ಕುಣಿಗಲ್‌ ಮಾದರಿ ತಾಲೂಕು: ವಿರೋಧಿಗಳಿಗೆ ಕಾಂಗ್ರೆಸ್‌ನಿಂದ ತಿರುಗೇಟು

KannadaprabhaNewsNetwork | Published : Jan 23, 2024 1:47 AM

ಸಾರಾಂಶ

ಕುಣಿಗಲ್ ಮಾದರಿ ತಾಲೂಕು ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ತರುವ ಚಿಂತನೆಯನ್ನು ಸಂಸದ ಡಿ ಕೆ ಸುರೇಶ್ ಹಾಗೂ ಶಾಸಕ ಡಾಕ್ಟರ್ ರಂಗನಾಥ್ ಮಾಡಿದ್ದಾರೆ. ಈ ವಿಚಾರವಾಗಿ ಕೆಲವು ವಿಷಯಗಳನ್ನು ಸಾರ್ವಜನಿಕರಲ್ಲಿ ಚರ್ಚೆಗೆ ಬಿಟ್ಟಿದ್ದಾರೆ. ಯಾವುದೇ ನಿರ್ಧಾರವನ್ನು ಇನ್ನೂ ಅವರು ಕೈಗೊಂಡಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಹುಲಿಯೂರು ದುರ್ಗ ಪ್ರವಾಸಿ ಮಂದಿರದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,

ಮುಂದಿನ ದಿನಗಳಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ ಜನಪರವಾಗಿ ಹಾಗೂ ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವಂತಹ ಕೆಲಸಗಳನ್ನು ಮಾಡುವ ಚಿಂತನೆ ಇದೆ, ವಿರೋಧ ಪಕ್ಷದವರು ಅವರ ಅಭಿವೃದ್ಧಿಯನ್ನು ಸಹಿಸದೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್ ಮಾತನಾಡಿ, ವಿರೋಧ ಪಕ್ಷದ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಬಹುತೇಕ ಕಾಂಗ್ರೆಸ್ ಮುಖಂಡರು ಶಾಸಕ ಮತ್ತು ಸಂಸದರ ಪರವಾಗಿದ್ದೇವೆ. ತಾಲೂಕಿಗೆ ಶಾಸಕರು ಮತ್ತು ಸಂಸದರ ಪರಿಶ್ರಮದಿಂದ ಲಿಂಕ್ ಕೆನಾಲ್ ಯೋಜನೆ ಪ್ರಾರಂಭ ಆಗುತ್ತಿದೆ. ಈ ವಿಚಾರವಾಗಿ ಯಾರಿಗೂ ಅರಿವಿಲ್ಲದಂತೆ ಅವರ ಅಭಿವೃದ್ಧಿ ಸಹಿಸದೆ ಇವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಅಧ್ಯಕ್ಷ ಬಲರಾಮ ಮನ ಬಂದಂತೆ ಮಾತನಾಡಿರುವುದು ಖಂಡನೀಯ. ನಾವು ಯಾವುದೇ ರೀತಿ ಅವಹೇಳನಕಾರಿ ಮಾತನಾಡಲು ಇಚ್ಚಿಸುವುದಿಲ್ಲ ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಲ್ಲಾಭಕಾಷ್, ಜೆಸಿಪಿ ರಾಜಣ್ಣ, ಪುರಸಭಾ ಮಾಜಿ ಅಧ್ಯಕ್ಷ ನಾಗೇಂದ್ರ, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್, ರೆಹಮಾನ್ ಶರೀಫ್, ಝಬಿವುಲ್ಲಾ ಖಾನ್, ಕೋಘಟ್ಟ ರಾಜಣ್ಣ, ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

Share this article