದೇಶದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮಳೆಗಾಲದಲ್ಲಿ ಜನರು ಕೆಲಸ ಮಾಡುವ ಸಮಯದಲ್ಲಿ ಕಡಿತ ಮತ್ತು ಗಾಯಗಳಿಗೆ ಒಳಗಾಗುವ ಸಾಧ್ಯತೆಯಿದ್ದು, ಈ ಸಂದರ್ಭ ಸೇವಿಸುವ ಆಹಾರವು ದೇಹದ ಉಷ್ಣತೆಯನ್ನು ಹೆಚ್ಚಿಸಿದರೆ ಗಾಯಗಳು ತ್ವರಿತವಾಗಿ ಗುಣವಾಗುತ್ತದೆ ಎಂಬುದು ಹಿರಿಯರ ಮಾತು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ