ಕನ್ನಡಪ್ರಭ ವಾರ್ತೆ ಮಡಿಕೇರಿ
ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ‘ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್’ ಪಂದ್ಯಾವಳಿಯ ಮಂಗಳವಾರದ ಮೊದಲ ಪಂದ್ಯದಲ್ಲಿ ಕೊಡವ ವಾರಿಯರ್ಸ್ ತಂಡ ಪ್ರಗತಿ ಕ್ರಿಕೆಟರ್ಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.ಟಾಸ್ ಗೆದ್ದ ಕೊಡವ ವಾರಿಯರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಗತಿ ಕ್ರಿಕೆಟರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 113 ರನ್ ಸೇರಿಸಿತು.ಇದನ್ನು ಬೆನ್ನಟ್ಟಿದ ಕೊಡವ ವಾರಿಯರ್ಸ್ 15.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಗೆಲವು ದಾಖಲಿಸಿತು.
ಕೊಡವ ವಾರಿಯರ್ಸ್ ನ ಸಂಜಯ್ ಎಂ.ಎಂ 28 ಬಾಲ್ ಗಳಲ್ಲಿ 30 ರನ್ ಗಳನ್ನು ಗಳಿಸಿ, 14 ರನ್ ಗಳಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.ಎರಡನೇ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ಟೀಮ್ ವೈಲ್ಡ್ ಫ್ಲವರ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಲ್ಡ್ ಫ್ಲವರ್ ತಂಡ 15 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 86 ರನ್ ಗಳಿಸಿತು.ಕೂರ್ಗ್ ಬ್ಲಾಸ್ಟರ್ಸ್ ತಂಡ 13 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು 87 ರನ್ ಗಳನ್ನು ದಾಖಲಿಸಿ ವಿಜಯ ಸಾಧಿಸಿತು.
ಕೂರ್ಗ್ ಬ್ಲಾಸ್ಟರ್ಸ್ ತಂದ ನಿಖಿಲ್ ಬೋಪಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು. -------------- ಇಂದಿನ ಪಂದ್ಯ -ಪಂದ್ಯ -1 (ಬೆಳಗ್ಗೆ 8.30ಕ್ಕೆ): ಟೀಮ್ ಲೆವರೇಜ್ / ಪ್ರಗತಿ ಕ್ರಿಕೆಟರ್ಸ್-ಪಂದ್ಯ -2 (ಅಪರಾಹ್ನ 1.30ಕ್ಕೆ) ಅಂಜಿಗೇರಿ ನಾಡ್ / ರಾಯಲ್ ಟೈಗರ್ಸ್