ವಾಣಿಜ್ಯೋದ್ಯಮಿ ಎಂ.ಜಿ.ರಾಮಯ್ಯಶ್ರೇಷ್ಠಿ ನಿಧನ

KannadaprabhaNewsNetwork |  
Published : Jul 17, 2024, 12:51 AM IST
ಎಂ.ಜಿ.ರಾಮಯ್ಯಶ್ರೇಷ್ಠಿ | Kannada Prabha

ಸಾರಾಂಶ

ಕೊರಟಗೆರೆ ಪಟ್ಟಣದ ಹಿರಿಯ ಮತ್ಸದಿ ಹಾಗೂ ವಾಣಿಜ್ಯೋದ್ಯಮಿ ಎಂ.ಜಿ.ರಾಮಯ್ಯ ಶ್ರೇಷ್ಠಿ(99) ಮೃತರಾಗಿದ್ದಾರೆ.

ಕೊರಟಗೆರೆ: ಧಾರ್ಮಿಕ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಸೇವೆಯನ್ನು ಮಾಡಿದ್ದ ಕೊರಟಗೆರೆ ಪಟ್ಟಣದ ಹಿರಿಯ ಮತ್ಸದಿ ಹಾಗೂ ವಾಣಿಜ್ಯೋದ್ಯಮಿ ಎಂ.ಜಿ.ರಾಮಯ್ಯ ಶ್ರೇಷ್ಠಿ(99) ಮೃತರಾಗಿದ್ದಾರೆ.ಸೋಮವಾರ ಸಂಜೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಮೃತರಿಗೆ 3 ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಪಟ್ಟಣ ಸೇರಿದಂತೆ ರಾಜ್ಯದ ಹಲವಾರು ದೇವಾಲಯಗಳ ಜೀರ್ಣೋದ್ದಾರಕ್ಕೆ ಹಾಗೂ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂತಾಪ: ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕನ್ನಿಕಾ ಹೌದಾರ್ಯ ಸಂಸ್ಥೆ, ವಾಸವಿ ಮಾತೃ ಮಂಡಳಿ, ವಾಸವಿ ಯುವಜನ ಸಂಘ, ಕನ್ನಿಕಾ ವಿದ್ಯಾಪೀಠ, ವರ್ತಕರ ಸಂಘಗಳ ಪದಾದಿಕಾರಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮೃತರ ಆತ್ಮಕ್ಕೆ ಶಾಂತಿಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ