ಕನ್ನಡಪ್ರಭ ವಾರ್ತೆ ಬೀಳಗಿ
ಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ಕ್ರೀಡಾ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಸಿದ್ದೇಶ ಪಾಟೀಲ ಪ್ರಥಮ ಸ್ಥಾನ ಪಡೆದರು.ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ ಶಾಸಕ ಜೆ.ಟಿ. ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಲ್ಲಾಧಿಕಾರಿ ಸಂಗಪ್ಪ, ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರು ಚಾಲನೆ ನೀಡಿದರು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ೬೫ ಸೈಕ್ಲಿಂಗ್ ಕ್ರೀಡಾ ಪಟುಗಳು ಪಾಲ್ಗೊಂಡಿದ್ದರು.
ಬೀಳಗಿ ಪಟ್ಟಣದಿಂದ ಬೀಳಗಿ ಕ್ರಾಸ್ ನಿಂದ ಯಡಹಳ್ಳಿ ಗ್ರಾಮದವರಿಗೆ ಎರಡು ಸುತ್ತುಗಳಲ್ಲಿ ನಡೆದ ಸ್ಪರ್ಧೆಯಲ್ಲಿ ೮೦ ಕಿಮೀ ಸಾಗುವ ಟ್ರ್ಯಾಕ್ ಸಿದ್ಧಪಡಿಸಲಾಗಿತ್ತು. ೩ ಗಂಟೆಯ ಕಾಲ ಜರುಗಿದ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ಇಲ್ಲಿಯ ಜಿಎಲ್‌ಬಿಸಿ ಕಚೇರಿ ಆವರಣದ ಮುಂಭಾಗದಲ್ಲಿ ಕೊನೆಗೊಂಡ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಕೊಲ್ಲಾಪುರದ ಸಿದ್ದೇಶ ಪಾಟೀಲ ಪ್ರಥಮ ಸ್ಥಾನ, ಕುಂಬಾರಹಳ್ಳದ ಸಂತೋಷ ಕುರಣಿ ದ್ವೀತಿಯ, ಜಮಖಂಡಿ ಮಲ್ಲಿಕಾರ್ಜುನ ಶಿರೋಳ ತೃತೀಯ, ಜಮಖಂಡಿಯ ರಮೇಶ ಮುಳಗುಂಡಿ ನಾಲ್ಕನೇ ಸ್ಥಾನ, ಸಾಂಗ್ಲಿಯ ಅಮಂತ ರಾಠೋಡ್ ಐದನೇ ಸ್ಥಾನ ಹಾಗೂ ಪೊಲೀಸ್ ಇಲಾಖೆಯ ಮಹಮ್ಮದ್ ಸಾಧನಿ ಅವರು ಆರನೇ ಸ್ಥಾನ ಪಡೆದರು.ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ವಿಜೇತರಿಗೆ ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್, ಗಣ್ಯ ವರ್ತಕರಾದ ಚಂದ್ರಶೇಖರ ಕಟಗೇರಿ, ನಾಗರಾಜ್ ಟಂಕಸಾಲಿ ಸೇರಿದಂತೆ ವಿವಿಧ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಹಿರಿಯರಾದ ಶಿವಾನಂದ ಯಾಳವಾರಮಠ, ವಿಠ್ಠಲ ಬೋಜಿ೯,ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ,ರಾಜು ಬೋಜಿ೯,ಬಿ ಪಿ ಪಾಟೀಲ್, ಸಂಗಪ್ಪ ಎತ್ತಿನಮನಿ, ವಾಬಯ್ಯ, ಪುಟ್ಟು ಡಂಗಿ, ಅರ್ಜುನ್ ಜಾಧವ್, ಪರಶುರಾಮ ಮಮದಾಪೂರ, ಅನಿತಾ ನಿಂಬರಗಿ, ಆರತಿ ಬೋರ್ಜಿ ಸೇರಿದಂತೆ ಇತರರು ಇದ್ದರು.ಇಂದು ಸಿದ್ದೇಶ್ವರ ಜಾತ್ರೆ ರಥೋತ್ಸವ: ಶ್ರಾವಣ ಮಾಸದ ಕೊನೆಯ ಸೋಮವಾರ ಬೀಳಗಿ ಗುಡ್ಡದ ಭಾಗದಲ್ಲಿರುವ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಆ. ೧೮ರಂದು ಅದ್ದೂರಿಯಾಗಿ ಜರುಗಲಿದೆ,
ಅಂದು ಬೆಳಗ್ಗೆ ಸಿದ್ದೇಶ್ವರರ ಅಭಿಷೇಕ, ಪೂಜಾ ಕಾರ್ಯಕ್ರಮ ಜರುಗಲಿದ್ದು, ಗಿರಿಸಾಗರ ರುದ್ರಮುನಿ ಶಿವಾಚಾರ್ಯರು, ಕಲ್ಮಠದ ಗುರುಪಾದ ಶಿವಾಚಾರ್ಯರ ಸೇರಿದಂತೆ ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ ಅನ್ನ ಪ್ರಸಾದ ನಡೆಯಲಿದೆ, ಸೋಮವಾರ ದಿನಪೂರ್ತಿ ವಿವಿಧ ಸಮಾರಂಭಗಳು ಜರುಗಲಿದ್ದು ಸಂಜೆ ೬ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿದ್ದೇಶ್ವರ ರಥೋತ್ಸವ ಜರುಗಲಿದೆ ಎಂದು ತಿಳಿಸಲಾಗಿದೆ.