ರೋಮಾಂಚಗೊಳಿಸಿದ ಕುದ್ರೋಳಿ ಗಣೇಶ್ ಮ್ಯಾಜಿಕ್‌

KannadaprabhaNewsNetwork |  
Published : Sep 04, 2026, 03:15 AM IST
ಬಸವನಬಾಗೇವಾಡಿಯ ನಂದೀಶ್ವರ ರಂಗಮಂದಿರದಲ್ಲಿ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಬುಧವಾರ ಸಂಜೆ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನ ವೀಕ್ಷಕರನ್ನು ಮಂತ್ರಮುಗ್ದಗೊಳಿಸಿತು | Kannada Prabha

ಸಾರಾಂಶ

ಬಸವನಬಾಗೇವಾಡಿಯ ನಂದೀಶ್ವರ ರಂಗಮಂದಿರದಲ್ಲಿ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಬುಧವಾರ ಸಂಜೆ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನ ವೀಕ್ಷಕರನ್ನು ಮಂತ್ರಮುಗ್ದಗೊಳಿಸಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯಂಗವಾಗಿ ಬುಧವಾರ ಸಂಜೆ ನಂದೀಶ್ವರ ರಂಗಮಂದಿರದಲ್ಲಿ ಜರುಗಿದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ ಹಾಗೂ ಅವರ ಬಳಗದಿಂದ ಪ್ರದರ್ಶನಗೊಂಡ ಜಾದೂ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು.

ಜಾದೂ ಕಾರ್ಯಕ್ರಮಕ್ಕೆ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ ಚಾಲನೆ ನೀಡಿದರು.

ಭಾರತೀಯ ಜಾದೂ ರಂಗದಲ್ಲಿ ಕುದ್ರೋಳಿ ಗಣೇಶ್ ವಿಶಿಷ್ಟವಾದ ಸ್ಥಾನ ಪಡೆದಿದ್ದು, ಜಾದೂ ಕಲೆಗೆ ನವರಸ ತುಂಬಿ ಭಾರತೀಯ ಜಾದೂಗೆ ವಿಶ್ವಮಾನ್ಯತೆ ತಂದುಕೊಟ್ಟ ಅವರು ಮಾಯದ ಕತ್ತರಿ, ಪುಂಗಿಯ ನಾದಕ್ಕೆ ಹಗ್ಗ ಮೇಲಕ್ಕೆ ಏಳುವುದು, ಮಾಯದ ಪೆಟ್ಟಿಗೆಯಿಂದ ವಿವಿಧ ಬಣ್ಣದ ಛತ್ರಿಗಳನ್ನು, ವಿವಿಧ ಬಣ್ಣದ ಸೀರೆಗಳನ್ನು ಹೊರುವ ತರುವ ಮೂಲಕ ಒರ್ವ ಹುಡುಗಿ ಹೊರಬರುವಂತೆ ಮಾಡುವುದು, ನೋಟು ಎಣಿಕೆ,‌ ಡ್ರೆಸ್ ಟೆಸ್ಟ್, ಬಾಲಕನನ್ನು ಅಂತರದಲ್ಲಿ ನಿಲ್ಲಿಸಿದ್ದು, ಪಿಲ್ಮಿ ಮ್ಯಾಜಿಕ್, ಜಪಾನಿ ಮ್ಯಾಜಿಕ್, ಮಾಯ ಬೀಸಣಿಕೆ, ಎಸ್ಕೇಪ್ ಮ್ಯಾಜಿಕ್, ಅಗೋಚರ ದೃಷ್ಟಿ, ಭಯಾನಕ ಜಾದು, ಮ್ಯಾಜಿಕ್ ವಿಥ್ ಮ್ಯೂಜಿಕ್, ಇಂಡಿಯನ್ ಬಾಸ್ಕೆಟ್, ನಾನ್ ಸ್ಟಾಪ್ ಮಸ್ತ್ ಮ್ಯಾಜಿಕ್, ಭಾರತಕ್ಕೆ ನಮನ, ಮಸ್ತ್ ಮ್ಯಾಜಿಕ್, ಮೈಂಡ್ ಮ್ಯಾಜಿಕ್, ಮುಖ ಮನಸ್ಸಿನ ಕನ್ನಡಿ, ಕಾಮಿಡಿ ಮ್ಯಾಜಿಕ್, ಓರ್ವ ಮಹಿಳೆಯನ್ನು ಅಂತರದಲ್ಲಿ ನಿಲ್ಲಿಸುವುದು, ತುಳುನಾಡಿನ ಜಾದೂ ಸೇರಿ ವಿವಿಧ ವಿಸ್ಮಯ ಜಾದೂ ಪ್ರದರ್ಶಿಸುವ ಮೂಲಕ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.ಮುಖಂಡರಾದ ಬಸವರಾಜ ಗೊಳಸಂಗಿ, ಎಂ.ಜಿ. ಆದಿಗೊಂಡ, ಲೋಕನಾಥ ಅಗರವಾಲ, ಡಾ.ಕರುಣಕರ ಚೌಧರಿ, ಅನಿಲ ಅಗರವಾಲ, ಡಾ.ಬಸವರಾಜ ಕೋಟಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಸುರೇಶಗೌಡ ಪಾಟೀಲ, ಅಮರ ಗಾಯಕವಾಡ, ಜಾತ್ರಾಮಹೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿಯ ಪದಾಧಿಕಾರಿಗಳು ಸೇರಿ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕೃಷ್ಣಾರತಿಗೆ ರೈತರಿಂದ ಸಕಲ ಸಿದ್ಧತೆ
ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಇಂದು ಮನವಿ