- ನೂತನ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಿ ಶಾಸಕ ಶಾಂತನಗೌಡ ಭರವಸೆ - - -
ಕನ್ನಡಪ್ರಭ ವಾರ್ತೆ ಹೊನ್ನಾಳಿಮುಂದಿನ ದಿನಗಳಲ್ಲಿ ಕೆಎಸ್‍ಆರ್‌ಟಿಸಿ ಖಾಸಗಿ ಬಸ್‍ಗಳ ಸೌಲಭ್ಯಗಳಿಲ್ಲದ ಹಳ್ಳಿಗಳಿಗೆ ಕೆಎಸ್‍ಆರ್‌ಟಿಸಿ ಬಸ್‍ಗಳ ಸೌಲಭ್ಯ ಕೊಡಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹೊನ್ನಾಳಿ ಪಟ್ಟಣದಿಂದ ನ್ಯಾಮತಿ ತಾಲೂಕು ಕೇಂದ್ರದ ಮೂಲಕ ಶಿವಮೊಗ್ಗ ನಗರಕ್ಕೆ ಹಾಗೂ ವಿಜಯಪುರ, ರಾಯಚೂರು ಮಾರ್ಗಗಳಿಗೆ ನೂತನ ಕೆಎಸ್‍ಆರ್‌ಟಿಸಿ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನ್ಯಾಮತಿ ತಾಲೂಕಿನ ಗೋವಿನಕೋವಿ ಹೋಬಳಿಯಿಂದ, ಚೀಲೂರು ಹೋಬಳಿಯಿಂದ, ನ್ಯಾಮತಿ ತಾಲೂಕಿನ ಗಡಿ ಭಾಗವಾದ ಸೂರಗೊಂಡನಕೊಪ್ಪ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಜನರು ಕೆಎಸ್‍ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. 15 ದಿನಗಳೊಳಗೆ ಖಾಸಗಿ ಬಸ್ ಮಾಲೀಕರು ಹಾಗೂ ಮುಖಂಡರ ಸಭೆ ಕರೆದು ಬಸ್ ಸಂಚಾರ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದು ಸಂಚಾರ ಆರಂಭಿಸಿರುವ ಹೊನ್ನಾಳಿ- ಶಿವಮೊಗ್ಗ ಮಾರ್ಗದ ಬಸ್ ಸಂಚಾರ ಬೆಳಗ್ಗೆ 8.30ಕ್ಕೆ ಆರಂಭವಾಗಲಿದೆ. ಹೊನ್ನಾಳಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ನ್ಯಾಮತಿ, ಸುರಹೊನ್ನೆ, ಸವಳಂಗ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಸಾಗಿ ಶಿವಮೊಗ್ಗ ನಗರ ತಲುಪುತ್ತದೆ. ಎಲ್ಲ ಗ್ರಾಮಗಳಲ್ಲಿ ಬಸ್ ನಿಲುಗಡೆ ಇರುತ್ತದೆ. ಶಿವಮೊಗ್ಗದಿಂದ ಇದೇ ರೂಟ್ ಮೂಲಕ ಹೊನ್ನಾಳಿಗೆ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ ಅವರು, ಜನರ ಬೇಡಿಕೆ ಇಂದು ಈಡೇರಿಸಲಾಗಿದೆ ಎಂದರು.ಹೊನ್ನಾಳಿ ಕೆಎಸ್‍ಆರ್‌ಟಿಸಿ ಬಸ್ ಡಿಪೋದಿಂದ ಪಟ್ಟಣದ ಕೆಎಸ್‍ಆರ್‌ಟಿಸಿ, ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು ಹಾಗೂ ಸದಲಗ ನಗರಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಪ್ರಯಾಣಿಕರು ಬಸ್ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ಡೀಪೋ ವ್ಯವಸ್ಥಾಪಕ ಮಹೇಶ್ವರಪ್ಪ ಹಾಗೂ ಇತರರು ಇದ್ದರು.- - - -14ಎಚ್.ಎಲ್.ಐ3:
ಹೊನ್ನಾಳಿ ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ನೂತನ ಸಾರಿಗೆ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಿದರು.