ಅನಧಿಕೃತ ಕ್ಲಿನಿಕ್ ಮೇಲೆ ಕೆಪಿಎಂಇ ತಂಡದಿಂದ ದಿಢೀರ್ ದಾಳಿ

KannadaprabhaNewsNetwork |  
Published : Apr 04, 2025, 12:45 AM IST
ಮುಂಡಗೋಡ: ಕರ್ನಾಟಕ ಪ್ರೈ ವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆ.ಪಿ.ಎಮ್.ಇ) ಪ್ರಾದಿಕಾರ ತಂಡ ಗುರುವಾರ ದಿಡೀರ್ ದಾಳಿ ನಡೆಸಿ ತಾಲೂಕಿನ ವಿವಿಧೆಡೆ ಅನಧಿಕೃತವಾಗಿ ನಡೆಸುತ್ತಿದ್ದ ಸುಮಾರು ೭ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿ ನೋಟಿಸ್ ಜಾರಿ ಮಾಡಿದರು. | Kannada Prabha

ಸಾರಾಂಶ

ಮಳಗಿ ಗ್ರಾಮದ ಚನ್ನಬಸವೇಶ್ವರ ಮೆಡಿಕಲ್, ಜನರಲ್ ಸ್ಟೋರ್, ರೇಣುಕಾ ಮೆಡಿಕಲ್, ಜನರಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದಿದ್ದರಿಂದ ಕ್ಲಿನಿಕ್ ಗೆ ಬೀಗ ಹಾಕಿ ಬಂದ್ ಮಾಡಿಸಲಾಯಿತು.

ಮುಂಡಗೋಡ: ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಇ) ಪ್ರಾಧಿಕಾರ ತಂಡ ಗುರುವಾರ ದಿಢೀರ್ ದಾಳಿ ನಡೆಸಿ ತಾಲೂಕಿನ ವಿವಿಧೆಡೆ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿ ನೋಟಿಸ್ ಜಾರಿ ಮಾಡಿದರು.

ಮಳಗಿ ಗ್ರಾಮದ ಚನ್ನಬಸವೇಶ್ವರ ಮೆಡಿಕಲ್, ಜನರಲ್ ಸ್ಟೋರ್, ರೇಣುಕಾ ಮೆಡಿಕಲ್, ಜನರಲ್ ಸ್ಟೋರ್ ನಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದಿದ್ದರಿಂದ ಕ್ಲಿನಿಕ್ ಗೆ ಬೀಗ ಹಾಕಿ ಬಂದ್ ಮಾಡಿಸಲಾಯಿತು.

ಕೋಡಂಬಿ ಗ್ರಾಮದ ಅಹ್ಮದಸಾಬ ಎನ್ನುವವರು ತಮ್ಮ ಮನೆಯ ಪಕ್ಕದ ಶೆಡ್‌ನಲ್ಲಿ ನಡೆಸುತ್ತಿದ್ದ ಅನಧಿಕೃತ ಕ್ಲಿನಿಕ್‌ನ ಬಾಗಿಲಿಗೆ ನೋಟಿಸ್ ಲಗತ್ತಿಸಿ, ಬೀಗ ಹಾಕಲಾಯಿತು. ಕೋಡಂಬಿ ಮತ್ತು ಪಾಳಾ ಹಾಗೂ ತಮ್ಮ ಮನೆಯಲ್ಲಿ ಕೂಡ ಅನಧಿಕೃತವಾಗಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದ ಅಮರ ಶಿಂಧೆ ಎಂಬುವವರ (ಗುರು ಕ್ಲಿನಿಕ್) ೨ ಕ್ಲಿನಿಕ್‌ಗಳಿಗೆ ಬೀಗ ಹಾಕಲಾಯಿತಲ್ಲದೇ, ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಸಿ ನೋಟಿಸ್ ನೀಡಲಾಯಿತು.

ಕಾತೂರು ಗ್ರಾಮದ ಆರ್.ಜಿ ಪೂಜಾರ್ ಎನ್ನುವವರುಯಾವುದೇ ವಿದ್ಯಾರ್ಹತೆ ಹೊಂದದೇ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಧನ್ವಂತರಿ ಕ್ಲಿನಿಕ್ ನ್ನು ಬಂದ್ ಮಾಡಿಸಿ ನೋಟಿಸ್ ನೀಡಲಾಯಿತು. ಗಣೇಶಪುರ ಗ್ರಾಮದ ಬಾಡಿಗೆ ಮನೆಯಲ್ಲಿ ಯಾವುದೇ ನಾಮಫಲಕ ಅಳವಡಿಸದೆ ಹಾಗೂ ಯಾವುದೇ ವಿದ್ಯಾರ್ಹತೆ ಹೊಂದದೇ ಅನಧಿಕೃತವಾಗಿ ನಡೆಸುತ್ತಿದ್ದ ಗೋಪಾಲ ಬೆನ್ನೂರು ಎಂಬುವವರ ಕ್ಲಿನಿಕ್ ಬಾಗಿಲಿಗೆ ನೋಟಿಸ್ ಲಗತ್ತಿಸಿ ಬೀಗ ಜಡಿಯಲಾಯಿತು. ಕಾವಲಕೊಪ್ಪ ಗ್ರಾಮದಲ್ಲಿ ಬಸವರಾಜ ಹಡಪದ ಎಂಬುವವರು ಅನಧಿಕೃತವಾಗಿ ನಡೆಸಲಾಗುತ್ತಿದ್ದ ಧನ್ವಂತರಿ ಕ್ಲಿನಿಕ್ ನ್ನು ಬಂದ್ ಮಾಡಿಸಿ ನೋಟಿಸ್ ನೀಡಲಾಯಿತು.

ಒಟ್ಟು ೭ ಕಡೆಗಳಲ್ಲಿ ದಾಳಿ ನಡೆಸಿ ಅನಧಿಕೃತ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಿ ನೋಟಿಸ್ ಜಾರಿ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಕ್ಲಿನಿಕ್ ನಡೆಸದಂತೆ ಎಚ್ಚರಿಸಲಾಗಿದೆ.

ಮುಂಡಗೋಡದ ಐಎಂಎ ಅಧ್ಯಕ್ಷ ಡಾ.ರವಿ ಹೆಗಡೆ, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ, ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಸಂಜೀವ ಗಲಗಲಿ, ಡಾ.ಭರತ ಡಿ.ಟಿ., ಪೊಲೀಸ್ ಇಲಾಖೆಯ ಎಎಸ್ಐ ಲೋಕೇಶ ಮೇಸ್ತ, ನಾಗರಾಜ ದಾಳಿಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...