ನಾಗದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

KannadaprabhaNewsNetwork |  
Published : Feb 26, 2025, 01:02 AM IST
ಶ್ರದ್ಧಾಭಕ್ತಿಯಿಂದ ಜರುಗಿದ ನಾಗದೇವರ ನೂತನ ಆಲಯ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವ | Kannada Prabha

ಸಾರಾಂಶ

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ನಾಗದೇವರ ನೂತನ ಆಲಯ ಮತ್ತು ಪುನರ್‌ ಪ್ರತಿಷ್ಠಾಪನಾ ಮಹೋತ್ಸವವು ನೆರವೇರಿತು.

ಮಡಿಕೇರಿ : ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ನಾಗದೇವರ ನೂತನ ಆಲಯ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಕ್ಷೇತ್ರ ತಂತ್ರಿಗಳಾದ ಕೆ.ಶ್ರೀಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ಉಡುಪಿಯ ಎ.ಸುಬ್ರಮಣ್ಯ ಮಧ್ಯಸ್ಥ ಅವರಿಂದ ನಾಗಪಾತ್ರಿ ನಾಗದರ್ಶನ ಸೇವೆ ನಡೆಯಿತು. ಆಶೀರ್ವಾದ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನದಾನ ನೆರವೇರಿತು. ದೇವಾಲಯದ ಮ್ಯಾನೇಜಿಂಗ್ ಟ್ರಸ್ಟ್ನ ಟ್ರಸ್ಟಿಗಳು ಹಾಗೂ ನಗರದ ವಿವಿಧೆಡೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

-----------------------------

ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಮಡಿಕೇರಿ : ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆಯುವ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆ.26 ರಂದು ಬೆಳಗ್ಗೆ 9.30 ಗಂಟೆಯಿಂದ 12 ಗಂಟೆವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ವಿಶೇಷ ಸೇವೆ ರುದ್ರಹೋಮ ಮತ್ತು ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಲಿದೆ. ಬಳಿಕ ವಿವಿಧ ಪೂಜೆ-ಅರ್ಚನೆಗಳು ನಡೆಯಲಿದೆ.ಈ ದಿನದಂದು ದೇವಾಲಯವು ರಾತ್ರಿ ಪೂರ್ತಿ ತೆರೆದಿರುತ್ತದೆ. ಭಕ್ತಾದಿಗಳು ದೇವಾಲಯದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಬಾಜನರಾಗುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.9902290302, 9845821566 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ತಿಳಿಸಿದ್ದಾರೆ.

-----------------------------

ಇಂದು ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮಮಡಿಕೇರಿ : ಭಾಗಮಂಡಲದ ಶ್ರೀ ಭಗಂಡೇಶ್ವರ–ತಲಕಾವೇರಿ ದೇವಾಲಯದ ರೂಡಿ ಸಂಪ್ರದಾಯದಂತೆ ಪ್ರತೀ ವರ್ಷ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಫೆಬ್ರವರಿ, 26 ರಂದು ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ ನಡೆಯಲಿದೆ.ಆದ್ದರಿಂದ ಭಕ್ತಾದಿಗಳು ಫೆ. 26 ರಂದು ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆಯುವ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಎನ್.ಜಿ ತಿಳಿಸಿದರು.

ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಫೆ.26 ರಂದು ಬೆಳಗ್ಗೆ 07 ಗಂಟೆಗೆ ಶತರುದ್ರಾಭಿಷೇಕ, ಬೆಳಗ್ಗೆ 9.30 ಕ್ಕೆ ರುದ್ರಹೋಮ, ಮಧ್ಯಾಹ್ನ 12 ಗಂಟೆಗೆ ರುದ್ರಹೋಮದ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ 6 ಗಂಟೆಗೆ ತಾಯಂಬಕ ಸೇವೆ, ಸಂಜೆ 06.30 ಕ್ಕೆ ಲಕ್ಷದೀಪೋತ್ಸವ. ಸಂಜೆ 06:30 ರಿಂದ ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ. ಸಂಜೆ 05:30 ರಿಂದ ಭಜನೆ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ 7.30 ಗಂಟೆಗೆ ಲಘು ಉಪಹಾರ. ರಾತ್ರಿ 10.30 ಕ್ಕೆ ದೇವರ ತ್ರಿವೇಣಿ ಸಂಗಮ ಬೇಟಿ, ದೇವರ ಕಟ್ಟೆಪೂಜೆ ಮತ್ತು ಬಾಣಬಿರುಸು ಕಾರ್ಯಕ್ರಮ. ರಾತ್ರಿ 11:00 ಗಂಟೆಗೆ ಯಕ್ಷ ಕಾವ್ಯ ತರಂಗಿಣಿ ಭಾಗವತ ದಿ|| ಚಂದಪ್ಪ ಪೂಜಾರಿ ಪ್ರತಿಷ್ಠಾನ (ರಿ) ದರ್ಬೆ ಬಂಟ್ವಾಳ ದಕ್ಷಿಣ ಕನ್ನಡ ಇವರಿಂದ ಸ್ವರ ಮಾಧುರಿ ಕಾವ್ಯ ಕನ್ನಿಕೆ ಬಿರುದಾಂಕಿತ ಸಂದ್ಯಾ ಪೂಜಾರಿ ದರ್ಬೆ ಇವರ ದಕ್ಷ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ-ಪ್ರಸಂಗ “ಹರಿ ಹರ ಸುತ ಶ್ರೀ ಧರ್ಮಶಾಸ್ತ” ನಡೆಯಲಿದೆ.

ಶ್ರೀ ತಲಕಾವೇರಿ ದೇವಾಲಯದಲ್ಲಿ ಫೆಬ್ರವರಿ, 26 ರಂದು ಬೆಳಗ್ಗೆ 9.30 ಗಂಟೆಗೆ ಶತರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ 7 ಗಂಟೆಗೆ ಏಕಾದಶರುದ್ರಾಭಿಷೇಕ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ