ವಿಷಯುಕ್ತವಾಗುತ್ತಿದೆ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ

KannadaprabhaNewsNetwork |  
Published : Feb 24, 2026, 04:15 AM IST
ಜಮಖಂಡಿ ತಅಲುಕಿನ ಹಿಪ್ಪರಗಿ ಗ್ರಾಮದ ಬಳಿ ಕೃಷ್ಣೆಯ ಒಡಲು ಸೆರುವ ಕೊಳಚೆ ನೀರು | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಜೀವನದಿ ಪಾಪನಾಶಿನಿ, ಪವಿತ್ರ ಗಂಗೆಯ ಸಮನಾದ, ಉತ್ತರ ಕರ್ನಾಟಕದ 5 ಜಿಲ್ಲೆಯ ಜನ ಜಾನುವಾರುಗಳಿಗೆ ಜೀವಜಲದ ಮೂಲ ಆಗಿರುವ ಕೃಷ್ಣೆಯ ಒಡಲು ಕೊಳಚೆ ನೀರು, ಕಾರ್ಖಾನೆಗಳ ತ್ಯಾಜ್ಯದಿಂದ ಕಲುಷಿತಗೊಂಡಿದೆ. ಬಳಸಲು ಸಹ ಅಯೋಗ್ಯವಾಗಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಉತ್ತರ ಕರ್ನಾಟಕದ ಜೀವನದಿ ಪಾಪನಾಶಿನಿ, ಪವಿತ್ರ ಗಂಗೆಯ ಸಮನಾದ, ಉತ್ತರ ಕರ್ನಾಟಕದ 5 ಜಿಲ್ಲೆಯ ಜನ ಜಾನುವಾರುಗಳಿಗೆ ಜೀವಜಲದ ಮೂಲ ಆಗಿರುವ ಕೃಷ್ಣೆಯ ಒಡಲು ಕೊಳಚೆ ನೀರು, ಕಾರ್ಖಾನೆಗಳ ತ್ಯಾಜ್ಯದಿಂದ ಕಲುಷಿತಗೊಂಡಿದೆ. ಬಳಸಲು ಸಹ ಅಯೋಗ್ಯವಾಗಿದೆ.ಮಳೆಗಾಲದ 3-4 ತಿಂಗಳು ಮಾತ್ರ ಹರಿಯುವ ಕೃಷ್ಣೆ ಉಳಿದ 7-8 ತಿಂಗಳು ನೀರು ಹರಿಯುವುದಿಲ್ಲ. ಆಲಮಟ್ಟಿ ಸೇರಿದಂತೆ ನದಿಯುದ್ದಕ್ಕೂ ಅಲ್ಲಲ್ಲಿ ಬ್ಯಾರೇಜ್‌ಗಳು, ಚೆಕ್‌ ಡ್ಯಾಮ್‌ ನಿರ್ಮಿಸಿರುವುದರಿಂದ ನಿಂತ ನೀರು ನದಿ ಪಾತ್ರದಲ್ಲಿ ಸಂಗ್ರಹವಾಗಿ ಆ ನೀರಿಗೆ ಕೊಳಚೆ ನೀರು, ಕಾರ್ಖಾನೆಗಳ ತ್ಯಾಜ್ಯ ಸೇರಿ ಕಲುಸಿತಗೊಂಡು ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿ, ದನಕರುಗಳು, ಜನಸಾಮಾನ್ಯರು ಬಳಸಲು ಕೂಡ ಯೋಗ್ಯವಿಲ್ಲದ ಸ್ಥಿತಿಗೆ ತಲುಪುತ್ತಿದೆ. ಅದೇ ನೀರನ್ನು ಕೃಷಿಗೆ ಬಳಸುವುದರಿಂದ ಬೇಸಿಗೆ ಬೆಳೆಗಳಿಗೆ ರೋಗ ಬಾಧೆ ಉಂಟಾಗಿ ಬೆಳೆಹಾನಿಯಾಗುತ್ತಿದೆ.

ರೋಗದ ಬಾಧೆ;

ನದಿಯನ್ನು ಆಶ್ರಯಿಸಿದ ಗ್ರಾಮಗಳ ಜನರು ಮತ್ತು ಜಾನುವಾರುಗಳು ಕಲುಸಿತ ನೀರಿನಿಂದಾಗಿ ರೋಗಪೀಡಿತರಾಗುತ್ತಾರೆ. ಜೊತೆಗೆ ಬೆಳೆಗಳು ಇಳುವರಿ ಬಾರದೇ ಬೆಳಗಳಿಗೂ ನಾನಾ ವಿಧದ ರೋಗಗಳಿಗೆ ತುತ್ತಾಗುತ್ತಿವೆ. ಮಾನವರ ಸ್ವಯಂಕೃತ ಅಪರಾಧದಿಂದ ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ.

ಸರ್ಕಾರದ ನಿಯಮಾವಳಿಗಳ ಪ್ರಕಾರ ಗ್ರಾಮ ಪಂಚಾಯತ್‌ ಹಾಗೂ ಕಾರ್ಖಾನೆಗಳು ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ಕೊಳಚೆ ನೀರನ್ನು ಶುದ್ಧೀಕರಿಸಿ ನದಿಗೆ ಬಿಡಬೇಕು. ಆದರೆ, ಶುದ್ಧೀಕರಣವಿಲ್ಲದೆ ಕೊಳಚೆ ನೀರು ಹಾಗೂ ಕಾರ್ಖಾನೆಯ ತ್ಯಾಜ್ಯ ನೀರು ನೇರವಾಗಿ ನದಿಯ ಒಡಲು ಸೇರುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಆದರೆ ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ನಿಯಮಗಳ ಉಲ್ಲಂಘನೆಯಿಂದಾಗಿ ನದಿಯ ನೀರು ಹಾಳಾಗುತ್ತಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇದ್ದೂ ಇಲ್ಲದಂತಿದೆ.ಗ್ರಾಮಗಳ ಕೊಳಚೆ ನೀರು ನದಿ ಪಾತ್ರಕ್ಕೆ ನೇರವಾಗಿ ಸೇರ್ಪಡೆಯಾಗದಂತೆ ಗ್ರಾಪಂಗಳಲ್ಲಿ ಕೊಳಚೆ ನೀರು ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ವರ್ಷಕ್ಕೆ 2 ಗ್ರಾಮ ಆಯ್ಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಹೆಚ್ಚು ಅನುದಾನ ಬೇಕಿರುವುದರಿಂದ ವರ್ಷದಲ್ಲಿ ಎರಡು ಗ್ರಾಮಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.ಮುಂದಿನ ವರ್ಷಕ್ಕೆ ಇನ್ನೆರಡು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕಾರ್ಖಾನೆಗಳ ತ್ಯಾಜ್ಯ ನೀರಿನ ಬಗ್ಗೆ ಜಲ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕ್ರಮ ಜರುಗಿಸುತ್ತಾರೆ.

- ಸಚಿನ ಮಾಚಕನೂರು ಕಾರ್ಯನಿರ್ವಾಹಕ ಅಧಿಕಾರಿ ತಾಪಂ ಜಮಖಂಡಿಜಮಖಂಡಿ ನಗರದ ಕೊಳಚೆ ನೀರು ಮೈಗೂರು ರಸ್ತೆಯ ಕಾಲುವೆಯಿಂದ ಕಡಕೋಳ ರಸ್ತೆಯ ಕಾಲುವೆ ಮೂಲಕ ಎಸ್‌ಟಿಪಿ ಸೆವೇಜ್‌ ಟ್ರಿಟ್‌ಮೆಂಟ್‌ ಪ್ಲಾಂಟ್‌ಗೆ ಸೇರಿ ಅಲ್ಲಿ ಶುದ್ಧೀಕರಣಗೊಂಡು ಕಾಲುಗೆ ಹರಿಯುತ್ತದೆ. ಆ ನೀರನ್ನು ರೈತರು ಬೆಳೆಗಳಿಗೆ ಉಪಯೋಗಿಸುತ್ತಾರೆ. ಜಮಖಂಡಿ ನಗರದ ಕೊಳಚೆ ನೀರು ಕೃಷ್ಣೆಯ ಒಡಲು ಸೇರುವುದಿಲ್ಲ

- ಜ್ಯೋತಿ ಗಿರೀಶ ಪೌರಾಯುಕ್ತರು ಜಮಖಂಡಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ