ಕುಕ್ಕೆ: ಆಶ್ಲೇಷ ಬಲಿ ಪೂಜೆ ‘ದಿಟ್ಟಂ’ ಬದಲಾವಣೆಗೆ ವಿರೋಧ

KannadaprabhaNewsNetwork |  
Published : Oct 28, 2026, 02:30 AM IST
ಕುಕ್ಕೆ ಸುಬ್ರಹ್ಮಣ್ಯ | Kannada Prabha

ಸಾರಾಂಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆ ಮಾಡಿರುವ ಕ್ಷೇತ್ರದ ಆಡಳಿತ ಸಮಿತಿಯ ನಿರ್ಧಾರದ ವಿರುದ್ಧ ಇದೀಗ ಅಸಮಾಧಾನ ವ್ಯಕ್ತವಾಗಿದ್ದು, ಹೋರಾಟ ನಡೆಸುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆ ಮಾಡಿರುವ ಕ್ಷೇತ್ರದ ಆಡಳಿತ ಸಮಿತಿಯ ನಿರ್ಧಾರದ ವಿರುದ್ಧ ಇದೀಗ ಅಸಮಾಧಾನ ವ್ಯಕ್ತವಾಗಿದ್ದು, ಹೋರಾಟ ನಡೆಸುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲಾಗುವ ಆಶ್ಲೇಷ ಬಲಿ ಪೂಜೆ, ನಾಗಪ್ರತಿಷ್ಠೆ ಮಾಡಿಸುವ ಭಕ್ತರಿಗೆ ಸಂಕಲ್ಪ ಮಂದಿರದಲ್ಲಿ ಪ್ರತ್ಯೇಕ (ಪೂಜೆ ಮಾಡಿಸುವವರಿಗೆ ಒಬ್ಬೊಬ್ಬರಂತೆ) ಸಂಕಲ್ಪ ಮಾಡಿಕೊಂಡು ಬರಲಾಗಿತ್ತು. ಪ್ರತ್ಯೇಕ ಸಂಕಲ್ಪಕ್ಕಾಗಿ ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಮಾಡುತ್ತಿದ್ದಾಗ ಉಂಟಾಗುತ್ತಿದ್ದ ನೂಕುನುಗ್ಗಲು, ತೊಂದರೆ ತಪ್ಪಿಸಲು ದೂರುಗಳು ಇದ್ದ ಕಾರಣ ಅದನ್ನಾಧರಿಸಿ ಸಾಮೂಹಿಕ ಸಂಕಲ್ಪದ ನಿರ್ಧಾರವನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಕೈಗೊಂಡಿದೆ. ಅದರಂತೆ ಪ್ರಸ್ತುತ ಆಶ್ಲೇಷ ಬಲಿ ಪೂಜೆ ನಡೆಯುವ ಸ್ಥಳದಲ್ಲೇ ಸಾಮೂಹಿಕ ಸಂಕಲ್ಪ ಮಾಡಲಾಗುತ್ತಿದೆ.

ದಿಟ್ಟಂ ಬದಲಾವಣೆಗೆ ವಿರೋಧ:

ಕ್ಷೇತ್ರದಲ್ಲಿ ಈ ಹಿಂದಿನಿಂದ ನಡೆದುಕೊಂಡು ಬರಲಾಗಿದ್ದ ಸಂಕಲ್ಪದಲ್ಲಿ ಬದಲಾವಣೆ ಮಾಡಿರುವ ಬಗ್ಗೆ ಇದೀಗ ವಿರೋಧ ವ್ಯಕ್ತವಾಗಿದೆ. ಆಶ್ಲೇಷ ಪೂಜೆ ಬಲಿ ಪೂಜೆ ನಡೆಯುವ ಸಂದರ್ಭದಲ್ಲಿ ಮುಂಚಿತವಾಗಿ ಸಂಕಲ್ಪ ಮಾಡಿ ಪೂಜೆಗೆ ಕುಳಿತುಕೊಳ್ಳುವ ಈ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ ತಕ್ಷಣ ಲ್ಲಿಸಿರುವುದು ಧಾರ್ಮಿಕ ನಂಬಿಕೆಗೆ ಮತ್ತು ಹಿಂದೂ ಪದ್ಧತಿಯಲ್ಲಿರುವ ಆಚರಣೆಗಳನ್ನು ಮೊಟಕುಗೊಳಿಸುವ ರೀತಿಯಲ್ಲಿ ಅಧಿಕಾರಿಗಳ ಪಿತೂರಿ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.

ಹೋರಾಟಕ್ಕೆ ಸಿದ್ಧತೆ:

ಸಾಮೂಹಿಕ ಸಂಕಲ್ಪ ಮಾಡುವುದನ್ನು ವಿರೋಧಿಸಿ ಈ ಹಿಂದಿನ ಪದ್ಧತಿ ಮರು ಜಾರಿಗೆ ಆಗ್ರಹಿಸಿ ಹೋರಾಟಕ್ಕೆ ಸಿದ್ಧತೆಗಳು ಆರಂಭಗೊಂಡಿದೆ. ಭಕ್ತರು ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿಕೊಂಡು 29ರಂದು ಸುಬ್ರಹ್ಮಣ್ಯದಲ್ಲಿ ಹೋರಾಟದ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಿಶೋರ್‌ ಶಿರಾಡಿ ಮತ್ತು ಜಯಪ್ರಕಾಶ್‌ ಕೂಜುಗೋಡು ತಿಳಿಸಿದ್ದಾರೆ.

ಆಶ್ಲೇಷ ಬಲಿ ಪೂಜೆ ಮಾಡಿಸುವಾಗ ಪ್ರತ್ಯೇಕ ಸಂಕಲ್ಪ ಅತ್ಯಗತ್ಯ. ಯಾಕೆಂದರೆ ಪ್ರತಿಯೊಬ್ಬರಿಗೂ ಬೇರೆ ಬೇರೆ ಕಾರಣಗಳಿರುತ್ತವೆ. ಎಲ್ಲರಿಗೂ ಒಂದೇ ಸಂಕಲ್ಪ ಹೇಗೆ ಸಾಧ್ಯ? ಆದ್ದರಿಂದ ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪವನ್ನು ತಕ್ಷಣ ಮರು ಜಾರಿ ಮಾಡಬೇಕು. ದೇವಾಲಯದ ದಿಟ್ಟಂಗೆ ವಿರುದ್ಧವಾದ ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಭಕ್ತರೊಂದಿಗೆ ಸೇರಿ ನ್ಯಾಯಬದ್ಧ ಹೋರಾಟ ಮಾಡಲಾಗುವುದು.

-ಪ್ರಸನ್ನ ದರ್ಬೆ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೋನ್‌ಇನ್‌ನಲ್ಲಿ ಕಸದ ಸಮ್ಯಸ್ಯೆಗಳದ್ದೇ ಸದ್ದು!
ಎಸ್‌ಐಆರ್‌ನಿಂದಾಗಿ ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರುಗಳು ಡಿಲೀಟ್ । ರಾಜಧಾನಿಯಲ್ಲಿ ಬರೀ 59 ಲಕ್ಷ ಮತದಾರರು