ಪೊನ್ನಂಪೇಟೆ: ಕೊಡವ ಸಾಂಸ್ಕೃತಿಕ ದಿನಾಚರಣೆ, ಪುತ್ತರಿ ನಮ್ಮೆ

KannadaprabhaNewsNetwork | Published : Dec 27, 2024 12:49 AM

ಸಾರಾಂಶ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ದಿನಾಚರಣೆ ಮತ್ತು ಪುತ್ತರಿ ನಮ್ಮೆ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬುಧವಾರ ಕೊಡವ ಸಾಂಸ್ಕೃತಿಕ ದಿನಾಚರಣೆ ಮತ್ತು ಪುತ್ತರಿ ನಮ್ಮೆ ಸಂಭ್ರಮದಿಂದ ಜರುಗಿತು.

ಕಾವೇರಿ ಮಾತೆಯ ಪ್ರತಿಮೆ ಎದುರು ಪ್ರಾರ್ಥಿಸಿ ‘ದುಡಿಕೊಟ್ಟ್ ಪಾಟ್’ ಮೂಲಕ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಉದ್ಘಾಟಿಸಿದರು. ಮಕ್ಕಳು, ಯುವಕ ಯುವತಿಯರು, ಹಿರಿಯರು ಸಾಂಸ್ಕೃತಿಕ ಉಡುಪಿನಲ್ಲಿ ಪೈಪೋಟಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಸಾಂಸ್ಕೃತಿಕ ಸ್ಪರ್ಧೆ:

ಕೊಡವ ಜಾನಪದ ಕಲೆಯಾದ ಬೊಳಕಾಟ್, ಪುತ್ತರಿ ಕೋಲಾಟ್, ಪರೆಯಕಳಿ, ಕಪ್ಪೆಯಾಟ್, ವಾಲಗತಾಟ್, ಉಮ್ಮತಾಟ್ ಪೈಪೋಟಿಯಲ್ಲಿ ಕೊಡವ ಸಾಂಸ್ಕೃತಿಕ ವೈಭವ ಪ್ರದರ್ಶನವಾಯಿತು. ಪ್ರೌಢಶಾಲೆ ವರೆಗೆ ಹಾಗೂ ಪ್ರೌಢಶಾಲೆ ಮೇಲ್ಪಟ್ಟು ಎರಡು ವಿಭಾಗದಲ್ಲಿ ಶಾಲಾ ಕಾಲೇಜಿನ ಮಕ್ಕಳು, ಸಾರ್ವಜನಿಕರು ಸೇರಿ ಜಿಲ್ಲೆಯ ವಿವಿಧೆಡೆಯ 50ಕ್ಕೂ ಅಧಿಕ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ನೂರಾರು ಜನ ಪ್ರೇಕ್ಷಕರು ಭಾಗವಹಿಸಿ ಸಂಭ್ರಮಿಸಿದರು.

ಸಾಂಸ್ಕೃತಿಕ ಸ್ಪರ್ಧೆ ಫಲಿತಾಂಶ:

ಕೋಲಾಟ್ (ದೊಡ್ಡವರು) ಬೇಗೂರು ಪೂಳೆಮಾಡ್ ಈಶ್ವರ ತಂಡ ಪ್ರಥಮ, ಬಿರುನಾಣಿ ಪುತ್ತು ಭಗವತಿ ತಂಡ ದ್ವಿತೀಯ, ಶ್ರೀಮಂಗಲ ಕೊಡವ ಸಮಾಜ ತೃತೀಯ.

ಚಿಕ್ಕವರ ವಿಭಾಗ: ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆ ಪ್ರಥಮ, ಶ್ರೀಮಂಗಲ ಕೊಡವ ಸಮಾಜ ದ್ವಿತೀಯ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ತೃತೀಯ.

ಬೊಳಕಾಟ್ ದೊಡ್ಡವರ ವಿಭಾಗ: ಬೇಗೂರು ಪೂಳೆಮಾಡ್ ಈಶ್ವರ ಪ್ರಥಮ, ಬಿರುನಾಣಿ ಪುತ್ತುಭಗವತಿ ದ್ವಿತೀಯ.

ಸಣ್ಣವರ ವಿಭಾಗ: ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆ ಪ್ರಥಮ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ದ್ವಿತೀಯ, ಬಿರುನಾಣಿ ಸುಜ್ಯೋತಿ ಲಯನ್ಸ್ ಶಾಲೆ ತೃತೀಯ.

ಪರೆಯಕಳಿ ದೊಡ್ಡವರ ವಿಭಾಗ: ಬೇಗೂರ್ ಪೂಳೆಮಾಡ್ ಈಶ್ವರ ಪ್ರಥಮ, ತಿಂಗಕೊರ್ ಮೊಟ್ಟ್ ತಲಾಕಾವೇರಿ ದ್ವಿತೀಯ, ಬಿರುನಾಣಿ ಪುತ್ತುಭಗವತಿ ತೃತೀಯ.

ಸಣ್ಣವರ ವಿಭಾಗ: ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆ ಪ್ರಥಮ, ಶ್ರೀಮಂಗಲ ಕೊಡವ ಸಮಾಜ ದ್ವಿತೀಯ, ಹುದಿಕೇರಿ ಲಿಟಲ್ ಫ್ಲವರ್ ಶಾಲೆ ತೃತೀಯ.

ಉಮ್ಮತಾಟ್: ಬಾಡಗರ ಕೇರಿ ಮಹಿಳಾ ಸಮಾಜ ಪ್ರಥಮ, ಬೇಗೂರು ಪೊಮ್ಮಕ್ಕಡ ಸಂಘ ದ್ವಿತೀಯ, ಗೋಣಿಕೊಪ್ಪ ಕಾವೇರಿ ಕಾಲೇಜು ತೃತೀಯ.

ಸಣ್ಣವರ ವಿಭಾಗ: ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆ ಪ್ರಥಮ, ಪೊನ್ನಂಪೇಟೆ ಅಪ್ಪಚ್ಚಕವಿ ಶಾಲೆ ದ್ವಿತೀಯ, ಗೋಣಿಕೊಪ್ಪ ಲಯನ್ ಶಾಲೆ ತೃತೀಯ.

ವಾಲಗತಾಟ್ ಪುರುಷರ ವಿಭಾಗ ದೊಡ್ಡವರು: ಕೊಣಿಯಂಡ ಮಂಜು ಮಾದಯ್ಯ ಪ್ರಥಮ, ಮಾಚಿಮಾಡ ಡಾಲಿ ಮಂದಣ್ಣ ದ್ವಿತೀಯ, ಚೆಟ್ಟಂಗಡ ಪುನೀತ್ ತೃತೀಯ.

ಸಣ್ಣವರ ವಿಭಾಗ: ಬಾಚಾಗಡ ಪೃಥ್ವಿ ಪ್ರಥಮ, ಬೊಳ್ಳಾಜಿರ ಕಿಲನ್ ಕಾರ್ಯಪ್ಪ ದ್ವಿತೀಯ, ಕೋಟೆರ ನಾಣಯ್ಯ ತೃತೀಯ.

ಮಹಿಳೆಯರ ವಿಭಾಗ ದೊಡ್ಡವರು: ಪೊಕಚಂಡ ಲಿಖಿತ ಪ್ರಥಮ, ಅಣ್ಣೀರ ರೂಪ ಪೆಮ್ಮಯ್ಯ ದ್ವಿತೀಯ, ಬಲ್ಯಮೀದೇರಿರ ಧೃತಿ ತೃತೀಯ.

ಸಣ್ಣವರ ವಿಭಾಗ: ಉದ್ದಿನಾಡಂಡ ದಿಯಾ ದೇಚಮ್ಮ ಪ್ರಥಮ, ಕೊಳ್ಳಿಮಾಡ ಲವೀನ ದ್ವಿತೀಯ, ಚೇರಂಡ ಅನ್ವಿತ ತೃತೀಯ.

ಕಪ್ಪೆಯಾಟ್ ದೊಡ್ಡವರ ವಿಭಾಗ: ಕರ್ತಮಾಡ ಅನೂಪ್ ಅಯ್ಯಪ್ಪ ಪ್ರಥಮ, ಚೊಟ್ಟೆಯಾಂಡಮಾಡ ನಾಣಯ್ಯ ದ್ವಿತೀಯ, ಭೈರಂಡ ಮುತ್ತಣ್ಣ ತೃತೀಯ.

ಸಣ್ಣವರ ವಿಭಾಗ: ಜಮ್ಮಡ ದೇವಯ್ಯ ಪ್ರಥಮ, ಮಚ್ಚಮಾಡ ಸೂರ್ಯ ಪೂವಣ್ಣ ದ್ವಿತೀಯ, ಮಾಣೀರ ರೋನಕ್ ತೃತೀಯ ಸ್ಥಾನ ಪಡೆದು ಬಹುಮಾನ ಪಡೆದರು.

ತೀರ್ಪುಗಾರರು: ಬೊಳಿಯಂಗಡ ದಾದು ಪೂವಯ್ಯ, ನಾಣಮಂಡ ವೇಣು ಮಾಚಯ್ಯ, ಸುಳ್ಳಿಮಾಡ ಶಿಲ್ಪಾ, ಬಲ್ಲಾಡಿ ಚಂಡ ಕಸ್ತೂರಿ ಕಾರ್ಯನಿರ್ವಹಿಸಿದರು.

ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೇಮಾಡ ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಕಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ನಿರ್ದೇಶಕರಾದ ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಮೂಕಳೆರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜುಸೋಮಯ್ಯ, ಚೆಪ್ಪುಡೀರ ರಾಕೇಶ್ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ ಹಾಜರಿದ್ದರು.

Share this article