ವಕ್ಫ್‌ ವಿರುದ್ಧ ನಾಳೆ ಕೋಲಾರ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

KannadaprabhaNewsNetwork |  
Published : Nov 21, 2024, 01:03 AM IST
೨೦ಕೆಎಲ್‌ಆರ್-೯ಕೋಲಾರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಪ್ರಧಾನಿ ಮನಮೋಹನ್‌ಸಿಂಗ್‌ರ ಅವಧಿಯಲ್ಲಿ ವಕ್ಫ್ ಬೋರ್ಡ್‌ನನ್ನು ಸ್ಥಾಪನೆ ಮಾಡಿದ್ದು, ಇಂದು ರೈತ, ದಲಿತರ, ಬಡವರ, ಸರ್ಕಾರಿ ಶಾಲೆ, ಮಠಮಾನ್ಯಗಳ ಆಸ್ತಿ ಕಬಳಿಸುತ್ತಿದೆ ಎಂದು ಮುನಿಸ್ವಾಮಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರರೈತರ, ಮಠಮಾನ್ಯಗಳ ಆಸ್ತಿ ತಮ್ಮದೆನ್ನುತ್ತಿರುವ ವಕ್ಫ್ ಮಂಡಳಿಯ ನೀತಿ ಖಂಡಿಸಿ, ನಗರದ ತಾಲೂಕು ಕಚೇರಿ ಮುಂದೆ ನ. 22 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೂ ನಡೆಯುವ ಬಿಜೆಪಿ ಪಕ್ಷದ ವತಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಘೋಷವಾಕ್ಯದೊಡನೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಪ್ರಧಾನಿ ಮನಮೋಹನ್‌ಸಿಂಗ್‌ರ ಅವಧಿಯಲ್ಲಿ ವಕ್ಫ್ ಬೋರ್ಡ್‌ನನ್ನು ಸ್ಥಾಪನೆ ಮಾಡಿದ್ದು, ಇಂದು ರೈತ, ದಲಿತರ, ಬಡವರ, ಸರ್ಕಾರಿ ಶಾಲೆ, ಮಠಮಾನ್ಯಗಳ ಆಸ್ತಿ ಕಬಳಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಳಿಗಾಲದಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿಗೆ ಆಗ್ರಹಿಸಿದರು.ಕೋಲಾರದ ಜಿಲ್ಲಾಧಿಕಾರಿ ವಕ್ಫ್‌ ಬೋರ್ಡ್‌ಗೆ ರೈತರ ಮತ್ತು ಸರ್ಕಾರಿ ಶಾಲೆಯ ಜಾಗ ಸೇರಿಸಿದ್ದಾರೆ. ಎಲ್ಲಿ ಯಾವ ಜಮೀನನ್ನು ವಕ್ಫ್ ಬೋರ್ಡ್‌ಗೆ ಡಿಸಿ ಕನ್ವರ್ಟ್‌ ಮಾಡಿದ್ದಾರೆ ಎಂದು ನಮ್ಮೊಂದಿಗೆ ಬಂದರೆ ಜಾಗವನ್ನು ಗುರುತಿಸಿ ನೀಡಲಾಗುತ್ತದೆ ಎಂದು ತಿರುಗೇಟು ನೀಡಿದರು.ಜಿಲ್ಲೆಗೆ ಬಂದಿರುವ ಡಿಸಿ ಅಕ್ರಂಪಾಷ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸಂವಿಧಾನದ ಅಡಿಯಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರದ ಬಿಜೆಪಿ ಅಧಿಕಾರದಲ್ಲಿ ಕೋಲಾರದ ಪ್ರಮುಖ ವೃತ್ತಗಳಲ್ಲಿ ರಸ್ತೆ ಅಗಲೀಕರಣ ವಿಚಾರದಲ್ಲಿ ಇಲ್ಲಿನ ಕಠಾರಿಗಂಗಮ್ಮ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ, ಕನಕದಾಸರ ಸಮುದಾಯ ಭವನ ಜಾಗದಲ್ಲಿ ರಸ್ತೆಗೆ ನೀಡಿದ್ದು, ಇದುವರೆಗೂ ಸಹ ಸೂಕ್ತವಾದ ಬದಲಿ ಜಾಗ ನೀಡಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ, ಆದರೆ ಕೋಲಾರದ ಜಿಲ್ಲಾಧಿಕಾರಿ ಅಕ್ರಂ ಪಾಷ ಒಂದು ಸಮುದಾಯದ ಓಲೈಕೆದಿಂದಾಗಿ ಸರ್ಕಾರಿ ಜಾಗ ರೈತರ ಜಾಗವನ್ನು ಹೊಸ ಬೋರ್ಡ್‌ಗೆ ನೀಡಿರುವುದು ಜಿಲ್ಲೆಯ ಜನತೆ ನೋಡಲಾಗಿದೆ. ಆದರೆ ಜಿಲ್ಲಾಧಿಕಾರಿ ಅವರು ನನ್ನ ಅವಧಿಯಲ್ಲಿ ಹೆಚ್ಚಿನ ಜಾಗವನ್ನು ಅಂಗನವಾಡಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ಹೇಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಅಕ್ರಂಪಾಷ ಜಿಲ್ಲೆಗೆ ಆಗಮಿಸುವ ಮೊದಲೇ ಜಿಲ್ಲೆ ಅಂಗನವಾಡಿ ಕೇಂದ್ರಗಳಿಗೆ ಮತ್ತು ಆಸ್ಪತ್ರೆಗಳಿಗೆ ನಾನು ಸಂಸದನಾಗಿದ್ದ ಅವಧಿಯಲ್ಲಿ ಮಂಜೂರು ಮಾಡಲಾಗಿದೆ. ಇಂದಿನ ಡಿಸಿ ಅವರು ಯಾವುದೇ ಜಾಗವನ್ನು ಮಂಜೂರು ಮಾಡಿಲ್ಲ, ಜಿಪಂ ದಿಶಾ ಸಭೆಯಲ್ಲಿ ಅಧಿಕಾರಿಗಳ ಮತ್ತು ಪಿಡಿಒಗಳಿಂದ ಸುಮಾರು 400 ಅಂಗನವಾಡಿ ಕೇಂದ್ರದ ಕಟ್ಟಡಗಳಿಗೆ ಒಂದು ತಿಂಗಳಲ್ಲಿ ಖಾತೆಯನ್ನು ಸಹ ಮಾಡಿಸಲಾಗಿದೆ. ಡಿಸಿ ಅಕ್ರಂಪಾಷ ಅವರು ಮಾಡಿರುವ ದ್ರೋಹ ಜಿಲ್ಲೆಯ ಜನತೆಗೆ ಏನೆಂದು ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಫೋಟೋ:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ