ಕೊಡವ ಕೌಟುಂಬಿಕ ಹಾಕಿ: ಕೊಲ್ಲಿರ ತಂಡಕ್ಕೆ ಭರ್ಜರಿ ಜಯ

KannadaprabhaNewsNetwork |  
Published : Apr 10, 2026, 02:15 AM IST
9-ಎನ್ ಪಿ ಕೆ-2.ನಾಪೋಕ್ಲು ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ  ಕೊಡವ ಕೌಟುಂಬಿಕ ಹಾಕಿಯ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ರೋಚಕ ಕ್ಷಣಗಳು.9-ಎನ್ ಪಿ ಕೆ-3.ಯುವ ಆಟಗಾರ ಕೀತಿಯಂಡ  ಪೂರ್ವಿ ಪೂವಣ್ಣ ಕರ್ನಾಟಕ ಸಬ್ ಜೂನಿಯರ್ ರಾಷ್ಟ್ರೀಯ ತಂಡದ  ಆಟಗಾರ ತಂಡದಲ್ಲಿ ಆಟವಾಡಿ ಗಮನಸೆಳೆದರು. . | Kannada Prabha

ಸಾರಾಂಶ

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಕೊಲ್ಲಿರ ತಂಡ ಬಲ್ಲಂಡ ತಂಡದ ವಿರುದ್ಧ 8-0 ಅಂತರದ ಭರ್ಜರಿ ಜಯ ಸಾಧಿಸಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ 26ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಕೊಲ್ಲಿರ ತಂಡ ಬಲ್ಲಂಡ ತಂಡದ ವಿರುದ್ಧ 8-0 ಅಂತರದ ಭರ್ಜರಿ ಜಯ ಸಾಧಿಸಿತು. ಕೊಲ್ಲಿರ ತಂಡದ ಕೊಲ್ಲಿರ ಜಾನೀಶ್ ಅಪ್ಪಯ್ಯ ಅತಿ ವೇಗದ ಗೋಲು (21 ಸೆಕೆಂಡ್) ದಾಖಲಿಸಿದರು.

ಉಳಿದಂತೆ ನಾಯಕಂಡ, ಮೇಕತಂಡ, ಪಾಲೆಯಡ, ಕಯ್ಮಂಡ, ಬೊಳ್ಳಚೆಟ್ಟಿರ, ತಡಿಯಂಗಡ

ತಂಡಗಳು ಗೋಲು ಗಳಿಸಲು ವಿಫಲವಾದವು. ನಾಯಕಂಡ ತಂಡ ಅಚ್ಚಕಾಳಿರ ವಿರುದ್ಧ 5-0 ಅಂತರದಿಂದ, ಕೊಟ್ಟಂಗಡ ಮೇಕ ತಂಡ ವಿರುದ್ಧ 5-0 ಅಂತರದಿಂದ, ಪಾಲೆಯಡ ಆಪಾಡಂಡ ವಿರುದ್ಧ 1-0 ಅಂತರದಿಂದ, ಮುಕ್ಕಾಟಿರ (ಕುಂಬಳದಾಳು)

ಕುಯ್ಮಂಡ ವಿರುದ್ಧ 2-0 ಅಂತರದಿಂದ, ಚೇಂದಿರ ತಾಳಚಿರ ವಿರುದ್ಧ 5-0 ಅಂತರದಿಂದ, ತಡಿಯಂಗಡ ಮಾದೆಯಂಡ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದವು. ಬಾಚಳ್ಳಿರ ಮತ್ತು ನಾಗಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 1-1 ಅಂತರದ ಸಮಬಲ ಸಾಧಿಸಿದವು. ನಂತರ ನಡೆದ ಟೈ ಬ್ರೇಕರ್ ನಲ್ಲಿ ಬಾಚಳ್ಳಿರ ತಂಡ 3-1 ಅಂತರದಿಂದ ಗೆಲುವು ಸಾಧಿಸಿತು. ಮೂಡೇರ ಮತ್ತು ಮುಂಡಚಾಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2- 2 ಸಮಬಲದ ಹೋರಾಟ ನಡೆಸಿದವು ನಂತರ ಟೈ ಬ್ರೇಕರ್ ನಲ್ಲಿ ಮುಂಡಚಾಡಿರ ತಂಡ 4-2 ಅಂತರದಿಂದ ಗೆಲುವು ಸಾಧಿಸಿತು.

ಚೇಂದ್ರಿಮಾಡ ಮತ್ತು ಬೊಜ್ಜಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2-2 ಅಂತರದ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಚೇಂದ್ರಿಮಾಡ 3-2 ಅಂತರದಿಂದ ಜಯ ಸಾಧಿಸಿತು. ಉಳಿದಂತೆ ಕಲ್ಲುಮಾಡಂಡ ಪಾಂಡಂಡ ವಿರುದ್ಧ 3-1ರಿಂದ, ಬಲ್ಲಂಡ ಕೊಲ್ಲಿರ ವಿರುದ್ಧ 2-1 ರಿಂದ, ಕರ್ತ ಚಿರ

ತಾತಪಂಡ ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿದವು. ಯುವ ಆಟಗಾರ ಕೀತಿಯಂಡ ಪೂರ್ವಿ ಪೂವಣ್ಣ ಕರ್ನಾಟಕ ಸಬ್ ಜೂನಿಯರ್ ರಾಷ್ಟ್ರೀಯ ತಂಡದ ಆಟಗಾರ ತಂಡದಲ್ಲಿ ಆಟವಾಡಿ ಗಮನ ಸೆಳೆದರು.

ಇಂದಿನ ಪಂದ್ಯಗಳು:

ಮೈದಾನ19 ಕ್ಕೆ ಪೊರಂಗಡ v/s ಮಾದೇಟಿರ

10ಕ್ಕೆ ಮೇದುರ v/s ಕಲ್ಲೆಂಗಡ (ಬೆಳ್ಳೂರ್)

ಕುಂಜಿಲಂಡ v/s ಚಾಮೇರ 1 ಕ್ಕೆ ಪಾರವಂಗಡ v/s ಪಾಲೇಕಂಡ

2 ಕ್ಕೆ ಕಲ್ಲೇಂಗಡ (ನಾಪೋಕ್ಲು) v/s ಚೊಟ್ಟಂಗಡ

3ಕ್ಕೆ ಪುಲ್ಲಂಗಡ v/s ಚೆರುಮಂದಂಡ

ಮೈದಾನ 29ಕ್ಕೆ ನಂದೇಟಿರ v/s ಪಟ್ರಪಂಡ10 ಕ್ಕೆ ಮುಕ್ಕಾಟಿರ (ಮೂವತ್ತೋಕ್ಲು)

v/s ತಂಬುಕುತ್ತೀರ11ಕ್ಕೆ ಮಚ್ಚಂಡ v/s ಚಾವಂಡ12 ಕ್ಕೆ ಉದಿಯಂಡ v/s ಬೊಳ್ಳಿಮಾಡ1ಕ್ಕೆ ಕೇಚೆಟ್ಟೀರ v/s ಮಾಪನಮಾಡ2 ಕ್ಕೆ ಕಬ್ಬಚ್ಚೀರ v/s ದೇಯಂಡ3ಕ್ಕೆ ಬಯವಂಡ v/s ತೀತರಮಾಡ

ಮೈದಾನ 39ಕ್ಕೆ ಚೀಯಕ್ ಪೂವಂಡ v/s ಕಾಳಚಂಡ 10ಕ್ಕೆ ಬೊಳಿಯಂಡ v/s ಪೊನ್ನೊಲ್ತಂಡ 11ಕ್ಕೆ ಮೋರ್ಕಂಡ v/s ವಾಂಚಿರ

12ಕ್ಕೆ ಅಪ್ಪಾರಂಡ v/s ತಾಪಂಡ 1ಕ್ಕೆ ಮಂದೆಯಂಡv/s ಚೆಯ್ಯಂಡ (ಮುಗುಟಗೇರಿ)2ಕ್ಕೆ ಪಳಂಗಿಯಂಡ v/s ಬೈರೇಟಿರ 3ಕ್ಕೆನಂದಿನೆರವಂಡ v/ s ತೇಲಪಂಡ

3.30ಕ್ಕೆ ಮುದ್ದಂಡ v/s ಬಟ್ಟಿಯಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹನುಮಗಿರಿ ಬ್ರಹ್ಮಕಲಶ: ಪುತ್ತೂರಿನಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
ಈ ವರ್ಷವೂ ಮಂಗಳೂರಲ್ಲೇ ಅಂ.ರಾ. ಬ್ಯಾಡ್ಮಿಂಟನ್‌ ಟೂರ್ನಿ