ಕೊಂಡಜ್ಜಿ ಬಸಪ್ಪನವರ ಆದರ್ಶ ಯುವಕರಿಗೆ ಮಾದರಿ: ದಿನೇಶ್ ಶೆಟ್ಟಿ

KannadaprabhaNewsNetwork |  
Published : Feb 28, 2025, 12:48 AM IST
ಕ್ಯಾಪ್ಷನ23ಕೆಡಿವಿಜಿ35 ದಾವಣಗೆರೆಯಲ್ಲಿ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ, ಭಾರತ್ ಸ್ಕೌಟ್ಸ್ -ಗೈಡ್ಸ್ ಸಂಸ್ಥೆಯ  ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಕೊಂಡಜ್ಜಿ ಬಸಪ್ಪನವರು ಕರ್ನಾಟಕದ ರಾಜಕಾರಣಿ ಮತ್ತು ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ನಾಯಕರಾಗಿದ್ದರು ಎಂದು ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು

ಸಂಸ್ಥಾಪಕರ ದಿನಾಚರಣೆ

ದಾವಣಗೆರೆ: ಕೊಂಡಜ್ಜಿ ಬಸಪ್ಪನವರು ಕರ್ನಾಟಕದ ರಾಜಕಾರಣಿ ಮತ್ತು ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ನಾಯಕರಾಗಿದ್ದರು ಎಂದು ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.

ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಭಾನುವಾರ ಸಂಸ್ಥಾಪಕರ ದಿನಾಚರಣೆ ಹಾಗೂ ಚಿಂತನಾ ದಿನಾಚರಣೆಯ ಪ್ರಯುಕ್ತ ಇಲ್ಲಿನ ಪಿ.ಜೆ.ಬಡಾವಣೆಯಲ್ಲಿರುವ ಶ್ರೀರಾಮ ಪಾರ್ಕ್ ಆವರಣದಲ್ಲಿ ಹಮ್ಮಕೊಂಡ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊಂಡಜ್ಜಿಯು ಹರಿಹರ- ದಾವಣಗೆರೆಗೆ ಸರಿಸಮಾನ ದೂರದ ಒಂದು ಸಾಧಾರಣ ಹಳ್ಳಿ. ಆದರೆ ಇದಕ್ಕೆ ಇಂದು ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ಮಟ್ಟದಲ್ಲಿ ಹೆಸರು ಪಡೆದಿದ್ದು ಅದರ ಕಾರಣಕರ್ತರು ಅದೇ ಗ್ರಾಮದ ಕೊಂಡಜ್ಜಿ ಬಸಪ್ಪನವರು. ಅವರು ರಾಜಕಾರಣಿಯಾಗಿದ್ದರೂ ಅದನ್ನೂ ಮೀರಿ ಬೆಳೆದವರು. ಸಾಧಾರಣ ಕುಟುಂಬದಲ್ಲಿ ಜನಿಸಿದ ಅವರು ಕಷ್ಟಪಟ್ಟು, ಅವರಿವರ ಸಹಾಯದಿಂದ ಓದಿ ಮುಂದೆ ಬಂದವರು ಎಂದು ಹೇಳಿದರು.

ರಾಜಕಾರಣಕ್ಕಿಂತಲೂ ಅವರಿಗೆ ಹೆಚ್ಚು ಪ್ರಿಯವಾಗಿದ್ದ ಕ್ಷೇತ್ರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆ. ಶಾಲಾ ಮಕ್ಕಳಲ್ಲಿ ಸ್ವಯಂಸೇವೆ, ಶಿಸ್ತು, ಸಜ್ಜನಿಕೆ, ಉತ್ತಮ ನಡೆನುಡಿ, ಸೇವಾ ಮನೋಭಾವ, ಧೈರ್ಯ, ಸಾಹಸ ಪ್ರವೃತ್ತಿ ಮುಂತಾದ ಗುಣಗಳನ್ನು ಬೆಳೆಸಲು ವಿಶ್ವಮಟ್ಟದಲ್ಲಿ ಹುಟ್ಟಿಕೊಂಡ ಈ ಆಂದೋಲನದಲ್ಲಿ ಅವರು ತಮ್ಮನ್ನು ಪೂರ್ಣ ಮಟ್ಟದಲ್ಲಿ ತೊಡಗಿಸಿಕೊಂಡಿದ್ದರು. ಮಕ್ಕಳು ಯುವಕರು ದೈಹಿಕ ಬೌದ್ಧಿಕ ಸಾಮಾಜಿಕ ದೈವಿಕ ವಾಗಿ ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವುದು ಅಲ್ಲದೆ ಪ್ರಾದೇಶಿಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುವರು ಎಂದು ತಿಳಿಸಿದರು

ಕಾಂಗ್ರೆಸ್ ಮುಖಂಡರಾದ ಪ್ರವೀಣ್, ಹರೀಶ್, ಪರಶುರಾಮ್, ಗೋಪಾಲ್, ಚೇತನ್ ಕುಮಾರ್, ಸಂಸ್ಥೆ ಕಾರ್ಯದರ್ಶಿ ಟಿ.ಎಂ.ರವೀಂದ್ರ ಸ್ವಾಮಿ, ಎಸ್‌ಜಿವಿ ಅಶ್ವಿನಿ, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಪಾಲ್ಗೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ಸಂಘಟಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ