ಕೋಟ: 200ನೇ ಭಾನುವಾರದ ಸ್ವಚ್ಛತಾ ಅಭಿಯಾನ

KannadaprabhaNewsNetwork |  
Published : Mar 20, 2024, 01:20 AM IST
ಭಾನುವಾರ18 | Kannada Prabha

ಸಾರಾಂಶ

ಕೋಟದ ಪಂಚವರ್ಣ ಯುವಕ ಮಂಡಲ - ಪಂಚವರ್ಣ ಮಹಿಳಾ ಮಂಡಲಗಳ ನೇತೃತ್ವದಲ್ಲಿ ಸುಮಾರು 13 ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ, ಪ್ರತೀ ಭಾನುವಾರದ ಪರಿಸರ ಸ್ವಚ್ಛತಾ ಅಭಿಯಾನದ 200 ನೇ ವಾರದ ಕಾರ್ಯಕ್ರಮ ಕೋಡಿಯಿಂದ ಕೋಟದವರೆಗಿನ ಬೀಚ್ ರಸ್ತೆಯ ತ್ಯಾಜ್ಯಮುಕ್ತ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರಇಂದು ನಾವು ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸಿಕೊಳ್ಳದಿದ್ದರೆ ಮುಂದೆ ಬಹುದೊಡ್ಡ ಆಪತ್ತು ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಪರಿಸರವಾದಿ, ಸಮಾಜಸೇವಕ ಹ.ರಾ. ವಿನಯಚಂದ್ರ ಸಾಸ್ತಾನ ಎಚ್ಚರಿಕೆ ನೀಡಿದ್ದಾರೆ.ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ - ಪಂಚವರ್ಣ ಮಹಿಳಾ ಮಂಡಲಗಳ ನೇತೃತ್ವದಲ್ಲಿ ಸುಮಾರು 13 ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ, ಪ್ರತೀ ಭಾನುವಾರದ ಪರಿಸರ ಸ್ವಚ್ಛತಾ ಅಭಿಯಾನದ 200 ನೇ ವಾರದ ಕಾರ್ಯಕ್ರಮ ಕೋಡಿಯಿಂದ ಕೋಟದವರೆಗಿನ ಬೀಚ್ ರಸ್ತೆಯ ತ್ಯಾಜ್ಯಮುಕ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮವನ್ನು ಗೀತಾನಂದ ಟ್ರಸ್ಟ್ ಮುಖ್ಯಸ್ಥ ಆನಂದ್ ಸಿ. ಕುಂದರ್ ಉದ್ಘಾಟಿಸಿ, ಪ್ಲಾಸ್ಟಿಕ್ ಮುಕ್ತ ಸಮಾಜದ ಪರಿಕಲ್ಪನೆ ಬರೇ ಸಂಘಟನೆಗಳಿಗೆ ಸೀಮಿತಗೊಳ್ಳಬಾರದು, ಅದು ಪ್ರತಿಯೊಬ್ಬರ ಜೀವನದಲ್ಲೂ ಪಾಲನೆಯಾಗಬೇಕು, ಪರಿಸರ ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲದರು ಆಗಬೇಕು ಪಂಚವರ್ಣದವರ ನಿತ್ಯ ನಿರಂತರ ಪರಿಸರ ಕಾಳಜಿ ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

ಇದೇ ವೇಳೆ 75ರ ಇಳಿ ವಯಸ್ಸಿನ ಸ್ವಚ್ಛ ಬ್ರಿಗೇಡ್ ಕಾರ್ಕಳದ ಫೆಲಿಕ್ಸ್ ವಾಜ್ ಅವರನ್ನು ಗೌರವಿಸಲಾಯಿತು. 200 ನೇ ಅಭಿಯಾನಕ್ಕಾಗಿ ಸ್ವಚ್ಛ ಬ್ರಿಗೇಡ್ ಕಾರ್ಕಳದ ಇದರ ಸದಸ್ಯರು ಪಂಚವರ್ಣ ಸಂಸ್ಥೆಯನ್ನು ಅಭಿನಂದಿಸಿದರು.ಮುಖ್ಯ ಅಭ್ಯಾಗತರಾಗಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಕಾರ್ವಿ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಮತ್ತು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕೋಡಿ ಗ್ರಾ.ಪಂ. ಪಿ.ಡಿ.ಒ ರವೀಂದ್ರ ರಾವ್ ಸ್ವಾಗತಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.5 ಕಿ.ಮೀ. ರಸ್ತೆ ಪ್ಲಾಸ್ಟಿಕ್ ಮುಕ್ತ: ಇದೇ ಮೊದಲ ಬಾರಿಗೆ ಸುಮಾರು 5 ಕಿ ಮೀ. ಬೀಚ್ ರಸ್ತೆ ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನವನ್ನು ನಡೆಸಲಾಯಿತು. ಇದರಲ್ಲಿ ವಿವಿಧ ಸಂಘಟನೆಗಳ ನೂರಾರು ಮಂದಿ ಭಾಗವಹಿಸಿ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಲಾಯಿತು.ಗೀತಾನಂದ ಫೌಂಡೇಶನ್ ಚೀಲ ಹಾಗೂ ವಾಹನದ ಮತ್ತು ಕೋಡಿ ಗ್ರಾ.ಪಂ. ಉಪಹಾರದ ವ್ಯವಸ್ಥೆ ಮಾಡಿತ್ತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಂಘಟನೆಗಳ ವತಿಯಿಂದ ಪಾನಕದ ವ್ಯವಸ್ಥೆ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ