ಏ.3 ರಂದು ಕೋಟೆ ಎಂ.ಶಿವಣ್ಣ ಅಭಿಮಾನಿಗಳು ಕಾಂಗ್ರೆಸ್ ಸೇರ್ಪಡೆ

KannadaprabhaNewsNetwork | Published : Mar 31, 2024 2:07 AM

ಕೋಟೆ ಎಂ.ಶಿವಣ್ಣ ನೂರಾರು ಅಭಿಮಾನಿಗಳು ಏ.3 ರಂದು ಬುಧವಾರ ಬಿಜೆಪಿ ತೊರೆದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಅಭಿಮಾನಿ ಬಳಗದ ಬಸವನಪುರ ರಾಜಶೇಖರ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಕೋಟೆ ಎಂ.ಶಿವಣ್ಣ ನೂರಾರು ಅಭಿಮಾನಿಗಳು ಏ.3 ರಂದು ಬುಧವಾರ ಬಿಜೆಪಿ ತೊರೆದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಅಭಿಮಾನಿ ಬಳಗದ ಬಸವನಪುರ ರಾಜಶೇಖರ ಹೇಳಿದರು. ನಗರದ ಖಾಸಗಿ ಹೋಟಲ್ ವೊಂದರ ಸಭಾಂಗಣದಲ್ಲಿ ನಡೆದ ಕೋಟೆ ಎಂ.ಶಿವಣ್ಣ ಆಭಿಮಾನಿ ಬಳಗ ಸಭೆಯಲ್ಲಿ ಸಲಹೆ, ಸೂಚನೆ ಪಡೆದು ಮಾತನಾಡಿ ಅವರು. ಕೋಟೆ ಎಂ.ಶಿವಣ್ಣ ಅವರನ್ನು ಬೆಂಬಲಿಸಿ ಹಿಂಬಾಲಿಸೋಣ ಎಂದು ಸರ್ವಾನುಮತದಿಂದ ಅಭಿಮಾನಿಗಳು ಹೇಳಿದ್ದಾರೆ. ಅದರಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಕೋಟೆ ಎಂ.ಶಿವಣ್ಣ ಅವರ ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ. ಕೋಟೆ ಎಂ.ಶಿವಣ್ಣ ಬಿಜೆಪಿಗೆ ದುಡಿದು ಉತ್ತಮ ಸಂಘಟನೆ ಮಾಡಿದ್ದರು. ಈ ಬಾರಿಯ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷೆಯಾಗಿದ್ದು, ಟಿಕೆಟ್ ಸಿಗುವ ನಿರೀಕ್ಷೆ ಇತ್ತು ಆದರೆ ಕೊನೆಗಳಿಗೆಯಲ್ಲಿ ಬಿಜೆಪಿ ವರಿಷ್ಠರು ಎಸ್. ಬಾಲರಾಜು ಅವರಿಗೆ ನೀಡುವ ಮೂಲಕ ಕೋಟೆ ಶಿವಣ್ಣ ಅವರನ್ನು ಕಡೆಗಣಿಸಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ ಚುನಾವಣೆ ಸಭೆ, ಸಮಾರಂಭಗಳಿಗೆ ಅವರನ್ನು ಆಹ್ವಾನ ಮಾಡಿಲ್ಲ ಅವರ ಅಭಿಮಾನಿಗಳಾದ ನಮ್ಮನ್ನು ಯಾವುದೇ ಸಭೆಗಳಿಗೆ ಆಹ್ವಾನಿಸದೆ ಕಡೆಗಣಿಸಿದ್ದಾರೆ. ಕೋಟೆ ಎಂ.ಶಿವಣ್ಣ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ಅಭಿಮಾನಿಗಳಾದ ನಾವೆಲ್ಲರೂ ಕೋಟೆ ಶಿವಣ್ಣ ಅವರನ್ನು ಬೆಂಬಲಿಸಿ ಅವರ ಹಿಂಬಾಲಕರಾಗಿ ಕಾಂಗ್ರೆಸ್ ಗೆ ಹೋಗಲು ನಿರ್ಧರಿಸಿದ್ದು, ಏ.3 ರಂದು ನಗರದಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ತೊರೆದು ಮಾಜಿ ಸಚಿವರಾದ ಕೋಟೆ ಎಂ.ಶಿವಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಯಾಗಲಿದ್ದೇವೆ ಎಂದರು.ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಸತ್ತೇಗಾಲ ಪುಟ್ಟರಾಜು, ಮುಳ್ಳೂರು ರೇವಣ್ಣ, ಮಲ್ಲೇಗೌಡ, ಮಹೇಶ್, ಮಾಧು, ಕೆಸ್ತೂರು ಮರಪ್ಪ, ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಕುಮಾರ್, ಸಂತೇಮರಳ್ಳಿ ರಾಜು , ತಂಗವೇಲು, ಪುಟ್ಟಲಿಂಗಯ್ಯ, ಲಿಂಗರಾಜು, ಸುಂದರ, ಸಂತೋಷ, ಡ್ಯಾನ್ಸ್ ಬಸವರಾಜು ಸಿ.ಎಚ್.ರಂಗಸ್ವಾಮಿ, ಪ್ರಕಾಶ್, ರಾಜು ರಾಜೇಂದ್ರ, ಬಿಳಿಯಪ್ಪ, ತಿರುಪತಿ ಮಹೇಶ್ ಭಾಗವಹಿಸಿದ್ದರು.