ತೇರುಗಡ್ಡೆಯನ್ನು ಶೆಡ್ಡಿನೊಳಗೆ ಕೊಟ್ಟೂರೇಶ್ವರ ಸ್ವಾಮಿ

KannadaprabhaNewsNetwork |  
Published : Apr 11, 2024, 12:52 AM IST
ಯುಗಾದಿ ಹಬ್ಬದ ದಿನ ಬರುವ ಹೊಸ ಸಂವತ್ಸರ ಶ್ರೀಕ್ರೋಧ ನಾಮ  ಪಂಚಾAಗ ಪಠಣ  ಪ್ರಕ್ರಿಯೆ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದಲ್ಲಿ ಮಂಗಳವಾರ ಸಂಜೆ ನೆರೆವೇರಿತು. ಕ್ರಿಯಾಮೂರ್ತಿ ಪ್ರಕಾಶ ಕೊಟ್ಟೂರು ದೇವರು, ಧರ್ಮಕರ್ತ ಎ.ಎಂ.ಕೆ. ಶೇಖರಯ್ಯ, ಎಂ.ಓ.ಕೊಟ್ರಯ್ಯ ಮತ್ತಿತರರು ಇದ್ದರು. | Kannada Prabha

ಸಾರಾಂಶ

ತಿ ಯುಗಾದಿ ಪಾಡ್ಯದ ದಿನದಂದು ಶ್ರೀಸ್ವಾಮಿಯ ತೇರು ಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ.

ಕೊಟ್ಟೂರು: ಯುಗಾದಿ ಪಾಡ್ಯದ ಪ್ರಮುಖ ಧಾರ್ಮಿಕ ಕಾರ್ಯಕ್ರಮ ಎಂಬಂತೆ ಗುರುತಿಸಿಕೊಂಡಿರುವ ಕೊಟ್ಟೂರು ಧಾರ್ಮಿಕ ಪರಂಪರೆಯ ಸಂಕೇತವಾದ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ತೇರುಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಪ್ರಕ್ರಿಯೆಯೊಂದಿಗೆ ಯುಗಾದಿ ಹಬ್ಬ ಆಚರಣೆ ಕೊಟ್ಟೂರು ಪಟ್ಟಣದಲ್ಲಿ ಮಂಗಳವಾರ ನಡೆಯಿತು.

ಆಯಾಗಾರ ಬಳಗ ಮತ್ತು ಭಕ್ತರು ಪಾಲ್ಗೊಂಡು ಸಡಗರ ಸಂಭ್ರಮದೊಂದಿಗೆ ಕೊಟ್ಟೂರೇಶ್ವರ ಸ್ವಾಮಿಯ ತೇರುಗಡ್ಡೆಯನ್ನು ಶ್ರದ್ಧಾಭಕ್ತಿಯೊಂದಿಗೆ ಎಳೆದು ಭಕ್ತಿ ಸಮರ್ಪಿಸಿದರು.

ಪ್ರತಿ ಯುಗಾದಿ ಪಾಡ್ಯದ ದಿನದಂದು ಶ್ರೀಸ್ವಾಮಿಯ ತೇರು ಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಪದ್ಧತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ಇದರಂತೆ ಈ ವರ್ಷ ಈ ಆಚರಣೆ ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ ಮಾ.೪ರಂದು ಸಾಗಿದ ನಂತರ ತೇರು ಬಜಾರ್‌ನಲ್ಲಿ ನಿಲುಗಡೆಗೊಂಡಿತ್ತು.

ಬಜಾರ್‌ನ ಇನ್ನೊಂದು ಬದಿಗೆ ಇದ್ದ ಶೆಡ್ಡಿನೊಳಗೆ ಇದ್ದ ತೇರು ಗಡ್ಡೆಯನ್ನು ಸೇರಿಸುವ ಪ್ರಕ್ರಿಯೆಗೆ ಕ್ರಿಯಾಮೂರ್ತಿ ಶಿವಪ್ರಕಾಶ್ ಕೊಟ್ಟೂರು ದೇವರು, ಪ್ರಧಾನ ಧರ್ಮಕರ್ತ ಎ.ಎಂ.ಕೆ ಶೇಖರಯ್ಯ ಪೂಜಾ ಬಳಗದ ಮತ್ತಿತರರು ಗಡ್ಡೆ ಆಸನದ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ನೆರೆದಿದ್ದ ಭಕ್ತರು ಕೊಟ್ಟೂರೇಶ್ವರ ಸ್ವಾಮಿಗೆ ಜಯಘೋಷಗಳನ್ನು ಕೂಗುತ್ತಾ ಮಿಣಿ (ಹಗ್ಗ) ದಿಂದ ತೇರುಗಡ್ಡೆಯನ್ನು ಎಳೆದೊಯ್ದರು. ಕೇವಲ ೫ ನಿಮಿಷದಲ್ಲಿ ಈ ಪ್ರಕ್ರಿಯೆ ಮುಕ್ತಾಯಗೊಂಡಿತು. ವಾದ್ಯದವರ ನಿನಾದ, ಭಕ್ತರ ಉತ್ಸಾಹ ಈ ಪ್ರಕ್ರಿಯೆಗೆ ಮೆರಗು ತಂದಿತು.

ಪಂಚಾಂಗ ಪಠಣ:

ತೇರುಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿರೇಮಠದಲ್ಲಿ ನೂತನ ಶ್ರೀ ಕ್ರೋಧ ನಾಮ ಸಂವತ್ಸರದ ಪಂಚಾಂಗ ಪಠಣ ನಡೆಯಿತು. ಎಂ.ಜಿ. ದೊಡ್ಡವೀರಯ್ಯ, ಎ.ಎಂ. ಗುರುಬಸವರಾಜ, ಅಜ್ಜಯ ಮತ್ತಿತರರು ಪಂಚಾಂಗ ಪಠಣದಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಧರ್ಮಕರ್ತ ಎ.ಎಂ.ಕೆ. ಶೇಖರಯ್ಯ, ಎಂ.ಓಕೊಟ್ರಯ್ಯ, ನಾಗರಾಜ, ಆಯಗಾರ ಬಳಗದವರು ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!