ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವುದಕ್ಕೆ ಶ್ಲಾಘನೆ

KannadaprabhaNewsNetwork |  
Published : Sep 08, 2025, 01:00 AM IST
7ಎಚ್ಎಸ್ಎನ್16 : ಹೊಳೆನರಸೀಪುರ ಮಹಾಗಣಪತಿ ವೇದಿಕೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮದಲ್ಲಿ ಸಮಿತಿ ವತಿಯಿಂದ ಆಡಳಿತ ವೈದ್ಯಾಧಿಕಾರಿ ನಾಗೇಂದ್ರ, ನಿವೃತ್ತ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್, ಡಾ. ರಾಮು, ಡಾ ಸತ್ಯಪ್ರಕಾಶ್, ಡಾ. ಅಶ್ವಥಿ ಹಾಗೂ ಇತರರನ್ನು ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಸನ್ಮಾನಿಸಿದರು. | Kannada Prabha

ಸಾರಾಂಶ

ಪಟ್ಟಣದ ಗಣಪತಿ ಪೆಂಡಾಲ್ ವೇದಿಕೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಅವರ ಮಕ್ಕಳು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಪ್ರತಿದಿನ ಮಧ್ಯಾಹ್ನ ಶ್ರೀಸ್ವಾಮಿಗೆ ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತರಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ನಪ್ರಸಾದ ನೀಡುತ್ತಿರುವುದು ನಮ್ಮ ಸಂಸ್ಕೃತಿಯ ಪಾಲನೆ ಮತ್ತು ಅವರಣೆಗೆ ನೀಡುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು. ರಾಜಕುಮಾರ್ ಹಾಡಿಗೆ ಮಾಡಿದ ನೃತ್ಯ, ಬಾಲಕ ದೊರೆ, ಗಣೇಶ್, ಇಷ್ಟಾರ್ಥ್ ಸ್ವಾಮಿ, ಬಾಲಕಿಯರಾದ ಇಂಪಿನಾ, ಅದ್ವಿತಾ, ಶೋಭಾ, ಸಂದ್ಯಾ ನಡೆಸಿಕೊಟ್ಟ ನೃತ್ಯ, ದಿಶಾಂತ್‌ನ ಶ್ಲೋಕಗಳು, ಮೇಘನಾ ತಂಡದ ಸಮೂಹ ನೃತ್ಯ ಸಭಿಕರನ್ನು ರಂಜಿಸಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಮಹಾಗಣೇಶೋತ್ಸವ ಸೇವಾ ಸಮಿತಿಯವರು ಕಳೆದ ೬೮ ವರ್ಷಗಳಿಂದ ಈ ವೇದಿಕೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಗೆ ಹಾಗೂ ಸ್ಥಳೀಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ನಿವೃತ್ತ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗಣಪತಿ ಪೆಂಡಾಲ್ ವೇದಿಕೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಅವರ ಮಕ್ಕಳು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಪ್ರತಿದಿನ ಮಧ್ಯಾಹ್ನ ಶ್ರೀಸ್ವಾಮಿಗೆ ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತರಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ನಪ್ರಸಾದ ನೀಡುತ್ತಿರುವುದು ನಮ್ಮ ಸಂಸ್ಕೃತಿಯ ಪಾಲನೆ ಮತ್ತು ಅವರಣೆಗೆ ನೀಡುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಅವರ ಮಕ್ಕಳು ಪ್ರದರ್ಶಿಸಿದ ನೃತ್ಯ, ಭರತ ನಾಟ್ಯ, ಮಿಮಿಕ್ರಿ, ರೀಮಿಕ್ಸ್ ಚಿತ್ರಗೀತೆಗಳು, ಸುಮಧುರ ಹಾಡುಗಳು, ದಂತತಜ್ಞೆ ಡಾ. ಅಶ್ವಥಿ ಅವರ ಭರತನಾಟ್ಯ, ಡಾ. ಲಕ್ಷ್ಮೀಕಾಂತ್, ಡಾ. ಲೋಕೇಶ್, ಸಿರಿ, ಅಣ್ಣೇಗೌಡ, ಯಶಸ್ವಿನಿ, ಅವರ ಚಲನಚಿತ್ರಗೀತೆಗಳು, ತರಬೇತಿ ವೈದ್ಯ ಡಾ. ಧನುಶ್ ಅವರು ನಡೆಸಿಕೊಟ್ಟ ವಿವಿಧ ಕಲಾವಿದರ ಹಾಗೂ ರಾಜಕಾರಣಿಗಳ ಮಿಮಿಕ್ರಿ ಹಾಗೂ ಪುನೀತ್ ರಾಜಕುಮಾರ್ ಹಾಡಿಗೆ ಮಾಡಿದ ನೃತ್ಯ, ಬಾಲಕ ದೊರೆ, ಗಣೇಶ್, ಇಷ್ಟಾರ್ಥ್ ಸ್ವಾಮಿ, ಬಾಲಕಿಯರಾದ ಇಂಪಿನಾ, ಅದ್ವಿತಾ, ಶೋಭಾ, ಸಂದ್ಯಾ ನಡೆಸಿಕೊಟ್ಟ ನೃತ್ಯ, ದಿಶಾಂತ್‌ನ ಶ್ಲೋಕಗಳು, ಮೇಘನಾ ತಂಡದ ಸಮೂಹ ನೃತ್ಯ ಸಭಿಕರನ್ನು ರಂಜಿಸಿತು.

ಭಾನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ನಾಗೇಂದ್ರ, ನಿವೃತ್ತ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್, ಡಾ. ರಾಮು, ಡಾ. ಅಜಯ್, ಡಾ.ಲೋಕೇಶ್, ಡಾ. ಸತ್ಯಪ್ರಕಾಶ್, ಡಾ. ಅಶ್ವಥಿ, ಡಾ. ಪ್ರತಿಭಾ, ಡಾ. ವಿನಯ್, ಡಾ ರೇಖಾ, ಡಾ. ರಕ್ಷಿತ್ ಅವರನ್ನು ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಸನ್ಮಾನಿಸಿದರು.

ಸಮಿತಿಯ ಆರ್‌. ಬಿ. ಪುಟ್ಟೇಗೌಡ, ಎಚ್.ವಿ.ಸುರೇಶ್‌ ಕುಮಾರ್, ಶಿವಕುಮಾರ್, ವೈ.ವಿ. ಚಂದ್ರಶೇಖರ್, ಇತರರು ಭಾಗವಹಿಸಿದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌