ಗಂಗಾಧರ ಕೊಳಗಿ
ಇಗ್ನೋದಲ್ಲಿ ಬಿಎಡ್ ಪದವಿ ಪಡೆದಿರುವ ಕುಮಾರ ಎಂ. ಗ್ರಾಮೀಣ ಪ್ರದೇಶದ ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ಪ್ರಯೋಗಾಧಾರಿತ ಪಾಠ ಬೋಧನೆ ಮಾಡುವ ವಿಧಾನವನ್ನು ರೂಢಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಸ್ಯಗಳ ವೈಜ್ಞಾನಿಕ ಹೆಸರುಗಳು, ಅಳಿವಿನಂಚಿನಲ್ಲಿರುವ ಜೀವಿಗಳು ಹಾಗೂ ಪ್ಲಾಂಟ್ ಆ್ಯಪ್‌ಗಳ ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ಪ್ರಕೃತಿಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನ ಅವರದ್ದಾಗಿದೆ.ಯುಟ್ಯೂಬ್‌ನಲ್ಲಿ ನೂರಕ್ಕೂ ಹೆಚ್ಚು ವಿಜ್ಞಾನ ಪ್ರಯೋಗಗಳ ವಿಡಿಯೋ ಮಾಡಿ ತಮ್ಮ ಶಾಲೆಯ ವಿದ್ಯಾರ್ಥಿಗಳಿಗಳಲ್ಲದೇ, ಇತರ ವಿದ್ಯಾರ್ಥಿಗಳಿಗೂ ಅದರ ಪ್ರಯೋಜನ ದೊರೆಯುವಂತೆ ಮಾಡಿದ್ದಾರೆ.
ಕುಮಾರ ಎಂ. ಅವರು ಮೊದಲಿಗೆ ಕೊಡಗಿನ ಮೊನ್ನಂಗೇರಿಯಲ್ಲಿ ಶಿಕ್ಷಕನಾಗಿ ಸೇವೆ ಆರಂಭಿಸಿ ಹೊಸದೇವಾಡೆ, ನಾಪೊಕ್ಲು ಮುಂತಾದೆಡೆ ವೃತ್ತಿ ನಿರ್ವಹಿಸಿ 2019ರಲ್ಲಿ ಸಿದ್ದಾಪುರ ತಾಲೂಕಿನ ಬಾಳೇಸರ ಶಾಲೆಗೆ ವರ್ಗಾವಣೆಗೊಂಡು ಪ್ರಸ್ತುತ ಗೋಳಿಕೈ ಪ್ರಾಥಮಿಕ ಶಾಲೆಯಲ್ಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿನೂತನ ಮಾದರಿಯ ಪಾಠ ಮಾಡುವ ಶಂಕರಾನಂದ
ಶಂಕರ ಭಟ್ಟ ತಾರೀಮಕ್ಕಿ
ಯಲ್ಲಾಪುರ: ತಾಲೂಕಿನ ಗ್ರಾಮೀಣ ಪ್ರದೇಶದ ಚಿಕ್ಕಮಾವಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕರಾನಂದ ಗುಲಾಬರಾಯ ದೇವದಾಸ ಒಬ್ಬ ವಿನೂತನ ಮಾದರಿಯಲ್ಲಿ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಅನೇಕ ಬಾರಿ ಶಿಕ್ಷಕರ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಗಿ ಭಾಗವಹಿಸಿದ್ದಾರೆ. ೨೦೨೪ರಲ್ಲಿ ಶಿಕ್ಷಕರ ಸಂಘ ನೀಡುವ ಜಿಲ್ಲಾ ಮಟ್ಟದ ಡಾ. ಎಸ್. ರಾಧಾಕೃಷ್ಣನ್ ಪ್ರಶಸ್ತಿ ಲಭಿಸಿದೆ. ಅಲ್ಲದೇ ಬೋಧನೆಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಿದ್ಧಹಸ್ತರು. ನಾಟಕ, ಕಲೆ, ಲಘುಸಂಗೀತ, ವಿಜ್ಞಾನ ಗಣಿತ ಇವನ್ನು ಮನೋಜ್ಞವಾಗಿ ಪಾಠ ಮಾಡುವಲ್ಲಿ ಅತ್ಯಂತ ಪರಿಣತಿ ಗಳಿಸಿಕೊಂಡಿದ್ದಾರೆ.ಇವರ ಶಾಲೆಯಲ್ಲಿ ೨೯ ವಿದ್ಯಾರ್ಥಿಗಳಿದ್ದು, ೬ ಮತ್ತು ೭ ತರಗತಿಗೆ ಇಂಗ್ಲಿಷ್, ಗಣಿತ, ವಿಜ್ಞಾನ ಪಾಠ ಮಾಡುವ ಇವರು ಮಕ್ಕಳಿಗೆ ನಾಟಕ ತರಬೇತಿ, ಏಕಪಾತ್ರಾಭಿನಯ, ಸಿದ್ಧಭಾಷಣ ಇವೆಲ್ಲ ಇವರ ನಿತ್ಯ ಶಾಲೆಯ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳುತ್ತಾರೆ. ವಿಶೇಷವಾಗಿ ಇವರ ಮಡದಿ ಅಶ್ವಿನಿ ಸಂಗೀತಗಾರ್ತಿಯಾಗಿದ್ದು, ಇವರು ತಬಲಾ ವಾದಕರು ಕೂಡ.