ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಕೆಆರ್‌ಎಸ್ ಪಕ್ಷ ಆಗ್ರಹ

KannadaprabhaNewsNetwork |  
Published : Jun 30, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೆಆರ್‌ಎಸ್‌ ಪಕ್ಷದ ರೈತ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದ ವತಿಯಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರಾಜ್ಯದ ಎಲ್ಲಾ ಭಾಗದಲ್ಲಿ ರೈತರು ರಸಗೊಬ್ಬರದ ಕೊರತೆಯನ್ನು ಅನುಭವಿಸುತ್ತಿದ್ದು ನ್ಯಾಯವಾದ ಬೆಲೆಯಲ್ಲಿ ರಸಗೊಬ್ಬರವು ರೈತರಿಗೆ ಪೂರೈಕೆಯಾಗಬೇಕು. ರೈತರ ಕೃಷಿ ಪಂಪ್‌ ಸೆಟ್‌ಗೆ 7 ಗಂಟೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಬೆಳೆ ಸಾಲದ ಮೊತ್ತ ದ್ವಿಗುಣಗೊಳಿಸಬೇಕು. ಬಡವರಿಗೆ ಯಾವುದೇ ಜಾಮೀನು ಅಥವಾ ಭದ್ರತೆ ಇಲ್ಲದೆ ಒಂದು ಕುಟುಂಬಕ್ಕೆ 1 ಲಕ್ಷ ರು. ಸಾಲ ನೀಡಬೇಕು. ಕಳೆದ ವರ್ಷದ ಬೆಳೆವಿಮೆ ಹಣ ಕೂಡಲೇ ನೀಡಬೇಕು. ಮುಂದೆ ಬೆಳೆ ವಿಮೆ ಖಾತರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬೆಳೆ ಹಾನಿಯಾದಾಗ ಕೂಡಲೇ ಬೆಳೆ ವಿಮೆ ನೀಡಬೇಕು. ಚಳ್ಳಕೆರೆ ತಾಲೂಕಿನ 12 ಗ್ರಾಮ ಪಂಚಾಯಿತಿಗಳ ಬೆಳೆ ವಿಮೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಮುಗಿಸಿ, ಈಗ ನಾಲೆ ಕೆಲಸ ಮುಗಿದಿರುವ ರಾಮಜೋಗಿಹಳ್ಳಿ ಗ್ರಾಮದವರೆಗೆ ನಾಲೆಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದರು.ದ್ವಿದಳ ಧಾನ್ಯಗಳು, ಮೆಣಸಿನಕಾಯಿ ಮತ್ತು ಎಣ್ಣೆಕಾಳು ಬೆಳೆಗೆ ಪ್ರೋತಾಹ ಧನ, ಮೆಣಸಿನಕಾಯಿ ರಫ್ತು ನಿಯಮ ಸರಳೀಕರಣ ಹಾಗೂ ರಾಗಿ, ಮೆಕ್ಕೆಜೋಳ, ದ್ವಿದಳ ಧಾನ್ಯ ಖರೀದಿ ಕೇಂದ್ರಗಳನ್ನು ತೆರೆದು ಅಲ್ಲಿ ಭ್ರಷ್ಟಾಚಾರವಿಲ್ಲದಂತೆ ಕೆಲಸ ಮಾಡಬೇಕು. ಸರ್ಕಾರಿ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರವಿಲ್ಲದೆ ಜನರಿಗೆ ಸೇವೆ ದೊರೆಯಬೇಕು. ಸರ್ಕಾರಿ ಸಿಬ್ಬಂದಿಗಳು ಜನಸ್ನೇಹಿಗಳಾಗಿ ನಡೆದುಕೊಳ್ಳಬೇಕು.ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡುವಾಗ ಅಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.ವಿದ್ಯುತ್ ಖಾಸಗೀಕರಣ ಕಾಯ್ದೆ ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೆಆರ್ ಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಬಾಂಬ್ ಬೆದರಿಕೆ
ಯುವ ಜನತೆ ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಬೇಕು-ಶ್ರೀಶೈಲಜಾ