ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಬುಧವಾರ ರಾತ್ರಿ ನೂರಾರು ಕೊಡವ ಮುಸ್ಲಿಂ ಸಮುದಾಯದವರು ವಿರಾಜಪೇಟೆ ಸಮೀಪದ ಐಮಂಗಲ(ಕೊಮ್ಮೆತೊಡು)ದಲ್ಲಿ ಅದ್ದೂರಿಯಾಗಿ ಆಚರಿಸಿದರು. ಕೊಡವ ಮುಸ್ಲಿಂ ಸಮುದಾಯದ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಾತಿನಿಧ್ಯ ಸಂಘಟನೆಯಾದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಐಮಂಗಲದ ಕೂತಂಬಟ್ಟಿರ ಹೆಚ್. ಸಾದಲಿ ಅವರ ಗದ್ದೆಯಲ್ಲಿ ಈ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಡಿಕೇರಿ: ಪುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಬುಧವಾರ ರಾತ್ರಿ ನೂರಾರು ಕೊಡವ ಮುಸ್ಲಿಂ ಸಮುದಾಯದವರು ವಿರಾಜಪೇಟೆ ಸಮೀಪದ ಐಮಂಗಲ(ಕೊಮ್ಮೆತೊಡು)ದಲ್ಲಿ ಅದ್ದೂರಿಯಾಗಿ ಆಚರಿಸಿದರು. ಕೊಡವ ಮುಸ್ಲಿಂ ಸಮುದಾಯದ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಾತಿನಿಧ್ಯ ಸಂಘಟನೆಯಾದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಐಮಂಗಲದ ಕೂತಂಬಟ್ಟಿರ ಹೆಚ್. ಸಾದಲಿ ಅವರ ಗದ್ದೆಯಲ್ಲಿ ಈ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆರಂಭದಲ್ಲಿ ಸಾಂಪ್ರದಾಯಿಕ ತಂಬುಟ್ಟ್, ಪುತ್ತರಿ ಗೆಣಸು ಉಪಹಾರ ಸೇವಿಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ನಂತರ ಚಿಮ್ಮಿಚ್ಚಿರ ಇಬ್ರಾಹಿಂ (ಉಮ್ಣಿ) ಹಾಜಿ ನೇತೃತ್ವದಲ್ಲಿ ಕೊಯ್ಕತ್ತಿಯನ್ನು ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾಮೂಹಿಕವಾಗಿ ಗದ್ದೆಗೆ ತೆರಳಲಾಯಿತು. ಗದ್ದೆಯಲ್ಲಿ ಕೂತಂಬಟ್ಟಿರ ಕುಟುಂಬದ ಹಿರಿಯರಾದ ಹುಸೈನ್ ಅವರು ಭತ್ತದ ತೆನೆಯನ್ನು ಕುಯ್ದು ನೆರೆದಿದ್ದವರಿಗೆಲ್ಲ ವಿತರಿಸುವ ಮೂಲಕ ಕದಿರು ತೆಗೆಯುವ ಸಾಂಪ್ರದಾಯಿಕತೆಯನ್ನು ಪೂರೈಸಿದರು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಕೋಶಾಧಿಕಾರಿ ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಇಬ್ರಾಹಿಂ (ಉಮ್ಣಿ) ಹಾಜಿ ಮಾತನಾಡಿ, ಕೊಡವ ಮುಸ್ಲಿಮರ ಸಾಂಪ್ರದಾಯಿಕ ಆಚರಣೆಗಳನ್ನು ಮತ್ತು ಪದ್ಧತಿ ಪರಂಪರೆಯನ್ನು ಸಂರಕ್ಷಿಸಬೇಕಾದ ಅನಿವಾರ್ಯತೆಯಿದೆ ಎಂದು ಒತ್ತಿ ಹೇಳಿದರಲ್ಲದೆ, ನಮ್ಮ ಪಾರಂಪರಿಕ ಹಬ್ಬಗಳು, ಆಚರಣೆಗಳು ಮತ್ತು ಕಲೆಗಳನ್ನು ಕೇವಲ ಆಡಂಬರಕ್ಕೆ ಸೀಮಿತಗೊಳಿಸದೆ, ಅವುಗಳ ಹಿಂದಿನ ಉದ್ದೇಶವನ್ನು ಅರಿತುಕೊಳ್ಳುವುದು ಬಹು ಮುಖ್ಯ. ಇದರಿಂದ ಮಾತ್ರ ಅಸ್ಮಿತೆ ಉಳಿಸಲು ಸಾಧ್ಯ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.