ಕನ್ನಡಪ್ರಭ ವಾರ್ತೆ, ಕೊಪ್ಪ
ಉದ್ಯಮಿಗಳಾದ ನಾವು ಉದ್ಯೋಗಮೇಳಗಳಲ್ಲಿ ಪದವೀಧರರ ಆಯ್ಕೆ ಮಾಡುವುದು ಸಹಜ. ಆದರೆ ಈ ಬಾರಿ ಉದ್ಯೋಗಮೇಳದಲ್ಲಿ ಎಸ್ಎಸ್ಎಲ್.ಸಿ, ಪಿಯುಸಿವರಿಗೆ ಸೂಕ್ತ ಕೆಲಸ ಕೊಡಿಸುವ ಯೋಚನೆಯ ಲ್ಲಿದ್ದಾಗ ಟಾಟಾ ಸಂಸ್ಥೆ ಕೆಲಸ ನೀಡಲು ಮುಂದೆ ಬಂದಿರುವುದು ಸ್ವಾಗತಾರ್ಹ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ್.ಎಸ್.ಶೆಟ್ಟಿ ಹೇಳಿದರು.ಮಂಗಳವಾರ ಪಟ್ಟಣದ ಹೊರವಲಯದ ಹರಿಹರಪುರ ರಸ್ತೆ ಅನನ್ಯ ವಿಜಯನಗರದ ಬಂಟರ ಭವನದಲ್ಲಿ ಅಮ್ಮ ಫೌಂಡೇಶನ್ ನಿಂದ ಮಹಿಳೆಯರಿಗೆ ನಡೆದ ಉದ್ಯೋಗಮೇಳದಲ್ಲಿ ಮಾತನಾಡಿ ಈ ಉದ್ಯೋಗ ಮೇಳ ಅಮ್ಮಪೌಂಡೇಷನ್‌ನ ಮಹಿಳಾ ಸಬಲಿಕರಣದ ದಿಟ್ಟಹೆಜ್ಜೆಯಾಗಿದೆ. ಟಾಟಾ ಸಂಸ್ಥೆ ಮಹಿಳೆಯರಿಗೆ ಭದ್ರತೆ ಒದಗಿಸುವ ಸಂಸ್ಥೆಯಾಗಿದ್ದು ಯಾವುದೇ ಭಯವಿಲ್ಲದೆ ತಮ್ಮ ಮಕ್ಕಳನ್ನು ಟಾಟಾ ಸಂಸ್ಥೆಗೆ ಕಳುಹಿಸಬಹುದು ಎಂದರು. ಟಾಟಾ ಎಲೆಕ್ಟ್ರಾನಿಕ್ ಸಂಸ್ಥೆ ಮುಖ್ಯಸ್ಥ ಶ್ರೀಧರ್ ಮಾತನಾಡಿ ಇಲ್ಲಿ ಉದ್ಯೋಗ ಅರಸಿಬಂದವರಿಗೆ ಬೆಂಗಳೂರಿನ ಟಾಟಾ ಕಂಪನಿ ಉದ್ಯೋಗ ನೀಡಲಿದೆ. ಹೊರದೇಶದ ಐ ಪೋನ್ ಕಂಪನಿ ಟಾಟಾ ಕಂಪನಿ ಸಹಯೋಗ ಪಡೆದಿದ್ದು ಈ ಕಂಪನಿಯಲ್ಲಿ ಮಹಿಳೆಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಚಿತ ಊಟ ಉಪಹಾರ, ವಸತಿ ಸೌಕರ್ಯವಿದ್ದು ಮಾಸಿಕ ₹೩,೭೦೦ ರು. ಪಿಎಫ್ ಹಣ ಕಡಿತಗೊಂಡು ತಿಂಗಳಿಗೆ ₹೧೫, ೫೦೦ರಷ್ಟು ವೇತನ ಸಿಗುತ್ತದೆ. ಪಿಎಫ್ ಹಣ ಕೆಲಸ ಬಿಡುವಾಗ ಸಿಗಲಿದೆ ಎಂದು ಮಾಹಿತಿ ನೀಡಿದರು.ಮೈಸೂರಿನ ಎಫ್‌ಕೆಸಿಸಿ ನಿರ್ದೇಶಕ ಕಿರಣ್‌ರಾಜ್ ಮಾತನಾಡಿ ಮಲೆನಾಡಿನ ಪ್ರದೇಶವಾದ ಇಲ್ಲಿ ಶುದ್ದ ವಾದ ಗಾಳಿ, ನೀರು, ಉತ್ತಮ ವಾತವಾರಣ ವಿದೆ. ದೊಡ್ಡ ಉದ್ಯಮ, ಕಂಪನಿಗಳನ್ನು ಇಲ್ಲಿ ಕರೆಸಿ ಇಲ್ಲಿಯೇ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ. ಅದರೆ ಇಲ್ಲಿ ಹದಗೆಟ್ಟ ರಸ್ತೆಗಳಲ್ಲಿ ಕಂದಕ ನೆನಪಿಸುವ ಹೊಂಡಗಳಿಂದ ಕೂಡಿದ ರಸ್ತೆಗಳ ಪರಿಸ್ಥಿತಿ ಜಿಲ್ಲಾ ಕೇಂದ್ರದಿಂದ ಕೊಪ್ಪ ತಲುಪಲು ಗೂಗಲ್‌ನಲ್ಲಿ 3 ಗಂಟೆ ತೋರಿಸಿದರೆ ವಾಸ್ತವವಾಗಿ 5 ಗಂಟೆ ಹಿಡಿಯುತ್ತದೆ ಸುಧಾರಣೆ ಯಿಂದ ಮಾತ್ರ ಆಭಿವೃದ್ದಿ ನಿರೀಕ್ಷಿಸಬಹುದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಹಿರಿಯ ಮುಖಂಡ ಎಚ್.ಜಿ.ವೆಂಕಟೇಶ್ ಮಾತನಾಡಿ ಶೃಂಗೇರಿ ಕ್ಷೇತ್ರದಲ್ಲಿ ಅಮ್ಮ ಫೌಂಡೇಷನ್ ಆಯೋಜನೆಯಲ್ಲಿ ಹಲವು ಕಾರ್ಯಕ್ರಮ ನಡೆದಿದ್ದು ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕೊಪ್ಪ ಭಂಟರ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ರಮಣ್ಯ ಶೆಟ್ಟಿ ಮಾತನಾಡಿ ಸುಧಾಕರ್ ಶೆಟ್ಟಿ ಕೊಪ್ಪ ಭಂಟರ ಭವನ ನಿರ್ಮಾಣ ಹಂತದಲ್ಲಿ ನಮ್ಮೊಂದಿಗೆ ಇದ್ದು ಪ್ರತಿ ಹಂತದಲ್ಲಿ ಸಹಕಾರ ನೀಡಿದರು. ಭವನದಲ್ಲಿ ಈಗ ಜನಸ್ನೇಹಿ ಸಮಾಜಮುಖಿ ಕಾರ್ಯಕ್ರಮ ಉದ್ಯೋಗ ಮೇಳ ಆಯೋಜನೆ ಸ್ವಾಗತಾರ್ಹ. ಇವರ ಅಮ್ಮ ಫೌಂಡೇಶನ್‌ನಿಂದ ಮತಷ್ಟು ಉತ್ತಮ ಕಾರ್ಯಕ್ರಮ ನಡೆಯಲಿ ಎಂದರು. ಕೊಪ್ಪ ಅಮ್ಮ ಫೌಂಡೇಶನ್ ಯಿಂದ ಅಯೋಜನೆಗೊಂಡ ಉದ್ಯೋಗಮೇಳ ಯಶಸ್ವಿಯಾಯಿತು. ವಿವಿಧ ಕಡೆಗಳಿಂದ ಆಗಮಿಸಿದ ಸುಮಾರು ೨೫೦ ಉದ್ಯೋಗಾಕಾಂಕ್ಷಿಗಳು ಟಾಟಾ ಸಂಸ್ಥೆಯ ಟೆಲಿಕಾಂ ಘಟಕಕ್ಕೆ ನಿಯೋಜನೆಗೊಂಡರು.ಅಮ್ಮ ಫೌಂಡೇಷನ್ ನಿರ್ದೇಶಕ ಪ್ರಭಾಕರ್ ಶೆಟ್ಟಿ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಭಂಡಿಗಡಿ ದಿವಾಕರ್ ಭಟ್, ತಾಲ್ಲೂಕು ಅಧ್ಯಕ್ಷ ಎ.ಎನ್.ರಾಮಸ್ವಾಮಿ, ಕುಂಚೂರು ವಾಸಪ್ಪ, ಗುರುಪ್ರಸಾದ್ ಮಾತನಾಡಿದರು. ಕ್ಷೇತ್ರದ ವಿವಿಧೆಡೆಗಳ ಅಮ್ಮ ಫೌಂಡೇಶನ್ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.