ಗಂಗಾವತಿ: ಹಾನಗಲ್ ಕುಮಾರ ಶಿವಯೋಗಿಗಳು ಶರಣ ಸಂಸ್ಕೃತಿಯ ಮಹಾ ತಪಸ್ವಿಯಾಗಿದ್ದರು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಗಂಗಾವತಿ ನಗರದ ಸರ್ವಾಂಗೀಣ ಅಭಿವೃದ್ದಿಗೆ ತಾವು ಶ್ರಮಿಸುತ್ತಿದ್ದು, ಬರುವ ದಿನಗಳಲ್ಲಿ ಗಂಗಾವತಿ ನಗರ ಚೋಟಾ ಬಾಂಬೆ ಎನಿಸಿಕೊಳ್ಳುತ್ತದೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಟಟಕ್ಕೆ ಬಲಿಯಾಗುತ್ತಿದ್ದಾರೆ. ಈ ಸದ್ಭಾವನಾ ಪಾದಯಾತ್ರೆಯಿಂದ ಯುವಕರು ಬದಲಾವಣೆ ತಂದುಕೊಳ್ಳಬೇಕು ಎಂದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಕುಮಾರೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಕುರಹೀನ ಶೆಟ್ಟಿ ಸಮಾಜದವರಿಗೆ ಕುಂಭ ಮೆರವಣಿಗೆ ಅವಕಾಶ ನೀಡಿದ್ದೀರಿ, ಇದಕ್ಕೆ ತಮಗೆ ತೃಪ್ತಿ ತಂದಿದೆ ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, 10 ದಿನಗಳ ಕಾಲ ನಗರ ಸೇರಿದಂತೆ ಗ್ರಾಮೀಣ ಮಟ್ಟದಲ್ಲಿ ಸದ್ಭಾವನ ಯಾತ್ರೆ ಯಶಸ್ವಿಗೊಳಿಸಿದ್ದೀರಿ. ಇದಕ್ಕೆ ಹಾನಗಲ್ ಕುಮಾರೇಶ್ವರ ಕೃಪೆ ಎಂದರು. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಜಿ. ವೀರಪ್ಪ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಗುತ್ತಿಗೆದಾರ ವೀರಯ್ಯಸ್ವಾಮಿ, ಗಿರೇಗೌಡ, ಅಶೋಕಸ್ವಾಮಿ, ವೈ. ಆನಂದರಾವ್ ಭಾಗವಹಿಸಿದ್ದರು.
ಮೆರವಣಿಗೆ: ಹಾನಗಲ್ ಕುಮಾರಸ್ವಾಮೀಜಿಗಳ 158ನೇ ಜಯಂತಿ ಮತ್ತು ಸದ್ಭಾವನಾ ಪಾದಯಾತ್ರೆಯ ಸಮಾರೋಪ ಅಂಗವಾಗಿ ನಗರದ ನೀಲಕಂಠೇಶ್ವೇರ ದೇವಸ್ಥಾನದಿಂದ ಸಿಬಿಎಸ್ ಕಲ್ಯಾಣ ಮಂಟಪದ ವರೆಗೆ ಕುಂಭ ಮೆರವಣಿಗೆ ಜರುಗಿತು.