ಕೋಡಿಬೇಂಗ್ರೆ ದೋಣಿ ದುರಂತ: ಮೂವರ ಬಂಧನ

KannadaprabhaNewsNetwork |  
Published : Feb 01, 2026, 03:15 AM IST
ಸುಹಾಸ್ ಶ್ರೀಯಾನ್ (23),  ಕೋಡಿಬೇಂಗ್ರೆ, ಕೋಡಿ ಗ್ರಾಮ,,  ಸುಫಿಯಾನ್ (20), ಕೋಡಿಬೇಂಗ್ರೆ,  ವಾಸು ಮೆಂಡನ್ (52), ಕೋಡಿಬೇಂಗ್ರೆ, ಕೋಡಿ ಗ್ರಾಮ,  | Kannada Prabha

ಸಾರಾಂಶ

ಕೋಡಿಬೇಂಗ್ರೆ ಅಳಿವೆಬಾಗಿಲು ಬಳಿ ಸ್ವರ್ಣ ನದಿಯಲ್ಲಿ ಸಂಭವಿಸಿದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಡುಪಿ: ಕೋಡಿಬೇಂಗ್ರೆ ಅಳಿವೆಬಾಗಿಲು ಬಳಿ ಸ್ವರ್ಣ ನದಿಯಲ್ಲಿ ಸಂಭವಿಸಿದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಬಂಧಿತರನ್ನು ಸುಹಾಸ್ ಶ್ರೀಯಾನ್ (23), ಸುಫಿಯಾನ್ (20), ವಾಸು ಮೆಂಡನ್ (52) ಎಂದು ಗುರುತಿಸಲಾಗಿದೆ. ಜ. 26ರಂದು ಆರೋಪಿಗಳು ಪರವಾನಿಗೆ ಇಲ್ಲದೆ ಪ್ರವಾಸಿಗರನ್ನು ದೋಣಿ ವಿಹಾರಕ್ಕೆ ಕಳುಹಿಸಿದ್ದಲ್ಲದೇ, ಲೈಫ್ ಜಾಕೆಟ್‌ಗಳಿಲ್ಲದೆ ದೋಣಿ ಸಂಚಾರ ನಡೆಸಿದ್ದರಿಂದ ದುರಂತ ಸಂಭವಿಸಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅಂದು ದೋಣಿಯನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದ ಪರಿಣಾಮ ದೋಣಿ ಮಗುಚಿ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಆರೋಪಿಗಳ ವಿರುದ್ಧ ನಿರ್ಲಕ್ಷತನ, ಅಕ್ರಮ ಪ್ರವಾಸೋದ್ಯಮ ಚಟುವಟಿಕೆ ಹಾಗೂ ಜೀವಹಾನಿಗೆ ಕಾರಣವಾದ ಆರೋಪಗಳಡಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ