ಕುಂಜಾಲು ಸ್ಟ್ರೈಕರ್ಸ್‌ಗೆ ಎಂಪಿಎಲ್ ಪ್ರಶಸ್ತಿ, ಫ್ರೆಂಡ್ಸ್ ಮಟಪಾಡಿಗೆ ರನ್ನರ್ಸ್ ಅಪ್‌ ಗೌರವ

KannadaprabhaNewsNetwork |  
Published : Apr 01, 2026, 02:30 AM IST
ಮಟಪಾಡಿ ಪ್ರೀಮಿಯರ್ ಲೀಗ್ - 2026  ಪ್ರಶಸ್ತಿ ಎತ್ತಿದ ಕುಂಜಾಲು ಸ್ಟ್ರೈಕರ್ಸ್‌ ಆಟಗಾರರು | Kannada Prabha

ಸಾರಾಂಶ

ಬ್ರಹ್ಮಾವರ: ಇಲ್ಲಿನ ಮಟಪಾಡಿ ಫ್ರೆಂಡ್ಸ್, ಮಟಪಾಡಿ ಯೂತ್ ಕ್ಲಬ್‌ ವತಿಯಿಂದ ಮಟಪಾಡಿ ಪ್ರೀಮಿಯರ್ ಲೀಗ್ (ಎಂಪಿಎಲ್ ) - 2026 ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು.

ಬ್ರಹ್ಮಾವರ: ಇಲ್ಲಿನ ಮಟಪಾಡಿ ಫ್ರೆಂಡ್ಸ್, ಮಟಪಾಡಿ ಯೂತ್ ಕ್ಲಬ್‌ ವತಿಯಿಂದ ಮಟಪಾಡಿ ಪ್ರೀಮಿಯರ್ ಲೀಗ್ (ಎಂಪಿಎಲ್ ) - 2026 ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು. ಸ್ಥಳೀಯ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು ಕುಂಜಾಲು ಸ್ಟ್ರೈಕರ್ಸ್ ಚಾಂಪಿಯನ್ ಆಗಿ, ಪ್ರೆಂಡ್ಸ್ ಮಟಪಾಡಿ ರನ್ನರ್ಸ್ ಆಗಿ ಪ್ರಶಸ್ತಿ ಪಡೆದವು.

ಫೈನಲ್ ಪಂದ್ಯ ಶ್ರೇಷ್ಠರಾಗಿ ರಂಜಿತ್ (ಕುಂಜಾಲು ಸ್ಟ್ರೈಕರ್ಸ್), ಸರಣಿ ಶ್ರೇಷ್ಠರಾಗಿ ಪ್ರದೀಪ್ ಶೆಟ್ಟಿ (ಫ್ರೆಂಡ್ಸ್ ಮಟಪಾಡಿ), ಉತ್ತಮ ದಾಂಡಿಗರಾಗಿ ವಿಶಾಲ್ ನಾಯಕ್ (ಫ್ರೆಂಡ್ಸ್ ಮಟಪಾಡಿ), ಉತ್ತಮ ಎಸೆತಗಾರರಾಗಿ ಗುರುರಾಜ್ (ಕುಂಜಾಲು ಸ್ಟ್ರೈಕರ್ಸ್), ಉತ್ತಮ ಕ್ಷೇತ್ರ ರಕ್ಷಕರಾಗಿ ರಾಘವೇಂದ್ರ (ಫ್ರೆಂಡ್ಸ್ ಮಟಪಾಡಿ) ಬಹುಮಾನ ಗಳಿಸಿದರು.

ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಟಪಾಡಿ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯಅರ್ಚಕ ಸುಬ್ರಹ್ಮಣ್ಯ ಉಂಗ್ರಪಳ್ಳಿ, ಸ್ಥಳೀಯ ಗಣ್ಯರಾದ ಸ್ಟಾಲಿನ್ ಸಿಕ್ವೇರಾ ಮತ್ತು ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.ಸಮಾರೋಪ ಸಮಾರಂಭದಲ್ಲಿ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ ಗೌರವಾಧ್ಯಕ್ಷ ಚಂದ್ರಶೇಖರ ಕಲ್ಕೂರ, ರೋಟರಿ ರೊಯಲ್ ಅಧ್ಯಕ್ಷ ಚಂದ್ರಶೇಖರ ನಾಯರಿ, ಮಟಪಾಡಿ ಶಾಲಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಮಾಜಿ ತಾಪಂ ಸದಸ್ಯೆ ಉಷಾ ಕೃಷ್ಣ ಪೂಜಾರಿ, ಉದ್ಯಮಿಗಳಾದ ಅಲ್ತಾಫ್ ಅಹಮ್ಮದ್, ಮಿಥುನ್ ಅಮೀನ್, ಉದಯ್ ಚಿರಾಗ್, ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷ ವಿಜಯ್ ನಾಯಕ್, ಕ್ಲಬ್ಬಿನ ಗೌರವ ಸಲಹೆಗಾರರಾದ ಶರೋನ್ ಸಿಕ್ವೇರಾ ಇದ್ದರು.ಕ್ಲಬ್ಬಿನ ಅಧ್ಯಕ್ಷ ಚೇತನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜೊಯ್ಸನ್ ಬಾಂಜ್, ಕೋಶಾಧಿಕಾರಿ ಚೇತನ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಅಂಕುಶ್ ನಾಯಕ್ ಉಪಸ್ಥಿತರಿದ್ದರು. ಶರೋನ್ ಮತ್ತು ಅಂಕುಶ್ ಸ್ವಾಗತಿಸಿ, ಚೇತನ್ ಆಚಾರ್ಯ ಮತ್ತು ಸುಬ್ರಹ್ಮಣ್ಯ ವಂದಿಸಿದರು, ಶರತ್ ಮತ್ತು ಸುಬ್ರಹ್ಮಣ್ಯ ಆಚಾರ್ಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

(ಮಸ್ಟ್) ಸಮರ್ಪಕ ಅನಿಲ ವಿತರಣೆ: ಸಂಸದ ಕೋಟ ಸೂಚನೆ
ಮನೆಯಿಂದ 15 ಲಕ್ಷ ರು. ಮೌಲ್ಯದ ಚಿನ್ನ ಕಳ್ಳತನ: ಆರೋಪಿ ಸೆರೆ