ಸಿದ್ದಾಪುರ ಗೇಟ್‌ನಲ್ಲಿ ಕೊಣನೂರು ಮಡಿಕೇರಿ ರಾಜ್ಯ ಹೆದ್ದಾರಿ ತಡೆ

KannadaprabhaNewsNetwork | Published : Mar 23, 2025 1:36 AM

ಸಾರಾಂಶ

ಕೆಎಸ್ಸಾರ್ಟಿಸಿ ಬಸ್ಸಿನ ನಿರ್ವಾಹಕರ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರ ದೌರ್ಜನ್ಯ ಖಂಡಿಸಿ ಶನಿವಾರ ಕರೆ ನೀಡಲಾಗಿದ್ದ ಬಂದ್‌ ಬೆಂಬಲಿಸಿ ಸಮೀಪದ ಕೊಣನೂರಿನ ಕೊಣನೂರು-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ರಾಘವೇಂದ್ರಗೌಡ ನೇತೃತ್ವದಲ್ಲಿ ಸಿದ್ದಾಪುರ ಗೇಟ್ ಸರ್ಕಲ್‌ನಲ್ಲಿ ವಾಹನಗಳನ್ನು ತಡೆಗಟ್ಟಿ ಬಂದ್‌ಗೆ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಇಂತಹ ಸಂದರ್ಭ ಬಂದಾಗಎಲ್ಲಾ ಸಂಘಟನೆಗಳು ಎಲ್ಲರೂ ಒಗ್ಗಟ್ಟಾದರೆ ಮಾತ್ರ ನಾಡು, ನುಡಿ, ಜಲ, ಭಾಷೆ ವಿಚಾರಗಳಿಗೆ ನ್ಯಾಯ ಸಿಗುತ್ತದೆ. ಕೇವಲ ಬೆಳಗಾವಿ ಘಟನೆ ಒಂದೇ ಅಲ್ಲ ಬದಲಿಗೆ ಮಹದಾಯಿ ಯೋಜನೆ, ಕಳಸಾ ಬಂಡೂರಿ ಯೋಜನೆಗಳು ಜಾರಿಗೊಳ್ಳಬೇಕು. ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೆಂಗಳೂರು ಮೆಟ್ರೋದಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ಅಂದರೆ ಹೆಚ್ಚಿನ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಬಂದ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಈ ಬಂದ್ ಮಾಡಲಾಯಿತು. ನಮ್ಮ ಬೇಡಿಕೆಗಳು ಆದಷ್ಟು ಬೇಗ ಈಡೇರಲಿ. ಕನ್ನಡಿಗರು ಒಗ್ಗಟ್ಟಾಗಿ ನಿಂತರೆ ಸಮಸ್ಯೆಗೆ ಪರಿಹಾರ ಸದಾಸಿದ್ಧ ಎಂದು ತಿಳಿಸಿದರು.

ಈ ಹೋರಾಟದಲ್ಲಿ ಸೇನೆಯ ಪದಾಧಿಕಾರಿಗಳು ಸೇನೆಯ ರಾಜ್ಯ ಮಹಿಳಾ ಅಧ್ಯಕ್ಷರಾದ ಮಧುಶ್ರೀ, ತಾಲೂಕು ಅಧ್ಯಕ್ಷರುಗಳಾದ ಗಿರೀಶ್, ಮೆಕ್ಯಾನಿಕ್ ರಮೇಶ್, ಸಿ ಬಿ ತೋಟ ಪ್ರಕಾಶ್, ನಂಜೇಗೌಡ, ಆನಂದ್ ಆಚಾರ್, ಕರುಣಾ ಆಚಾರ್, ಗೋಪಾಲ್ ಆಚಾರ್, ಬೇಕರಿ ಯೋಗೇಶ್, ಅಣ್ಣಪ್ಪ ಗೌಡ, ರಮೇಶ್ ಗೌಡ, ಡೆಡ್ಲಿಸೋಮ, ದಿನೇಶ್, ಚಿದಾನಂದ, ಕರಿಯಪ್ಪ, ಲಕ್ಷ್ಮಣ, ನಾಗೇಶ್, ನಾಗಣ್ಣ, ಪ್ರದೀಪ್, ಫಯಾಜ್, ಪಾಪಾಚಾರಿ, ಸ್ವಾಮಿ ಗೌಡ್ರು, ದರ್ಶನ್, ಶಶಾಂಕ್, ಬಾಲು, ಮಹೇಂದ್ರ ಇನ್ನು ಮುಂತಾದವರು ಹಾಗೂ ರೈತರು, ಗ್ರಾಮಸ್ಥರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಿದರು.

Share this article