ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‌ಎಂಎಸ್‌ಆರ್‌ಕೆಐಟಿ)ದ 23 ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯೂ)ದ ವಿವಿಧ ಸೆಮಿಸ್ಟರ್ ಪರೀಕ್ಷೆಯಲ್ಲಿ ಟಾಪ್ ನೂರರಲ್ಲಿ ಸ್ಥಾನ ಪಡೆದಿದ್ದಾರೆ.ವಿಶೇಷವಾಗಿ ಐದನೇಯ ಸೆಮಿಸ್ಟರ್‌ನ ಮೆಕಾನಿಕಲ್ ವಿಭಾಗದ ಸಾಕ್ಷಿ ಹಡಲಗೆ ವಿಟಿಯೂಗೆ ಪ್ರಥಮ ಬಂದಿದ್ದಾರೆ. ಸಾಕ್ಷಿ ಹಡಲಗೆ ಪ್ರಥಮ, ಮೂರನೇಯ ಮತ್ತು ನಾಲ್ಕನೇಯ ಸೆಮಿಸ್ಟರ್‌ಗಳಲ್ಲೂ ಪ್ರಥಮ ರ್‍ಯಾಂಕ್ ಗಳಿಸಿದ್ದರು. 3ನೇ ಸೆಮಿಸ್ಟರ್‌ನ ಸಿವಿಲ್ ವಿಭಾಗದಲ್ಲಿ ಅರ್ಚನಾ ಬೋಲಿ 4ನೇ ಸ್ಥಾನ, ಶ್ರೇಯಸ್ ನಡಾಳೆ 6ನೇ, ಅನಿಕೇತ ವಾಸುದೇವ 8ನೇ, ಸಾರಿಕಾ ನಾಯಿಕ 28ನೇ, ಶಿವಾನಂದ ತಹಸೀಲ್ದಾರ್ 64ನೇ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ನಿತ್ಯಶ್ರೀ ಜೈನ 26ನೇ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ಸ್ ವಿಭಾಗದಲ್ಲಿ ಕೀರ್ತಿ ಖಾನುರೆ 38ನೇ, ಮೆಕಾನಿಕಲ್ ವಿಭಾಗದಲ್ಲಿ ದಿವ್ಯಾ ಕುಂಭಾರ 39ನೇ, ಎಐಎಂಎಲ್ ವಿಭಾಗದಲ್ಲಿ ಸೃಷ್ಟಿ ಸದಲಗೆ 65ನೇ ರ್‍ಯಾಂಕ್ ಗಳಿಸಿದ್ದಾರೆ.
5ನೇ ಸೆಮಿಸ್ಟರ್‌ನ ಮೆಕಾನಿಕಲ್ ವಿಭಾಗದಲ್ಲಿ ಸಾಕ್ಷಿ ಹಡಲಗೆ ಪ್ರಥಮ, ಅಂಜಲಿ ಕಲ್ಯಾಣಕರ 7ನೇ, ಆಫ್ರೀನ್ ನದಾಫ 32ನೇ, ಮುಸ್ಕಾನ್ ಕಬ್ಬುರಿ 74ನೇ, ಎಐಎಂಎಲ್ ವಿಭಾಗದಲ್ಲಿ ಅರಮಾನ್ ಅತ್ತಾರ 16ನೇ, ನೇಹಾ ಮಗದುಮ 43ನೇ, ಶಂಭುನಾಥ ಬಿ.ಎಂ. 49ನೇ, ಯಶ ಶಿಂಧೆ 94ನೇ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅರ್ಪಿತಾ ಜಾಧವ 21ನೇ, ಸಿವಿಲ್ ವಿಭಾಗದಲ್ಲಿ ಸಾರ್ಥಕ ಮೇಂಡಗುದ್ಲೆ 70ನೇ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ಸ್ ವಿಭಾಗದಲ್ಲಿ ಪೂಜಾ ಬಾಳಿಕಾಯಿ 76ನೇ ರ್‍ಯಾಂಕ್ ಗಳಿಸಿದರು. 7ನೇ ಸೆಮಿಸ್ಟರ್‌ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ಸ್ ವಿಭಾಗದಲ್ಲಿ ಅಕ್ಕುತಾಯಿ ಎಸ್.ಎಸ್. 49ನೇ, ಮೆಕಾನಿಕಲ್ ವಿಭಾಗದಲ್ಲಿ ಆದಿತ್ಯ ಸಾಳುಂಖೆ 59ನೇ ರ್‍ಯಾಂಕ್ ಗಳಿಸಿದ್ದಾರೆ. 3ನೇ ಸೆಮಿಸ್ಟರ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಬಾಸಂತಿ ಉನಕಿ ಮತ್ತು ನಿತ್ಯಶ್ರೀ ಜೈನ ಗಣಿತ ವಿಷಯದಲ್ಲಿ ಶೇ. ನೂರರಷ್ಟು ಅಂಕ ಪಡೆದಿದ್ದಾರೆ.ಎಲ್ಲ ವಿದ್ಯಾರ್ಥಿಗಳನ್ನು ವಿದ್ಯಾ ಸಂವರ್ಧಕ ಮಂಡಳದ ಚೇರಮನ್ ಚಂದ್ರಕಾಂತ ಕೋಠಿವಾಲೆ, ವೈಸ್-ಚೇರಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಅವಿನಾಶ ಪಾಟೀಲ, ಆನಂದ ಗಿಂಡೆ, ಶೇಖರ ಪಾಟೀಲ, ಪ್ರವೀನ ಪಾಟೀಲ, ಗಣೇಶ ಖಡೇದ, ಸಂಜಯ ಶಿಂತ್ರೆ, ಸಿಇಓ ಡಾ. ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಡಾ. ಉಮೇಶ ಪಾಟೀಲ, ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಅಭಿನಂದಿಸಿದ್ದಾರೆ.