ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ
ಕಪ್ ಹಾಕಿ ಪಂದ್ಯಾವಳಿಯ ಮಂಗಳವಾರದ ಪಂದ್ಯಗಳಲ್ಲಿ ಕಡೆಮಾಡ ತಂಡವು ಪೊನ್ನಿಮಾಡ ವಿರುದ್ಧ 6 ಗೋಲು ಗಳಿಸುವುದರೊಂದಿಗೆ ಭರ್ಜರಿ ಜಯ ಸಾಧಿಸಿತು.ಕಡೆ ಮಾಡತಂಡದ ಆಟಗಾರರಾದ ಅನುಷ್ ಕರುಂಬಯ್ಯ ಮೂರು ಗೋಲು ಹೊಡೆದರೆ ಕಡೆಮಾಡ ರಚನ್ ಚರ್ಮಣ, ಕಡೆಮಾಡ ಕಾವೇರಪ್ಪ, ಕಡೆ ಮಾಡ ಮಂದಣ್ಣ ತಲಾ ಒಂದು ಗೋಲು ಹೊಡೆದರು. ಆ ಮೂಲಕ ಪೊನ್ನಿಮಾಡ ತಂಡದ ವಿರುದ್ಧ 6-0 ಅಂತರದ ಜಯ ಸಾಧಿಸಿದರು.ಪೇರಿಯಂಡ ತಂಡವು ಮಲ್ಲಚಿರ ತಂಡದ ವಿರುದ್ಧ 5-0 ಅಂತರದಿಂದ ಹಾಗೂ ಪಾಲಂದಿರ ತಂಡವು ಚಪ್ಪಂಡ ವಿರುದ್ಧ 5-0 ಅಂತರದಿಂದ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.
ನೆರ್ಪಂಡ ಮತ್ತು ಬಲ್ಟಿಕಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ನೆರ್ಪಂಡ ತಂಡ 3- 0 ಅಂತರದಿಂದ ಜಯ ಸಾಧಿಸಿದರೆ ಮಾರ್ಚಂಡ ಮತ್ತು ಚೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಳಮಡ ತಂಡ 2-1 ಅಂತರದ ಗೆಲವು ಸಾಧಿಸಿತು. ಅಪ್ಪಾರಂಡ ಮತ್ತು ಮುಂಡ ಚಾಡಿರ ತಂಡಗಳ ನಡುವೆ 1-1 ಅಂತರದ ಸಮಬಲ ದ ಹೋರಾಟ ನಡೆಯಿತು. ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಮುಂಡಚಾಡಿರ ತಂಡವು 5 ಗೋಲು ಗಳಿಸುವುದರ ಮೂಲಕ ಅಪಾರಂಡ ವಿರುದ್ಧ ಗೆಲವು ಸಾಧಿಸಿತು.ಕೀತಿಯಂಡ ಮತ್ತು ಐಯ್ಯನೆರವಂಡ ತಂಡಗಳ ನಡೆದ ನಡೆದ ಪಂದ್ಯದಲ್ಲಿ ಐಯನೆರವಂಡ ಮುಂದಿನ ಸುತ್ತು ಪ್ರವೇಶಿಸಿದರೆ ಮುಂಡ್ಯೋಳಂಡ ಮತ್ತು ಐಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಐಚೆಟ್ಟಿರ ಮುಂದಿನ ಸುತ್ತು ಪ್ರವೇಶಿಸಿತು.
ಉಳಿದಂತೆ ನಂದೇಟಿರ ವಿರುದ್ಧ ತೀತರಮಾಡ, ಪೋರಂಗಡ ತಂಡದ ವಿರುದ್ಧ ಅದೇಂಗಡ, ಅಲ್ಲುಮಾಡ ತಂಡದ ವಿರುದ್ಧ ಬಿದ್ದಾಟಂಡ ತಂಡಗಳು ಗೆಲವು ಸಾಧಿಸಿದವು. ಆಯ್ಲಪಂಡ ವಿರುದ್ಧ ಸ್ಪರ್ಧಿಸಿದ ಕಾಡಪನೇರ ತಂಡವು ಗೆಲವು ಸಾಧಿಸಿತು. ಚಿಕ್ಕಂಡ ತಂಡವು ಬಟ್ಟಿಯಂಡ ತಂಡದ ವಿರುದ್ಧ 2-1 ಅಂತರದ ಜಯ ಸಾಧಿಸಿತು.ಕುದ್ರಂಡ ವಿರುದ್ಧ ಕಾಂಗಿರ ತಂಡವು, ಕೈಪಟ್ಟಿರ ತಂಡದ ವಿರುದ್ಧ ಚೆಟ್ಟಿಮಾರಂಡ ನಾಪನೆರವಂಡ ತಂಡದ ವಿರುದ್ಧ ತಾತಂಡ ತಂಡಗಳು ಗೆಲವು ಸಾಧಿಸಿದವು. ಮೈಂದ ಪಂಡ ಮತ್ತು ಅಯ್ಯಮಡ ನಡುವೆ ಸಮಬಲದ ಹೋರಾಟ ನಡೆಯಿತು. ಪೆನಾಲ್ಟಿ ಸ್ಟ್ರೋಕ್ ನಲ್ಲಿ ಮೈಂದಪಂಡ ತಂಡ ನಾಲ್ಕು ಗೋಲು ಗಳಿಸಿದರೆ ಐಯಮಾಡ ತಂಡ 3 ಗೋಲು ಗಳಿಸಿ ಪರಾಭವಗೊಂಡಿತು. ಮಂಡೇಡ ತಂಡದ ವಿರುದ್ಧ ಪೊನ್ನಚೆಟ್ಟೀರ ಗೆಲವು ಸಾಧಿಸಿತು.
...............ಇಂದಿನ ಪಂದ್ಯಗಳುಮೈದಾನ ಒಂದು
9 ಗಂಟೆಗೆ ನಂಬುಡ ಮಂಡ- ಪೊನ್ನಾಲತಂಡ10 ಗಂಟೆಗೆ ಕಿರಿಯಮಾಡ-ಬೈರೆಟ್ಟಿರ
11 ಗಂಟೆಗೆ ಕಾಂಜಿತಂಡ-ಮದ್ರೀರ(ಮಾದಾಪುರ)
1 ಗಂಟೆಗೆ ಕೊಕ್ಕಲೆಮಾಡ -ಬಾಚಮಂಡ2 ಗಂಟೆಗೆ ಬೊಳ್ತಂಡ -ಅದೇಂಗಡ
3 ಗಂಟೆಗೆ ಪುಚ್ಚಿಮಾಡ-ಕುಂಡ್ಯೋಳಂಡ.................
ಮೈದಾನ ಎರಡು9 ಗಂಟೆಗೆ ನಡಿಕೇರಿಯಂಡ- ವಾಟೇರಿರ10 ಗಂಟೆಗೆ ಮೊಣ್ಣಂಡ-ಆಪಟ್ಟಿರ
11 ಗಂಟೆಗೆ ತಂಬಂಡ- ಪಾಲೆಯಡ1 ಗಂಟೆಗೆ ಕಲ್ಲೇಂಗಡ- ಪಳಂಗೇಟಿರ
2 ಗಂಟೆಗೆಪಾಲಚಂಡ-ಬಿಜ್ಜಂಡ3 ಗಂಟೆಗೆ ಬೊಜ್ಜಂಗಡ -ಮುದ್ದಿಯಡ
...............ಮೈದಾನ 39 ಗಂಟೆಗೆ ಕೆಕಡ-ಕೂಪದಿರ
10 ಗಂಟೆಗೆ ಅಮ್ಮಾನಕುಟ್ಟಂಡ-ಬೊಟ್ಟೋಳಂಡ11 ಕುಪ್ಪಣಮಾಡ-ನೆಲ್ಲಿರ
1 ಗಂಟೆಗೆ ಚೊಟ್ಟೇರ -ಕಾಯಪಂಡ2 ಗಂಟೆಗೆ ಚೊಟ್ಟೆಮಾಡ -ಜಬ್ಬಂಡ
3 ಗಂಟೆಗೆ ಬಲ್ಯಂಡ-ಚೆರುವಾಳಂಡ