ಸಂಘಟನೆಯಲ್ಲಿ ಕುಂಚಟಿಗರು ಅಲ್ಪ ಸಂಖ್ಯಾತರು

KannadaprabhaNewsNetwork |  
Published : May 26, 2025, 11:57 PM ISTUpdated : May 26, 2025, 11:58 PM IST
ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ  ಶ್ರೀ ದೃಷ್ಠೇಶ್ವರಸ್ವಾಮಿ ಸಮುದಾಯ ಭವದಲ್ಲಿ   ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ   ಹಾಗೂ ಕುಂಚಿಟಿಗರ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ವತಿಯಿಂದ  2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ. 80ಕಿಂತ ಹೆಚ್ಚು ಅಂಕ ಪಡೆದ ಕುಂಚಿಟಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ | Kannada Prabha

ಸಾರಾಂಶ

ಕುಂಚಿಟಿಗರು ಅಲ್ಪಸಂಖ್ಯಾತರಲ್ಲ ಸಂಘಟನೆಯಲ್ಲಿ ಮಾತ್ರ ಅಲ್ಪಸಂಖ್ಯಾತರು ಎಂದು ಎಲೆರಾಂಪುರದ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಕುಂಚಿಟಿಗರು ಅಲ್ಪಸಂಖ್ಯಾತರಲ್ಲ ಸಂಘಟನೆಯಲ್ಲಿ ಮಾತ್ರ ಅಲ್ಪಸಂಖ್ಯಾತರು ಎಂದು ಎಲೆರಾಂಪುರದ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಚೇಳೂರು ಗ್ರಾಮದಲ್ಲಿ ಶ್ರೀ ದೃಷ್ಠೇಶ್ವರಸ್ವಾಮಿ ಸಮುದಾಯ ಭವದಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕುಂಚಿಟಿಗರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಏರ್ಪಡಿಸಿದ್ದ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ. 80ಕಿಂತ ಹೆಚ್ಚು ಅಂಕ ಪಡೆದ ಕುಂಚಿಟಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ತಮ್ಮನ್ನು ಸಾಕಿ ಸಲಹಿದ ತಂದೆ ತಾಯಿಗಳಿಗೆ ಅನ್ನ ಹಾಕುವ ಕೆಲಸವನ್ನು ತಂದೆ ತಾಯಿಗೆ ಅನ್ನಹಾಕುವ ಕೆಲಸ ಮಾಡಿ, ನಾಗರಿಕ ಸಮಾಜವು ಅಡ್ಡ ದಾರಿಗೆ ಹೋಗುತ್ತಿದ್ದು ಶಿಕ್ಷಣದ ಜೊತೆಗೆ ಸಂಸ್ಕಾರವಿತ ಶಿಕ್ಷಣ ನೀಡಿದಾಗ ಮಾತ್ರ ಸಮಾಜವನ್ನು ಉತ್ತಮ ಮಾರ್ಗದಲ್ಲಿ ಸಾಗಿಸಲು ಸಾಧ್ಯವಾಗುತ್ತದೆ ಸಂಸ್ಕಾರ ಇಲ್ಲದೆ ಯಾವುದನ್ನು ಸಹ ಸಾಧಿಸಲು ಸಾಧ್ಯವಿಲ್ಲ ಎಂದರು. ಕೆಪಿಸಿಸಿ ಉಪಾಧ್ಯಕ್ಷ ಮರುಳೀಧರ ಹಾಲಪ್ಪ ಮಾತನಾಡಿ, ಕುಂಚಟಿಗ ಸಮುದಾಯದ ಮಕ್ಕಳು ಛಲದಿಂದ ಮುಂದೆ ಬಂದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಮುಂದೆ ಸಾಗಿ ಉನ್ನತ ಸ್ಥಾನಮಾನ ಗಳಿಸಬೇಕು. ಗುಬ್ಬಿ ತಾಲೂಕಿನಲ್ಲಿ ಕುಂಚಿಟಿಗರ ಸಮುದಾಯ ಭವನ ವಾಗಲಿ, ಕಲ್ಯಾಣ ಮಂಟಪ ವಾಗಲಿ ಇಲ್ಲದಿರುವುದು ಬೇಸರ ಆಗುತ್ತದೆ. ಮುಂದಿನ ವರ್ಷದೊಳಗೆ ಉತ್ತಮವಾದ ಸಮುದಾಯ ಭವನ, ಮತ್ತು ಕಲ್ಯಾಣ ಮಂಟಪಗಳನ್ನು ನಿರ್ಮಾಣ ಮಾಡಲು ಮುಂದಾದರೆ ನನ್ನ ಸಹಕಾರವು ಇರುತ್ತದೆ ಎಂದರು.ಗೃಹಮಂತ್ರಿಗಳ ಕರ್ತವ್ಯಾಧಿಕಾರಿ ಡಾ.ನಾಗಣ್ಣ ಸಂಘದ ಅಧ್ಯಕ್ಷ ವೈ.ಜೆ. ಜಯಣ್ಣ, ಶಿರಾ ಮುಕುಂದಪ್ಪ, ಚೇಳೂರು ಆರ್.ಸಿ. ಯೋಗಾನಂದ್‌, ಹಿರಿಯೂರು ಶಿವಣ್ಣ, ಟಿ.ಮಂಜಣ್ಣ, ಬಿ.ಎಂ. ಜಿಲದೇಶ್‌, ಜೆ.ರಾಜು, ಮರಡಿರಂಗಪ್ಪ, ಎನ್.ಎಂ.ಲೋಕೇಶ್, ಅಗ್ನಿಶಾಮಕ ದಳದ ಪ್ರಮುಖ ಧರಣೇಶ್, ಗ್ರಾಪಂ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಸುಜಾತರಮೇಶ್, ಶಶಿಕಲಾಲಿಂಗರಾಜು, ಜೆ.ಜಿ.ಮಂಜುನಾಥ್, ಸಿಇಒ ಭವ್ಯ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಮನ ಸೆಳೆದ ಸಿತಾರ್-ವೇಣು ಜುಗಲ್‌ಬಂದಿ
ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ