ಕೊಲಕಾಡಿ ಶಾಲೆ ಹಳೆ ವಿದ್ಯಾರ್ಥಿ ಸಂಘ ವಾರ್ಷಿಕೋತ್ಸವ

KannadaprabhaNewsNetwork |  
Published : Dec 23, 2024, 01:01 AM IST
ಕೊಲಕಾಡಿ ಶಾಲೆ  ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ | Kannada Prabha

ಸಾರಾಂಶ

ಕೊಲಕಡಿಯ ಕೆಪಿಎಸ್‌ಕೆ ಫ್ರೌಢಶಾಲೆಯ ಗಣಪತಿ ಶೆಣೈ ಕಲಾಮಂದಿರದ ವೇದಿಕೆಯಲ್ಲಿ ಕೊಲಕಾಡಿ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕನ್ನಡ ಮಾಧ್ಯಮ ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಂಘದ ಕೊಡುಗೆ ಅಭಿನಂದನೀಯವಾಗಿದ್ದು, ಶಾಲೆಯ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಉದ್ಯಮಿ ವಾಸು ಪೂಜಾರಿ ಹೇಳಿದರು.

ಕೊಲಕಡಿಯ ಕೆಪಿಎಸ್‌ಕೆ ಫ್ರೌಢಶಾಲೆಯ ಗಣಪತಿ ಶೆಣೈ ಕಲಾಮಂದಿರದ ವೇದಿಕೆಯಲ್ಲಿ ನಡೆದ ಕೊಲಕಾಡಿ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಳೆದ 26 ವರ್ಷಗಳಿಂದ ಹಿಂದಿ ಶಿಕ್ಷಕರಾಗಿ, ಕೆಪಿಎಸ್‌ಕೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಚಂದ್ರಶೇಖರ್ ರಾಥೋಡ್ ಅವರನ್ನು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಲಾಯಿತು. ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮುಂಬೈ ಅಮೆರಿಕನ್ ಲೈಬ್ರರಿಯ ನಿವೃತ್ತ ಗ್ರಂಥಪಾಲಕ ಶಶಿಧರ್ ಶೆಟ್ಟಿ ಪಂಜಿನಡ್ಕ, ಉದ್ಯಮಿ ಸಂತೋಷ್ ಶೆಟ್ಟಿ ಪರಂಕಿಲ, ಮುಂಬೈ ಉದ್ಯಮಿ ಪ್ರಮೋದ್ ಆಳ್ವ, ಉಡುಪಿ ಸ.ಪ.ಪೂ. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಛಾಯಾ ಶೆಟ್ಟಿ, ಕೊಂಕಣ ರೈಲ್ವೆ ಟಿಟಿಇ ಗಿರೀಶ್ ಎ.ಜಿ., ಶಾಲಾ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ನಿತಿನ್ ಶೆಟ್ಟಿ ಪಂಜಿನಡ್ಕ, ಪದಾಧಿಕಾರಿಗಳಾದ ಗಂಗಾಧರ ಶೆಟ್ಟಿ ಬರ್ಕೆ ತೋಟ, ರಂಗನಾಥ ಶೆಟ್ಟಿ, ಕೊಲಕಾಡಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಅಂಬರೀಶ್ ಲಮಾಣಿ, ನಿವೃತ್ತ ಮುಖ್ಯೋಪಾಧ್ಯಾಯ ನಾಗಭೂಷಣ್ ರಾವ್, ಶಿಕ್ಷಕ ವೆಂಕಟರಮಣ ಕಾಮತ್ ಫಲಿಮಾರ್, ನಿತಿನ್ ಪ್ರಕಾಶ್ ಸುಜನಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದೀಪಿಕಾ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ