ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ 1.24 ಕೋಟಿ ನಿವ್ವಳ ಲಾಭ

KannadaprabhaNewsNetwork |  
Published : Sep 20, 2025, 01:02 AM IST
32 | Kannada Prabha

ಸಾರಾಂಶ

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ 2024-2025ನೇ ಸಾಲಿನಲ್ಲಿ 952 ಕೋಟಿ ರು. ವ್ಯವಹಾರ ನಡೆಸಿ 1.24 ಕೋಟಿ ರು. ನಿವ್ವಳ ಲಾಭ ಗಳಿಸಿದೆ

ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ 2024-2025ನೇ ಸಾಲಿನಲ್ಲಿ 952 ಕೋಟಿ ರು. ವ್ಯವಹಾರ ನಡೆಸಿ 1.24 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಹೇಳಿದ್ದಾರೆ.ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ಸಾಲಿನ ಅಂತ್ಯಕ್ಕೆ ಸಂಘ ಎ ತರಗತಿಯ 6665 ಸದಸ್ಯರನ್ನು ಹೊಂದಿದ್ದು 2.63 ಕೋಟಿ ರು. ಪಾಲು ಬಂಡವಾಳ ಹೊಂದಿದೆ. 444 ಕೋಟಿ ರು. ಠೇವಣಿ ಸಂಗ್ರಹಿಸಿ 424 ಕೋಟಿ ರೇವಣಿ ಪಾವತಿಸಿ, ವರ್ಷಾಂತ್ಯಕ್ಕೆ 185 ಕೋಟಿ ಠೇವಣಿ ಹೊಂದಿದೆ. ಕಳೆದ ವರ್ಷಾಂತ್ಯಕ್ಕೆ ಹೋಲಿಸಿದರೆ ಠೇವಣಿ ಸಂಗ್ರಹದಲ್ಲಿ 21 ಕೋಟಿ ರು. ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.

240 ಕೋಟಿ ರು. ಸಾಲ ವಿತರಿಸಿದ್ದು 216 ಕೋಟಿ ರು. ಸಾಲ ವಸೂಲಿಯಾಗಿದೆ. ವರ್ಷಾಂತ್ಯಕ್ಕೆ 147 ಕೋಟಿ ಹೊರ ಬಾಕಿ ಸಾಲವಿದ್ದು ಸಾಲ ವಸೂಲಾತಿಯಲ್ಲಿ 95 ಶೇ. ಪ್ರಗತಿ ಸಾಧಿಸಿದೆ.

ಸಂಘದ ಆಡಿಟ್‌ನಲ್ಲಿ ನಿರಂತರ ಎ ತರಗತಿ ಪಡೆದಿದೆ. ಸಂಘವು ವಿವಿಧ ಹಣಕಾಸು ಸಂಸ್ಥೆಗಳಲ್ಲಿ 46 ಕೋಟಿ ರು. ಠೇವಣಿಯಾಗಿ ವಿನಿಯೋಗಿಸಿದೆ. ಸಂಘವು 11ಕೋಟಿ ರು.ಗಳ ವಿವಿಧ ರೀತಿಯ ನಿಧಿ ಹೊಂದಿರುತ್ತದೆ ಎಂದರು.

ಸಂಘವು ತನ್ನ ಷೇರುದಾರರಿಗೆ ಶೇ. 15 ನೀಡುವುದಾಗಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದ್ದು ಮಂಜೂರಾತಿಗಾಗಿ ಮಹಾಸಭೆಯ ಮುಂದೆ ಮಂಡಿಸಲಾಗುವುದು ಎಂದರು.2024-25 ನೇ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅತ್ಯುತ್ತಮ ಕಾರ್ಯ ಸಾಧನೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೀಡುವ ಪ್ರಶಸ್ತಿಯನ್ನು ಸಂಘ ಪಡೆದು ಕೊಂಡಿರುತ್ತದೆ.ಇತರ ಚಟುವಟಿಕೆಗಳು:

ಅಡಿಕೆ ಬೆಳೆಗಾರರಿಗೆ ಮೈಲುತುತ್ತು ಪ್ರತಿ ಒಂದು ಕೆ.ಜಿ ಯ ಮೇಲೆ 100ರೂ. ಸಹಾಯಧನವನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ಒಟ್ಟು 443 ರೈತರಿಗೆ 3,08,456ರೂ. ಸಬ್ಸಿಡಿ ನೀಡಲಾಗಿದೆ. 2024-2025ನೇ ಸಾಲಿನಲ್ಲಿ ಪಿಲಾರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೇಕಾಗುವ ಪುಸ್ತಕ, ಬ್ಯಾಗ್, ಲೇಖನ ಸಾಮಾಗ್ರಿ ಹಾಗೂ ಕೊಡೆಗಳನ್ನು ಸಂಘದ ವತಿಯಿಂದ ವಿತರಿಸಲಾಗಿದೆ ಎಂದರು.ಭತ್ತ ಕೃಷಿ ಮಾಡುವ ಸಂಘದ ಸದಸ್ಯರಾಗಿರುವ ರೈತರಿಗೆ 1ಎಕ್ರೆಗೆ 5000 ರು. ಗಳಂತೆ ಗರಿಷ್ಠ 2 ಎಕ್ರೆ ವರೆಗೆ ಸಹಾಯಧನ ನೀಡಲು ತೀರ್ಮಾನಿಸಿದಂತೆ 2024-2025 ನೇ ಸಾಲಿನಲ್ಲಿ 96 ಭತ್ತ ಕೃಷಿ ಮಾಡುವ ರೈತರಿಗೆ ರೂ 4,86,500 ರು. ಸಹಾಯಧನ ನೀಡಲಾಗಿದೆ ಎಂದರು.ಸಂಘದ ಉಪಾಧ್ಯಕ್ಷ ಕೆ.ಬಿ. ಅಬುಸಾಲಿ ಕಿನ್ಯ ನಿರ್ದೇಶಕರಾದ ಗಂಗಾಧರ ಯು, ಕೆ. ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು, ರಾಘವ ಆರ್. ಉಚ್ಚಿಲ್, ರಾಘವ ಸಿ. ಉಚ್ಚಿಲ್, ಸುರೇಖ ಚಂದ್ರಹಾಸ, ಸುನೀತ ಲೋಬೊ, ಬಾಬು ನಾಯ್ಕ, ಕೃಷ್ಣಪ್ಪ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್ ಇದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ