ಶತಮಾನದ ಮಹಾಸಂತ ಶಿವಕುಮಾರ ಸ್ವಾಮೀಜಿ

KannadaprabhaNewsNetwork |  
Published : Apr 20, 2026, 01:45 AM IST
2 | Kannada Prabha

ಸಾರಾಂಶ

; ದಿವ್ಯ ದಾರ್ಶನಿಕರೂ, ಶ್ರೇಷ್ಠ ಶಿಕ್ಷಣ ತಜ್ಞರೂ ಮತ್ತು ಮಹಾ ಮಾನವತಾವಾದಿಗಳೂ ಆಗಿದ್ದರು. ನಡೆದಾಡುವ ದೇವರೆಂದೇ ಜನ ಸಾಮಾನ್ಯರಿಂದ ಹಾಗೂ ಭಕ್ತರಿಂದ ಕರೆಸಿಕೊಂಡಿವರು.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ರತ್ನ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಶಿವಕುಮಾರ ಸ್ವಾಮೀಜಿ ಅವರು ಈ ಶತಮಾನದ ಮಹಾ ಸಂತ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಅಧ್ಯಕ್ಷ ಜಯಪ್ಪ ಹೊನ್ನಾಳಿ ಹೇಳಿದರು.

ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಬುಧವಾರ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿಯ 119ನೇ ಜಯಂತಿ ಮಹೋತ್ಸವ ಹಾಗೂ ಶ್ರೀ ಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ತ್ರಿವಿಧ ದಾಸೋಹಿ ಅಷ್ಟೇ ಅಲ್ಲ; ದಿವ್ಯ ದಾರ್ಶನಿಕರೂ, ಶ್ರೇಷ್ಠ ಶಿಕ್ಷಣ ತಜ್ಞರೂ ಮತ್ತು ಮಹಾ ಮಾನವತಾವಾದಿಗಳೂ ಆಗಿದ್ದರು. ನಡೆದಾಡುವ ದೇವರೆಂದೇ ಜನ ಸಾಮಾನ್ಯರಿಂದ ಹಾಗೂ ಭಕ್ತರಿಂದ ಕರೆಸಿಕೊಂಡಿವರು. ಮಕ್ಕಳಲ್ಲೇ ಮಹದೇವನ ಕಂಡ ಸಂತ, ಪರರ ಮಕ್ಕಳಲ್ಲೇ ಪರಮಾತ್ಮನ ದರ್ಶಿಸಿದ ಮಹಂತ, ಲಕ್ಷಾಂತರ ದಮನಿತರ, ದುಃಖಿತರ, ದರಿದ್ರರ, ನಿರ್ಗತಿಕರ, ಅಸಹಾಯಕರ, ಬಡವರ, ಕತ್ತಲಲ್ಲಿದ್ದವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಮೂಲಕ, ಅವರಿಗೆ ಬೆಳಕಿನ ಭವಿಷ್ಯ ಒದಗಿಸಿದ ಕಾಯಕ ಯೋಗಿ, ಬದಲಿಗೆ ಏನನ್ನೂ ಬಯಸದ ನಿಷ್ಕಾಮ ಶಿವಯೋಗಿ, ಇಂಥವರು ಯುಗಕ್ಕೊಬ್ಬರು, ಎಲ್ಲರನ್ನೂ ತನ್ನವರೇ ಎಂದುಕೊಂಡ ಇವರೊಬ್ಬ ಆಧುನಿಕ ಬಸವಣ್ಣ ಎಂದರು.

ನರ್ಸರಿಯಿಂದ ಹಿಡಿದು ಇಂಜಿನಿಯರಿಂಗ್ ವರೆಗೆ ಶಿಕ್ಷಣ ಮತ್ತು ತರಬೇತಿಗಾಗಿ 132 ವಿದ್ಯಾ ಸಂಸ್ಥೆ ಸ್ಥಾಪಿಸಿದ ಪವಾಡ ಪುರುಷ, ಇವರಿಗೆ ಭಾರತ ರತ್ನ ಪ್ರಶಸ್ತಿ ಬಂದಿದ್ದರೆ, ಆ ಪ್ರಶಸ್ತಿಯ ಘನತೆ ಗೌರವಗಳು ಹೆಚ್ಚಾಗುತ್ತಿದ್ದವು. ಈಗಲಾದರೂ ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಕರ್ಪುರದ ಗಿರಿಯಂತೆ, 111 ವರ್ಷ, ಸುತ್ತಮುತ್ತಲ ಕತ್ತಲೆಗೆ ಬೆಳಕ ನೀಡಲು ತಮ್ಮನ್ನು ತಾವು ಉರಿಸಿಕೊಂಡು, ಶ್ರೀಗಂಧದಂತೆ ಸವೆದ ಈ ಶ್ರೇಷ್ಠ ಸಂತರಿಗೆ ಈಗಲಾದರೂ ಭಾರತರತ್ನ ನೀಡಬೇಕಿದೆ ಎಂದರು.

ಹಿರಿಯ ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್, ಅರಸು ಜಾಗೃತಿ ಅಕಾಡೆಮಿ ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್. ಅರಸ್, ಕದಳಿ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್, ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮೀಜಿ ಇದ್ದರು.

ಸಾಹಿತ್ಯ ಕ್ಷೇತ್ರದ ಡಾ.ಕೆ. ಲೀಲಾ ಪ್ರಕಾಶ್, ವೈದ್ಯಕೀಯ ಕ್ಷೇತ್ರದ ಎಸ್.ಇ. ಗಿರೀಶ್, ಶಿಕ್ಷಣ ಕ್ಷೇತ್ರದ ಎಂ.ಸಿ. ಮಂಜುಳಾ, ಕಲಾ ಮತ್ತು ಧಾರ್ಮಿಕ ಕ್ಷೇತ್ರದ ಸುಮಾ ರಾವ್, ಸಾರ್ವಜನಿಕ ಸೇವಾಕ್ಷೇತ್ರದ ಗೋಪಾಲ್, ಸಮಾಜ ಸೇವಾಕ್ಷೇತ್ರದ ತನುಜಾ ಮಹೇಶ್, ಟಿ. ಸುರೇಶ್, ಲೋಕೇಶ್ ಹಾಲಹಳ್ಳಿ ಅವರಿಗೆ ಶ್ರೀ ಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚನ್ನಬಸಪ್ಪ ಪ್ರಾರ್ಥಿಸಿದರು. ಸುಗಂಧಮ್ಮ ಜಯಪ್ಪ ಹಾಡಿದರು. ಬಸವರಾಜೇಂದ್ರ ಸ್ವಾಮಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನಸಾಗರ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಉತ್ತಮ ಫಲಿತಾಂಶ
ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವುವಂತೆ ವಿದ್ಯಾರ್ಥಿಗಳಿಗೆ ಸಲಹೆ