ಕುಮಾರಣ್ಣ ಹತಾಶರಾಗಿದ್ದಾರೆ-ಡಿಸಿಎಂ ಡಿಕೆಶಿ ಲೇವಡಿ

KannadaprabhaNewsNetwork |  
Published : May 04, 2024, 12:35 AM IST
ಪೋಟೋ ಇದೆ. | Kannada Prabha

ಸಾರಾಂಶ

ಕುಮಾರಣ್ಣ ಹತಾಶರಾಗಿದ್ದು, ದಿನಕ್ಕೆ ಒಂದು ಸ್ಟ್ಯಾಂಡ್ ಚೆಂಜ್ ಮಾಡ್ತಾರೆ. ಒಂದು ದಿನ ಉಪ್ಪು ತಿಂದವರು ನೀರು ಕುಡಿಬೇಕು ಅಂತಾರೆ, ಮತ್ತೊಂದು ದಿನ ಅವರ ಫ್ಯಾಮಿಲಿ ಬೇರೆ ನಮ್ಮ ಫ್ಯಾಮಿಲಿ ಬೇರೆ ಅಂತಾರೆ. ಒಂದಿನ ಕುಟುಂಬದವರಿಗೆ ಟಿಕೆಟ್ ಕೊಡಲ್ಲ ಅಂದ್ರು. ಅವರು ಯಾವತ್ತೂ ಸ್ಥಿಮಿತ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಲೇವಡಿ ಮಾಡಿದರು.

ರಾಣಿಬೆನ್ನೂರು: ಕುಮಾರಣ್ಣ ಹತಾಶರಾಗಿದ್ದು, ದಿನಕ್ಕೆ ಒಂದು ಸ್ಟ್ಯಾಂಡ್ ಚೆಂಜ್ ಮಾಡ್ತಾರೆ. ಒಂದು ದಿನ ಉಪ್ಪು ತಿಂದವರು ನೀರು ಕುಡಿಬೇಕು ಅಂತಾರೆ, ಮತ್ತೊಂದು ದಿನ ಅವರ ಫ್ಯಾಮಿಲಿ ಬೇರೆ ನಮ್ಮ ಫ್ಯಾಮಿಲಿ ಬೇರೆ ಅಂತಾರೆ. ಒಂದಿನ ಕುಟುಂಬದವರಿಗೆ ಟಿಕೆಟ್ ಕೊಡಲ್ಲ ಅಂದ್ರು. ಅವರು ಯಾವತ್ತೂ ಸ್ಥಿಮಿತ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಲೇವಡಿ ಮಾಡಿದರು.

ನಗರದ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಹಿಂದೆಲ್ಲ ಬಿಜೆಪಿಯವರಿಗೆ ಬೈಯ್ದಿದಾರೆ. ಒಂದಿನ ನನ್ನ 420 ಅಂತಾ ಕರೆದರು. ಅವರು ಕೋಪದಲ್ಲಿದ್ದಾರೆ, ಶಾಂತವಾಗಲಿ ಆಮೇಲೆ ಚರ್ಚೆ ಮಾಡೋಣ ಎಂದರು.

ಕುಮಾರಸ್ವಾಮಿಗೆ ದೇವರಾಜೇಗೌಡ ಭೇಟಿ ಮಾಡಿದ್ನೋ ಬಿಟ್ನೋ ಗೊತ್ತಿಲ್ಲ. ಪೊಲೀಸರು ಮತ್ತೊಂದು ಎಫ್‌ಐಆರ್ ಹಾಕಿದ್ದಾರಂತ ಕೇಳಿದ್ದೀನಿ. ನನಗೆ ಉತ್ತರ ಬೇಕಾಗಿರೋದು ಲೋಕಲ್ ಬಿಜೆಪಿ ಲೀಡರ್‌ಗಳ ಕಡೆಯಿಂದ. ಎಲ್ಲರು ಬಾಯಿಗೆ ಬೀಗ ಹಾಕಿ ಕೊಂಡಿದ್ದಾರಲ್ಲ. ಪಾಪ ಕುಮಾರಸ್ವಾಮಿ ಒಬ್ಬನ ಕೈಯಲ್ಲಿ ಯಾಕೆ ಮಾತಾನಾಡಿಸ್ತಿದ್ದಾರೆ? ಎಂದು ಪ್ರಶ್ನಿಸಿದರು.

ತಮ್ಮ (ಡಿಕೆಶಿಯವರ) ಕ್ಯಾಸೆಟ್ ವಿಚಾರವಾಗಿ ಮಾತನಾಡಿ, ರೇವಣ್ಣ ಮುಹೂರ್ತ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಲಿ. ನಾನು ಎಲ್ಲದಕ್ಕೂ ರೆಡಿ ಇದ್ದೇವೆ. ಬಿಡುಗಡೆ ಮಾಡಲು ಯಾರು ಬೇಡ ಅಂದಿದಾರೆ? ಅವರ ತಂದೆ ಹೇಳ್ತಿದ್ರು ಅದ್ಯಾವದೋ ಒಂಬತ್ತು ವರ್ಷದ ಹೆಣ್ಣು ಮಗಳು ಅಂತಾ ಅದನ್ನ ಯಾಕೆ ಇನ್ನೂ ರಿಲೀಜ್ ಮಾಡಲಿಲ್ಲ? ಟೈಂ ಫಿಕ್ಸ್ ಮಾಡಲಿ. ಸುಮ್ಮನೆ ಖಾಲಿ ಮಾತನಾಡೋದು ಬೇಡ. ನಾವು ಗಂಡಸರಲ್ಲ, ಅವರೇ ಗಂಡಸರು. ನಮಗ್ಯಾರಿಗೂ ತಾಕತ್ ಇಲ್ಲ, ಅವರಿಗಿರುವ ತಾಕತ್ ನಮಗಿಲ್ಲ. ನಾವು ಗಂಡಸರು ಅಲ್ಲ ಹೆಂಗಸರು ಅಲ್ಲ ಎಂದು ಡಿಕೆಶಿ ಲೇವಡಿಮಾಡಿದರು.

PREV

Recommended Stories

ಅಸ್ಸಾಂನಲ್ಲಿ ಯಾವ ಪ್ರತಿಭೆ ಇದೆ ಎಂದು ಹೂಡಿಕೆ? : ಪ್ರಿಯಾಂಕ್‌
ಪ್ರಿಯಾಂಕ್‌ರಿಂದ ಅಸ್ಸಾಮಿ ಜನತೆಗೆ ಅವಮಾನ : ಸಿಎಂ ಶರ್ಮ