ನಾಪೋಕ್ಲುಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ ಸುಳ್ಳಿಮಾಡ ಅಪ್ಪಚೆಟ್ಟೋಳಂಡ ತಂಡದ ವಿರುದ್ಧ 6-0 ಅಂತರದಿಂದ ಭರ್ಜರಿ ಗೆಲವು ಸಾಧಿಸಿತು.
ದುಗ್ಗಳ ಸದಾನಂದಕನ್ನಡಪ್ರಭವಾರ್ತೆ ನಾಪೋಕ್ಲು
ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಬುಧವಾರ ಸುಳ್ಳಿಮಾಡ ಅಪ್ಪಚೆಟ್ಟೋಳಂಡ ತಂಡದ ವಿರುದ್ಧ 6-0 ಅಂತರದಿಂದ ಭರ್ಜರಿ ಗೆಲವು ಸಾಧಿಸಿತು. ಸುಳ್ಳಿಮಾಡ ತಂಡದ ಆಟಗಾರರಾದ ಸಜಿತ್-3, ದಮನ್-1, ಆಶಿಕ್ ಪೂಣಚ್ಚ-1ದೀಪಕ್ ಮೊಣ್ಣಪ್ಪ-1.ಗೋಲುಗಳಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಮತ್ತೊಂದು ಪಂದ್ಯದಲ್ಲಿ ಕೋಟೇರ ಮುಕ್ಕಾಟಿರ (ಕುಂಬಳದಾಳು) ತಂಡದವಿರುದ್ಧ 5-0 ಅಂತರದ ಗೆಲುವು ಪಡೆದರೆ , ಪೆಮ್ಮಂಡ ದಾಸಂಡ ವಿರುದ್ಧ 5-1ರಿಂದ ಗೆಲವು ಸಾಧಿಸಿತು.
ಉಳಿದಂತೆ ಕೊಂಗಂಡ ಮತ್ತು ಮೊಳ್ಳೇರ ವಿರುದ್ಧ 3-1ರಿಂದ, ನಾಪಂಡ ಮತ್ತು ಮಚ್ಚುರ ವಿರುದ್ಧ 4-0ರಿಂದ, ಕುಂಡ್ಯೋಳಂಡ ಬಾಚಮಂಡ ವಿರುದ್ಧ 4 -0 ಅಂತರದಿಂದ, ಚೇಂದಿರ ಮತ್ತು ಚೊಟ್ಟೆಯಂಡ ವಿರುದ್ಧ 2-0 ರಿಂದ, ಮಲ್ಲಂಡ ಚೆನ್ನಪಂಡ ವಿರುದ್ಧ 2-0 ಅಂತರದಿಂದ,, ಮಾದೆಯಂಡ ಮಂಡೀರ(ನೆಲಜಿ) ವಿರುದ್ಧ 2-1ರಿಂದ,ಮಂಡೀರ (ಮೂವತೋಕ್ಲು) ಬಾಚಳ್ಳೀರ ವಿರುದ್ಧ 2-0 ಅಂತರದಿಂದ, ಕಾಳೆಂಗಡ ವಾಟೇರಿರ ವಿರುದ್ಧ 2-1ರಿಂದ, ಅಲ್ಲಪಂಡ ತೀತಿಮಾಡ ವಿರುದ್ಧ 2-1ರಿಂದ, ಚೌರೀರ (ಹೊದ್ದೂರ್) ಚೇಂದ್ರಿಮಾಡ (ನಾಂಗಾಲ) ವಿರುದ್ಧ 3-0 ಅಂತರದಿಂದ, ಚೌರೀರ (ಹೊದವಾಡ) ಅಜ್ಜಿನಂಡ ವಿರುದ್ಧ 3-2 ಅಂತರದಿಂದ, ಐತಿಚಂಡ ಪುಗ್ಗೇರ ವಿರುದ್ದ 3-1 ಅಂತರದಿಂದ, ಮೂಕಳಮಾಡ ಪೋರಂಗಡ ವಿರುದ್ದ 3-0 ಅಂತರದಿಂದ ಗೆಲುವು ಸಾಧಿಸಿತು.
ಚೆಯ್ಯಂಡ ಮತ್ತು ಕಾಡ್ಯಮಾಡ ತಂಡಗಳನಡುವೆ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲರಾದವು. ನಂತರ ಟೈ ಬ್ರೇಕರ್ ನಲ್ಲಿ ಕಾಡ್ಯಮಾಡ 4-2 ರಿಂದ ಗೆಲುವು ಸಾಧಿಸಿತು. ಅಪ್ಪಂಡೇರಂಡ ಮತ್ತು ಮೇದುರ ತಂಡಗಳೂ 2-2 ಗೋಲುಗಳ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಅಪ್ಪಡೇರಂಡ 4-3 ಅಂತರದಿಂದ ಜಯಸಾಧಿಸಿತು. ಮತ್ರಂಡ ಮತ್ತು ಕಾಂಡೇರ ವಿರುದ್ಧ 2-0ರಿಂದ, ಮೇವಡ ಕಲ್ಲುಮಾಡಂಡ ವಿರುದ್ದ4-2ರಿಂದ, ಕಂಗಾಂಡ ಜಮ್ಮಡ ವಿರುದ್ದ 2-0 ಅಂತರದಿಂದ ಜಯಸಾಧಿಸಿದವು.76 ವರ್ಷದ ಬಾಚಮಂಡ ರಾಜ ಪೂವಣ್ಣ ಬಾಚಮಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಾಚಮಂಡ ತಂಡದ ಪರವಾಗಿ ಆಟವಾಡಿ ಗಮನಸೆಳೆದರು ಮತ್ತೋರ್ವ ಆಟಗಾರ್ತಿ ಕಲಿಯಂಡ ಸ್ಮಿತಾ ಬಾಚಮಂಡ ತಂಡದ ಪರವಾಗಿ ಆಟವಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.