ಕನ್ನಡಪ್ರಭ ವಾರ್ತೆ ಮಡಿಕೇರಿ
14 ವಯೋಮಾನದ ಬಾಲಕರ ವಿಭಾಗದಲ್ಲಿ ಲಿತೇಶ್ ಕೆ (ಸರ್ವದೈವತಾ ಶಾಲೆ) ಮತ್ತು ಅವನೀಶ್ ಕೃಷ್ಣ ಜಿ.ಎಚ್. (ಕೊಡಗು ವಿದ್ಯಾಲಯ) ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು
14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಹಲ್ಯಾ ಮನೋಹರ್ (ಸೆಂಟ್ ಮೇರಿಸ್ ಶಾಲೆ) ಮತ್ತು ದಕ್ಷತಾ ಡಿ (ಶಾಂತಿನಿಕೇತನ ಶಾಲೆ) ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು.16 ವಯೋಮಾನದ ಬಾಲಕರ ವಿಭಾಗದಲ್ಲಿ ಐಜಾನ್ (ಕೆಂದ್ರೀಯ ವಿದ್ಯಾಲಯ) ಮತ್ತು ಜಿ ಎಸ್ ಸುಧಾನ್ವ (ಜೂನಿಯರ್ ಕಾಲೇಜು ಮಡಿಕೇರಿ) ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು.
ಡಬಲ್ಸ್ ವಿಭಾಗದಲ್ಲಿ - 14 ವಯೋಮಾನದ ಬಾಲಕರ ವಿಭಾಗದಲ್ಲಿ ಶ್ಕಂದ ವಿಟಿ ಮತ್ತು ಓಂಕಾರ (ಶಾಂತಿನಿಕೇತನ) ಪ್ರಥಮ ಸ್ಥಾನ, ಅವನೀಶ್ ಕೃಷ್ಣ ಮತ್ತು ರಿಶಿತ್ ಬಿ ಟಿ (ಕೊಡಗು ವಿದ್ಯಾಲಯ) ದ್ವಿತೀಯ ಸ್ಥಾನ ಗಳಿಸಿದರು .
16 ವಯೋಮಾನ ದ ಬಾಲಕರ ಡಬಲ್ಸ್ ವಿಭಾಗದಲ್ಲಿ ಜಿ ಎಸ್ ಸುಧಾನ್ವ ಮತ್ತು ಜಿ ಎಸ್ ಶಿಶಿರ್ (ಜೂನಿಯರ್ ಕಾಲೇಜು) ಪ್ರಥಮ ಸ್ಥಾನ, ರಫಾನ್ ಮತ್ತು ಶ್ರೇಯಸ್ ವೆಂಕಟಾದ್ರಿ (ಕೊಡಗು ವಿದ್ಯಾಲಯ) ದ್ವಿತೀಯ ಸ್ಥಾನ ಗಳಿಸಿದರು .
ಸಮಾರೋಪ ಸಮಾರಂಭದಲ್ಲಿ ಮಂಗಳೂರು ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ನಿವೃತ್ತ ಡೀನ್ ಡಾ. ಶಿವಪ್ರಸಾದ ಕೆ, ಮಡಿಕೇರಿಯ ರೊಟೇರಿ ನಿದೇ೯ಶಕ ದೇವಣಿರ ತಿಲಕ್ ಕೊಡಗು ವಿದ್ಯಾಲಯದ , ಪ್ರಾಂಶುಪಾಲ ಸುಮಿತ್ರ ಕೆ.ಎಸ್ , ಆಡಳಿತ ನಿರ್ವಹಣಾಧಿಕಾರಿ ರವಿ ಪಿ, ಟೇಬಲ್ ಟೆನ್ನಿಸ್ ತರಬೇತುದಾರ ರಚನ್ ಪೊನ್ನಪ್ಪ ಹಾಗೂ ಟೂರ್ನಮೆಂಟ್ ಸಂಚಾಲಕರಾದ ದಿನೇಶ್ ಭಾಗವಹಿಸಿದ್ದರು.